ಪ್ರಭುದಾಸ್ ರಾಜಸ್ಥಾನದ ಜೋಧಪುರ ಜಿಲ್ಲೆಯ ಖಾಕೊಂಡ ಗ್ರಾಮದವನು. ಪ್ರತಿಷ್ಠಿತ ಎಲ್ ಆ್ಯಂಡ್ ಟಿ ಕಂಪನಿಯಲ್ಲಿ ಕೆಲಸ ಮಾಡುವ ಪ್ರಭುದಾಸ್ 2018 ರಲ್ಲಿ ರಮ್ಯ ಎಂಬುವವರನ್ನು ಪ್ರೀತಿಸಿ ಮದುವೆಯಾದರು. ಅವರಿಗಘ ಒಂದು ಗಂಡು ಮಗು ಕೂಡ ಇದೆ. ಇಬ್ಬರ ನಡುವೆ ಏನೂ ಮನಸ್ತಾಪ ಇರಲಿಲ್ಲ, ಎಲ್ಲ ಚೆನ್ನಾಗಿಯೇ ಇತ್ತು. ಆದರೆ ಕಳೆದ ವಾರ ನಡೆದ ಘಟನೆ ಅವರ ಜೀವನಕ್ಕೆ ಏಕದಂ ತಿರುವು ಕೊಟ್ಟಿತು.

ಏಪ್ರೀಲ್ ಎರಡರಂದು ಹೈದರಾಬಾದ್ ನಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ದಂಪತಿ ಮಗುವಿನ ಸಮೇತ ಬಂದಿದ್ದರು. ನಂತರ ಎರಡು ದಿನ ಇದ್ದು ನಾಲ್ಕನೇ ತಾರಿಖಿನಂದು ತಮ್ಮೂರು ರಾಜಸ್ಥಾನಕ್ಕೆ ಮರಳಲು ಸಿಕಂದರಾಬಾದ್ ರೆಲ್ವೆ ನಿಲ್ದಾಣಕ್ಕೆ ಬರುತ್ತಾರೆ. ಅಲ್ಲಿ ಟಿಕೇಟ್ ಪಡೆದು ಟ್ರೈನಿಗಾಗಿ ಕಾಯುತ್ತಿರುವಾಗ, ನೀರು ತರಲೆಂದು ರಮ್ಯ ಮಗನ ಸಮೇತ ಹೋಗುತ್ತಾಳೆ.

ಇತ್ತ ಅವರಿಗಾಗಿ ಕಾದು ಕುಳಿತ ಪತಿರಾಯ ಕಾದು ಕಾದು ಸುಸ್ತಾಗುತ್ತಾನೆ. ಎಷ್ಟೊತ್ತಾದರೂ ಪತ್ನಿ – ಮಗ ಮರಳಿ ಬರುವುದೇ ಇಲ್ಲ. ಕಾಯುತ್ತಿದ್ದ ಟ್ರೈನ್ ಬಂದು ಹೊರಟು ಹೋಯಿತು, ಆದರೂ ಅವರು ಮರಳಲಿಲ್ಲ. ನಂತರ ಪ್ರಭುದಾಸ್ ಹತ್ತಿರದ ಗೋಪಾಲಪುರಂ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸುತ್ತಾರೆ.

ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ನಿಲ್ದಾಣದ ಸುತ್ತಮುತ್ತ ವಿಚಾರಿಸಿದರು, ಸುಳಿವು ಸಿಗಲಿಲ್ಲ. ನಂತರ ಹತ್ತಿವಿರುವ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆಗಿಳಿದರು. ಆಗಲೇ ಪೊಲೀಸರಿಗೆ ಹಾಗೂ ಪತಿರಾಯನಿಗೆ ಶಾಕ್ ಆಗಿದ್ದು!

ನೀರು ತರವುದಾಗಿ ಬಂದಿದ್ದ ರಮ್ಯ ಮಗನೊಂದಿಗೆ ನಿಲ್ದಾಣದ ಹೊರಗೆ ಬಂದು, ಬೇರೊಬ್ಬನೊಂದಿಗೆ ಬೈಕ್ ಏರಿ ಪರಾರಿಯಾಗಿದ್ದಳು! ಹೋಗುವಾಗ ತನ್ನ ಬಳಿಯೇ ಇಟ್ಟುಕೊಂಡಿದ್ದ 20 ಸಾವಿರ ರೂ. ಹಾಗೂ ಚಿನ್ನಾಭರಣವನ್ನು ರಮ್ಯ ತಗೆದುಕೊಂಡೇ ಹೋಗಿದ್ದಳು.

ಆಕೆ ತನ್ನ ಪ್ರೇಮಿಯೊಂದಿಗೆ ಬೈಕ್ ಹತ್ತಿ ಹೋಗುವುದು ಅತ್ಯಂತ ಸ್ಪಷ್ಟವಾಗಿ ದಾಖಲಾಗಿತ್ತು, ಬೈಕ್ ನಂಬರ್ ಮೂಲಕ ಅವರನ್ನು ಪತ್ತೆ ಹಚ್ಚುವ ಕೆಲಸದಲ್ಲಿ ಪೊಲೀಸರು ನಿರತರಾಗಿದ್ದಾರೆ. ಪ್ರೀತಿಸಿ ಮದುವೆಯಾಗಿ ಎರಡು ವರ್ಷ ಕಳೆಯುವ ಮೊದಲೇ, ಏನೂ ಸಮಸ್ಯೆ ಇಲ್ಲದಿದ್ದರೂ ಅದ್ಯಾಕೆ ಅವಳು ಪತಿಗೆ ಕೈಕೊಟ್ಟಳೋ ದೇವರೇ ಬಲ್ಲ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •