ಪ್ರತಿಯಬ್ಬ ಮನುಷ್ಯ ಜೀವಿಯ ಜೀವನದಲ್ಲಿಯೂ ಕೂಡ ಈ ವಿಧಿ ಎಂಬುದು ತನ್ನ ಕೆಲಸವನ್ನು ತೋರುತ್ತದೆ. ಆ ವ್ಯಕ್ತಿ ಕಡು ಬಡವನೇ ಆಗಿರಲಿ, ಶ್ರೀಮಂತನೇ ಯಾಗಿರಲಿ ಅಥವಾ ಸಿನಿಮಾ ಕಲಾವಿದರೇ ಆಗಿರಲಿ ಎಲ್ಲರನ್ನು ಕೂಡ ಈ ವಿಧಿ ಸರಿಸಮಾನವಾಗಿ ನೋಡುತ್ತದೆ. ಕೆಲವೊಮ್ಮೆ ಈ ವಿಧಿಯ ಆಟಕ್ಕೆ ಸಿಲುಕಿದರೇ ಅದರಿಂದ ಮೇಲೆಳು ಹರಸಾಹಸ ಪಡ ಬೇಕಾಗುತ್ತದೆ. ಇನ್ನು ಕೆಲವರು ಕೆಟ್ಟದಾರಿಯನ್ನೆ ಹಿಡಿದು ಬಿಡುತ್ತಾರೆ. ಆದರೆ ಇಲ್ಲೊಬ್ಬರು ನಟಿ ಆ ವಿಧಿಯ ಆಟಕ್ಕೆ ಸಿಲುಕಿದ್ದು, ಕೆಟ್ಟ ದಾರಿಯಲ್ಲಿ ನಡೆಯದೇ ಜೀವನದಲ್ಲಿ ಎದುರಾದ ಕಷ್ಟಗಳನ್ನು ಎದುರಿಸಿ ಕಷ್ಟಪಟ್ಟು ದುಡಿದು ಇದೀಗ ನೆಮ್ಮದಯ ಜೀವನ ನಡೆಸುತ್ತಿದ್ದಾರೆ.

Waffle

ಕೇರಳ ಮೂಲದ ಮಲೆಯಾಳಂ ಚಿತ್ರರಂಗದಲ್ಲಿ ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರಲ್ಲೂ ಅಭಿನಯಿಸಿದ್ದ ಇವರು ಮಲಯಾಳಂ ನ ಸೂಪರ್ ಸ್ಟಾರ್ ಮುಮ್ಮಟ್ಟಿ ಅವರ ಜೊತೆಗೆ ಕೂಡ ನಟಿಸಿದ್ದಾರೆ. ಆ ನಟಿ ಬೇರ್ಯಾರು ಅಲ್ಲಾ ಕವಿತಾ ಲಕ್ಷ್ಮಿ ಅವರು. ಕಳೆದ ೫ ವರುಷಗಳ ಹಿಂದೆ ಮಲಯಾಳಂ ನಲ್ಲಿ ಈ ನಟಿ ಬಾರಿ ಬೇಡಿಕೆಯಲ್ಲಿ ಇದ್ದತಂವರು. ಸಿನಿಮಾಗಳಲ್ಲಿ ಅವಕಾಶಗಳು ಇದ್ದ ಕಾರಣ ಧೈರ್ಯವಾಗಿ ಮಗನನ್ನು ವಿದ್ಯಾಭ್ಯಾಸಕ್ಕೆಂದು ಇಂಗ್ಲೆಂಡಿಗೆ ಕಳುಹಿಸಿದ್ದರು. ಆದರೆ ದಿನಗಳುರುಳಿದಂತೆ ಅವಕಾಶಗಳು ಕಡಿಮೆಯಾಗುತ್ತ ಬಂದಿದ್ದು, ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿ ಬಿಡುತ್ತಾರೆ.

Waffle

ಇತ್ತ ಮಗನಿಗೆ ವಿದ್ಯಾಭ್ಯಾಸಕ್ಕಾಗಿ ಪ್ರತಿ ತಿಂಗಳು ಹಣವನ್ನು ಕಳಿಸಬೇಕು, ಆದರೆ ಈಕೆಯ ಕೈಯಲ್ಲಿ ಬಿಡಿಗಾಸು ಕೂಡ ಇರಲಿಲ್ಲ. ಇಂತಹ ಸಂದರ್ಭದಲ್ಲಿ ಪರಿಸ್ಥಿತಿಯಲ್ಲಿ ಕೆಲವು ಜನರು ಬೇರೆದಾರಿಯಿಲ್ಲದೆ ಕೆಟ್ಟ ದಾರಿ ಹಿಡಿಯುವುದುಂಟು. ಆದರೆ ಈ ನಟಿ ಮಾಡಿದ್ದನ್ನು ಕೇಳಿದರೆ ನಿಜಕ್ಕೂ ಆಶ್ಚರ್ಯವಾಗುತ್ತೀರ.. ಕವಿತಾ ಲಕ್ಷ್ಮಿ ಅವರ ವಯಕ್ತಿಕ ಜೀವನ ನೋಡುವುದಾದರೆ ಆಕೆ ಸಿನಿಮಾದಲ್ಲಿ ಚಾಲ್ತಿಯಲ್ಲಿದ್ದ ಸಂದರ್ಭದಲ್ಲೇ ತನ್ನ ಪತಿಯಿಂದ ಬೇರ್ಪಟ್ಟಿರುತ್ತಾರೆ.

ಇನ್ನು ಇವರಿಗೆ ಒಬ್ಬಳು ಮಗಳು ಕೂಡ ಇದ್ದು, ತನಗೆ ಒದಗಿದ ಆರ್ಥಿಕ ಸಂಕಷ್ಟದಿಂದ ಹೊರಬರಲುಒಂದು ಆಲೋಚನೆಯನ್ನು ಮಾಡುತ್ತಾರೆ. ಜೀವನ ಸಂಕಷ್ಟದಲ್ಲಿದ್ದ ಕಾರಣ ದುಡಿಯೋಕೆ ಯಾವ ಕೆಲಸವಾದರೇನು ಎಂದು ಯೋಚಿಸಿ ಹೈವೆಯ ಪಕ್ಕದಲ್ಲಿ ಒಂದು ಚಿಕ್ಕ ದೋಸೆ ಅಂಗಡಿಯನ್ನು ಆರಂಭಿಸಿ ಮಧ್ಯರಾತ್ರಿಯವರೆಗೂ ದೋಸೆಯನ್ನೂ ಮಾರಲು ಮುಂದಾಗುತ್ತಾರೆ.

Kavita Lakshmi

ಬೆಳಗಿನ ಸಮಯದಲ್ಲಿ ಎರಡು ಮಾಲಯಾಳಂ ಕಿರುತೆರೆಯ ಎರಡು ದಾರವಾಹಿಗಳಲ್ಲಿ ನಟಿಸುವ ಅವರು ರಾತ್ರಿ ವೇಳೆಯಲ್ಲಿ ತನ್ನ ಕೈಯಾರೆ ದೋಸೆಯನ್ನು ಮಾಡುವ ಕ್ಯಾಂಟಿಮ್ ಒಪನ್ ಮಾಡುತಚತಾರೆ. ಇವರ ಈ ಕೆಲಸಕ್ಕೆ ಮಗಳು ಸಹ ಅವರಿಗೆ ಸಹಾಯ ಮಾಡುತ್ತಿದ್ದು ಬಂದ ಹಣದಲ್ಲಿ ಪ್ರತಿತಿಂಗಳು ಮಗನ ವಿದ್ಯಾಭ್ಯಾಸಕ್ಕೆ ಕಳುಹಿಸುತ್ತಿದ್ದಾರೆ. ಈ ಕುರಿತು ಮಾಧ್ಯಮದ ಸಂದರ್ಶನದಲ್ಲಿ ಮಾತನಾಡಿರುವ ಕವಿತಾ ಲಕ್ಷ್ಮಿ ಅವರು,

Kavita Lakshmi

ಮನೆಯಲ್ಲಿ ಹೇಗೆ ತನ್ನ ಮಕ್ಕಳಿಗೆ ಅಡುಗೆಯನ್ನು ಮಾಡುತ್ತಾರೋ ಹಾಗೆಯೇ ತಮ್ಮ ಕ್ಯಾಂಟೀನ್ ನಲ್ಲಿ ಕೂಡಾ ಅಡುಗೆಯನ್ನು ಮಾಡುತ್ತಾರಂತೆ.ಹಾಗೂ ಈ ಕೆಲಸ ನನಗೆ ತುಂಬಾ ಸಂತೋಷ ನೀಡಿದೆ ಎಂದು ಕವಿತಾ ಲಕ್ಷ್ಮಿ ಅವರು ಹೇಳಿದ್ದು, ಈಗಾಗಲೇ ಎರಡು ವರ್ಷಗಳಿಂದ ಈ ಕೆಲಸವನ್ನು ಆರಂಭಿಸಿದ್ದು ಮಗನಿಗೆ ಹಣವನ್ನು ಸಹ ಕಳಿಸುತ್ತಿದ್ದಾರೆ. ಈಗಾಗಲೇಮಗನ ವಿದ್ಯಾಭ್ಯಾಸ ಕೊನೆಯ ಹಂತದಲ್ಲಿದ್ದು, ತಾನೊಬ್ಬ ನಟಿ ಎಂಬುದನ್ನು ಪಕ್ಕಕ್ಕಿಟ್ಟು ಹಗಲು ರಾತ್ರಿ ಎನ್ನದೇ ಕಷ್ಟಪಟ್ಟು ಮಗನನ್ನು ಓದಿಸುತ್ತಿರುವ ಕವಿತಾ ಲಕ್ಷ್ಮಿಯವರ ಕೆಲಸಕ್ಕೆ ಸಾಮಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •