ಕೊರೊನಾ ಎರಡನೇ ಅಲೆ ಅಂತೂ ಜನರನ್ನು ಹಿಂಡಿ ಹಿಪ್ಪೆ ಮಾಡಿದೆ. ಇಡೀ ಊರಿಗೆ ಊರನ್ನೇ ಸ್ಮಶಾನವನ್ನಾಗಿ ಮಾಡಿಬಿಟ್ಟಿದೆ. ಹಿಂದೆಂದೂ ಕಂಡು ಕೇಳರಿಯದಂಥ ಘಟನೆಗಳಿಗೆ ನಿತ್ಯ ನಾವು ನೀವು ಸಾಕ್ಷಿಯಾಗ್ತಾ ಇದ್ದೇವೆ.

ಕಳೆದ ವರ್ಷ ಕೊರೊನಾದಿಂದ ಹಲವು ಮದುವೆಗಳು ಮುಂದೂಡಿದ್ದರು, ಕೆಲವರು ವೀಡಿಯೋ ಕಾಲ್ ಗಳ ಮೂಲಕ ಮದುವೆಯಾಗಿದ್ದರು. ಇನ್ನು ಕಳೆದ ವಾರ  ಕೇರಳದಲ್ಲಿ ವರನಿಗೆ ಕೋವಿಡ್ ಪಾಸಿಟಿವ್ ಇದ್ದು ಆಸ್ಪತ್ರೆಯಲ್ಲಿ ದಾಖಲಾಗಿದ್ದಾಲೇ ಪಿಪಿಇ ಕಿಟ್ ಧರಿಸಿ ವಧು ಆಸ್ಪತ್ರೆಯಲ್ಲೇ ಮದುವೆಯಾಗಿದ್ದಳು. ಈ ವಿಡಿಯೋ ಎಲ್ಲೆಡೆ ವಯರಲ್ ಆಗಿತ್ತು. ಇದೀಗ ಮಧ್ಯ ಪ್ರದೇಶದ ಸರದಿ.

ಮಧ್ಯ ಪ್ರದೇಶದ ರಟ್ಲಂ ಎಂಬಲ್ಲಿ ಜೋಡಿಯೊಂದು ಪಿಪಿಇ ಕಿಟ್‌ ಧರಿಸಿ ಹಸೆಮಣೆ ಏರಿ ಮಹಾಮಾರಿಯ ನಡುವೆಯೂ ನವ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಜೋಡಿಗೆ ಕೆಲ ತಿಂಗಳ ಹಿಂದೆಯೇ ಮದುವೆ ನಿಶ್ಚಯವಾಗಿತ್ತು. ಈ ಮಧ್ಯೆ ಮದುವೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ವರನಿಗೆ ಕೋವಿಡ್‌ ಪಾಸಿಟಿವ್ ಬಂದಿದೆ. ಹೀಗಾಗಿ ಇಬ್ಬರೂ ವಧು-ವರರು ಪಿಪಿಇ ಕಿಟ್‌ ಧರಿಸಿ ಹಸೆಮಣೆ ಏರಿದರು.

ಪುರೋಹಿತರೂ ಕೂಡ ಪಿಪಿಇ ಕಿಟ್‌ ಧರಿಸಿ ಪೌರೋಹಿತ್ಯ ನೆರವೇರಿಸಿದರು. ಈ ವಿಶೇಷ ಮದುವೆಗೆ ಸ್ಥಳಿಯಾಡಳಿತ ಒಪ್ಪಿಗೆ ನೀಡಿತ್ತು. ಪೊಲೀಸ್‌ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ವಿವಾಹ ಮಹೋತ್ಸವ ನೆರವೇರಿತು. ಇದೀಗ ವಿಡಿಯೋ ಎಲ್ಲೆಲ್ಲೂ ವೈರಲ್ ಆಗಿದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •