ನರಗಳ ಬಲಹೀನತೆ

ನರಗಳ ಬಲಹೀನತೆ ಹಾಗು ನರಗಳ ಸೆಳೆತ ಸಮಸ್ಯೆಗೆ ಇಲ್ಲಿದೆ ಮನೆಮದ್ದು,ನೋಡಿ…

Health/ಆರೋಗ್ಯ Home Kannada News/ಸುದ್ದಿಗಳು

ನರಗಳಲ್ಲಿ ಬಲಹೀನತೆ, ಕೈ ಕಾಲುಗಳ ಸೆಳೆತ, ಪಾದ ಉರಿಯುವಿಕೆಗೆ, ಮೂಳೆ ಹಾಗೂ ಕೀಲುಗಳಿಗೆ ಸಂಬಂಧಿಸಿದ ನೋವುಗಳಿದ್ದರೆ ಈ ಮನೆಮದ್ದನ್ನು ಮಾಡಿಕೊಳ್ಳಬಹುದು. ಯಾವುದೇ ಮಾತ್ರೆಗಳನ್ನು ತೆಗೆದುಕೊಂಡರೂ ಸಹಿತ ಅದರಿಂದ ಬೇಗನೆ ಗುಣವಾಗುವುದಿಲ್ಲ ನಮ್ಮಲ್ಲಿರುವ ಶಕ್ತಿಯಿಂದಲೇ ನಾವು ಇಂತಹ ಕಾಯಿಲೆಗಳನ್ನು ಎದುರಿಸುವಂತಹ ಶಕ್ತಿಯನ್ನು ನಾವು ಪಡೆದುಕೊಳ್ಳಬೇಕು. ಅದಕ್ಕಾಗಿ ಮನೆಯಲ್ಲಿಯೇ ಹಲವು ಮದ್ದುಗಳನ್ನು ಮಾಡುವುದರಿಂದ ಇದರಿಂದ ಮುಕ್ತಿ ಪಡೆಯಬಹುದು.

ಒಂದು ಪಾತ್ರೆಯಲ್ಲಿ ಒಂದು ಲೋಟ ಹಾಲನ್ನು ಹಾಕಿ ಕಾಯಿಸಲು ಇಡಬೇಕು. ಹಾಲಿನಲ್ಲಿ ಕ್ಯಾಲ್ಸಿಯಂ ಅಂಶ ತುಂಬಾನೆ ಇರುತ್ತದೆ ಹಾಗಾಗಿ ನಾವು ಹಾಲನ್ನು ರಾತ್ರಿ ಕುಡಿದು ಮಲಗಿದರೆ ನಮ್ಮ ದೇಹದಲ್ಲಿ ಕೆಲವೊಂದು ಅಂಗಗಳನ್ನು ಗುಣಪಡಿಸುವ ಶಕ್ತಿ ಹಾಲಿನಲ್ಲಿ ಇದೆ. ನಂತರ ಹಾಲಿಗೆ ನಾವು ಒಂದು ಚಮಚ ಸೋಂಪು ಕಾಳು, ಎರಡು ಏಲಕ್ಕಿಯನ್ನು ಸಣ್ಣಗೆ ಪುಡಿ ಮಾಡಿ ಹಾಕಬೇಕು. ಇದು ನಮ್ಮ ದೇಹವನ್ನು ತಂಪಾಗಿ ಇಡುವಂತೆ ಮಾಡುತ್ತದೆ.

ಏಲಕ್ಕಿ ಮತ್ತು ಸೋಂಪು ಕಾಳು ತಿನ್ನುವುದರಿಂದ ರಕ್ತ ಶುದ್ಧವಾಗುತ್ತದೆ, ಮತ್ತು ಹೆಚ್ಚು ಬಿ.ಪಿ ಇರುವವರು ಕೂಡ ಇದನ್ನು ಹಾಲಿನೊಂದಿಗೆ ಸೇರಿಸಿ ಕುಡಿಯಬಹುದು. ಹಾಲು ಕುದಿ ಬಂದ ಮೇಲೆ ಒಂದೂವರೆ ಇಂಚು ದಾಲ್ಚಿನಿಯನ್ನು ಹಾಕಬೇಕು ಇದನ್ನು ಪುಡಿ ಮಾಡುವ ಅವಶ್ಯಕತೆ ಇಲ್ಲ. ದಾಲ್ಚಿನಿ ಎಷ್ಟು ಒಳ್ಳೆಯದು ಅಂದರೆ ಯಾರಿಗೆ ನರಗಳಲ್ಲಿ ರಕ್ತ ಸಂಚಲನ ಸರಿಯಾಗಿ ಆಗುವುದಿಲ್ಲವೊ ಅಂತವರು ದಾಲ್ಚಿನಿ ಸೇವಿಸುವುದರಿಂದ ತುಂಬಾನೆ ಒಳ್ಳೆಯದು.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಂತರ ಶುಂಠಿಯನ್ನು ಚೆನ್ನಾಗಿ ಜಜ್ಜಿ ಹಾಕಿ ಒಂದು ಚಮಚದಿಂದ ಕೃೆಯಾಡಿಸಬೇಕು. ಹಾಲನ್ನು ಚೆನ್ನಾಗಿ ಕುದಿ ಬರುವವರೆಗೂ ಕುದಿಸಬೇಕು ಇದು ತಣ್ಣಗಾದ ಮೇಲೆ ಕಲ್ಲು ಸಕ್ಕರೆ ಹಾಕಬೇಕು. ಬೆಳಿಗ್ಗೆ ಎದ್ದ ತಕ್ಷಣ ಹಾಗೂ ರಾತ್ರಿ ಮಲಗುವ ವೇಳೆ ಈ ಹಾಲನ್ನು ಕುಡಿಯಬಹುದು. ವಾರದಲ್ಲಿ ಮೂರರಿಂದ ನಾಲ್ಕು ಸಲ ಈ ಹಾಲನ್ನು ಕುಡಿದರೆ ಒಳ್ಳೆಯದು.

ವಿಳ್ಯೆದೆಲೆ ತುಂಬಾ ಕಾಯಿಲೆಗಳಿಗೆ ಮನೆ ಮದ್ದಾಗಿ ಉಪಯೋಗಿಸುತ್ತಾರೆ ಅದರಲ್ಲಿ ನರಗಳ ಸಮಸ್ಯೆಗೆ ಸಹ ನೋಡಬಹುದು. ಸರ್ವ ರೋಗಕ್ಕೂ ಮನೆ ಮದ್ದು ವೀಳ್ಯದೆಲೆ ಎನ್ನುವ ಮಾತಿದೆ. ವೀಳ್ಯದೆಲೆಯಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಿರುವುದರಿಂದ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಜತೆಗೆ ಗ್ಯಾಸ್ಟ್ರಿಕ್‌ ಟ್ರಬಲ್‌ ಅನ್ನು ಬಹುಮಟ್ಟಿಗೆ ಗುಣಪಡಿಸುತ್ತದೆ, ಇದರಿಂದ ನರಮಂಡಲ ವೃದ್ಧಿಗೊಳ್ಳುತ್ತದೆ. ಒಂದು ವೀಳ್ಯದೆಲೆ, ಸ್ವಲ್ಪ ಕರೀ ತುಳಸಿ ಹಾಗೂ ಒಂದು ಲವಂಗವನ್ನು ಅರೆದು ದಿನಕ್ಕೆ ಎರಡು ಬಾರಿ ಸೇವಿಸಿದರೆ ಕೆಮ್ಮು ಕಡಿಮೆಯಾಗುವುದು.

ವೀಳ್ಯದೆಲೆಗೆ ಹರಳೆಣ್ಣೆಯನ್ನು ಹಚ್ಚಿ ಅದನ್ನು ಬಿಸಿ ಮಾಡಿ ಹೊಟ್ಟೆ ಉಬ್ಬರದಿಂದ ನರಳುತ್ತಿರುವ ಮಗುವಿನ ಹೊಟ್ಟೆಗೆ ಕಾವು ಕೊಟ್ಟರೆ ನೋವು ಮಾಯವಾಗಿ ಮೂತ್ರ ಸುಲಭವಾಗಿ ಆಗುವುದು. ಹಾಗಲಕಾಯಿ ಬೀಜವು ಸಹ ನರಗಳ ಬಂದಂತೆ ಉತ್ತಮ ಔಷಧಿಯಾಗಿದೆ. ಹಾಗಲಕಾಯಿ ಬೀಜ ಹಾಗೂ ವಿಳ್ಯದೆಲೆಯನ್ನು ನೀರಿನಲ್ಲಿ ಕುದಿಸಿ ಒಂದು ವಾರ ಮೂರು ಬಾರಿ ದಿನಕ್ಕೆ ತೆಗೆದುಕೊಂಡರೆ ನರಗಳ ಸೆಳೆತ, ನೋವು ಮತ್ತು ಜೋಮು ಶಮನವಾಗುತ್ತದೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...