ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಯು ಉಗ್ರರನ್ನು ಬೆನ್ನಟ್ಟುತ್ತಿದ್ದು, ಒಂದರ ನಂತರ ಒಂದರಂತೆ ಸರಣಿ ಎನ್‌ಕೌಂಟರ್‌ಗಳನ್ನು ನಡೆಸುವ ಮೂಲಕ ಉಗ್ರ ಸಂಹಾರವನ್ನು ಮಾಡುತ್ತಿದೆ.

ಕಳೆದ ಆರು ತಿಂಗಳೊಳಗೆ ನಡೆಸಿರುವ ಕಾರ್ಯಾಚರಣೆಗಳಲ್ಲಿ 93 ಉಗ್ರರನ್ನು ಹತ್ಯೆಗೈಯಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿದೆ. ಉಗ್ರರು ಬೇರೂರಿರುವ ಸ್ಥಳಗಳನ್ನೇ ಟಾರ್ಗೆಟ್ ಮಾಡುತ್ತಿರುವ ಭದ್ರತಾ ಪಡೆ ನಿರಂತರ ಕಾರ್ಯಾಚರಣೆಯ ಮೂಲಕ ಉಗ್ರರ ನಿಗ್ರಹ ಮಾಡಲು ಸಂಕಲ್ಪ ಮಾಡಿದೆ. ಇದಕ್ಕಾಗಿ ಹಲವು ತಂತ್ರಗಳನ್ನು ಹೆಣೆದಿದೆ.

ಪ್ರಸಕ್ತ ಸಾಲಿನಲ್ಲಿ ಇನ್ನೇನು ಆರು ತಿಂಗಳೊಳಗೆ ಜಮ್ಮ ಮತ್ತು ಕಾಶ್ಮೀರದಲ್ಲಿ 93 ಭಯೋತ್ಪಾದಕರನ್ನು ನಿರ್ಮೂಲನೆ ಮಾಡುವಲ್ಲಿ ಭದ್ರತಾ ಪಡೆ ಯಶಸ್ವಿಯಾಗಿದೆ. ಇದು ಭಾರತೀಯ ಸೇನೆಗೆ ದೊರಕಿದ ಅತಿ ದೊಡ್ಡ ಯಶಸ್ಸು ಆಗಿದೆ.

ಈ ಪೈಕಿ ಕಳೆದ 24 ತಾಸಿನಗಲ್ಲೇ ಕಣಿವೆ ರಾಜ್ಯದಲ್ಲಿ ಒಂಬತ್ತು ಉಗ್ರರನ್ನು ನಿಗ್ರಹಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಗೆ ಯಾವುದೇ ನಷ್ಟ ಸಂಭವಿಸಿಲ್ಲ ಎಂಬುದು ಗಮನಾರ್ಹವೆನಿಸುತ್ತದೆ.Modernisation of Indian Army well on course: General MM Naravane - The Economic Times

ಇನ್ನು ಮುಂದೆಯು ಉಗ್ರರ ವಿರುದ್ಧದ ಕಾರ್ಯಾಚರಣೆ ಮುಂದುವರಿಯಲಿದೆ. ಇದರಲ್ಲಿ ಗಡಿಯಲ್ಲಿ ಉಗ್ರರು ಒಳ ನುಸುಳದಂತೆ ಕಟ್ಟೆಚ್ಚರ ವಹಿಸಲಾಗುತ್ತಿದ್ದು, ತಕ್ಕ ಪ್ರತ್ಯತ್ತರ ನೀಡಲಾಗುತ್ತಿದೆ.

ಉಗ್ರರ ಜಾಲವನ್ನು ಬುಡ ಸಮೇತ ಕಿತ್ತೊಗೆಯಲು ಭದ್ರತಾ ಪಡೆ ಹೊಸ ರಣತಂತ್ರ ರೂಪಿಸಿದೆ. ಇದರ ಭಾಗವಾಗಿ ಉಗ್ರರು ಅಡಗಿ ಕುಳಿತಿರುವ ತಾಣಗಳಿಗೆ ಎನ್‌ಕೌಂಟರ್ ನಡೆಸಲಾಗುತ್ತಿದೆ. ಮೊದಲು ಉಗ್ರರ ಬೆಂಬಲಿಗರನ್ನು ಪತ್ತೆ ಹಚ್ಚಿ ದಾಳಿ ನಡೆಸಲಾಗುತ್ತಿದೆ.

ಹತ್ಯೆಗೈಯಲ್ಪಟ್ಟ ಉಗ್ರರಲ್ಲಿ ಉನ್ನತ ನಾಯಕ ರಿಯಾಜ್ ನಾಯ್ಕೂ, ಜುನೈದ್ ಸೆಹ್ರೈ ಸೇರಿದಂತೆ ಪಾಕಿಸ್ತಾನ ಬೆಂಬಲಿತ ಜೈಷೆ ಮೊಹಮ್ಮದ್ ಹಾಗೂ ಲಷ್ಕರ್ ಎ ತೋಯ್ಬಾ ಭಯೋತ್ಪಾದಕ ಸಂಘಟನೆಯ ಅನೇಕ ಉಗ್ರರು ಸೇರಿದ್ದಾರೆ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!