ಎಂಬತ್ತರ ದಶಕದ ಕನ್ನಡದ ಮೈಕಲ್ ಜಾಕ್ಸನ್ ಎಂದೇ ಪ್ರಸಿದ್ಧಿ ಪಡೆದ ಅಂದಿನ ಯುವ ನಟ ವಿನೋದ್ ರಾಜ್ ಅವರನ್ನ ಎಲ್ಲರೂ ಇಂದಿಗೂ ಹೆಚ್ಚು ಇಷ್ಟಪಡುತ್ತಾರೆ. ಮತ್ತು ಅವರ ಸರಳತೆ ಎಲ್ಲರಿಗೂ ಕೂಡ ಅಚ್ಚುಮೆಚ್ಚು, ಅಂದಹಾಗೆ ಇಂದಿನ ಈ ಲೇಖನದಲ್ಲಿ ನಾವು ನಿಮಗೆ ವಿನೋದ್ ರಾಜ್ ಅವರ ಬಗ್ಗೆ ಒಂದು ವಿಚಾರವನ್ನು ಹೇಳಲು ಬಂದಿದ್ದೇವೆ. ಇದೀಗ ಮಾಧ್ಯಮ ಮೂಲಕ ತಿಳಿದು ಬಂದಿರುವ ಹಾಗೆ, 2021ರಲ್ಲಿ ಗುಡ್ ನ್ಯೂಸ್ ಕೊಟ್ಟಿದ್ದಾರೆ ನಟ ವಿನೋದ್ ಎಂದು ತಿಳಿದುಬಂದಿದೆ.

ಹೌದು ವಿನೋದ್ ರಾಜ್ ಒಬ್ಬರು ಒಳ್ಳೆಯ ಡ್ಯಾನ್ಸರ್, ಆದರೆ ಇವರಿಗೆ ಇಂದಿಗೂ ಕೂಡ ಕನ್ನಡದ ಡ್ಯಾನ್ಸ್ ಪ್ರೋಗ್ರಾಮ್ ಗಳಲ್ಲಿ ಜಡ್ಜ್ ಆಗಿ ಆಯ್ಕೆ ಮಾಡುತ್ತಿಲ್ಲ ಎನ್ನುವುದು ಅಭಿಮಾನಿಗಳ ಬೇಸರ. ಹಾಗೆ ಡ್ಯಾನ್ಸ್ ಬಗ್ಗೆ ಗಂಧಗಾಳಿ ಗೊತ್ತಿಲ್ಲದವರನ್ನು ಪ್ರೋಗ್ರಾಮ್ ಗೆ ಕರೆ ತಂದು ನೃತ್ಯದ ಕಾರ್ಯಕ್ರಮದಲ್ಲಿ ಕೂರಿಸುವ ಬದಲು, ನಟ ವಿನೋದ್ ರಾಜ್ ಅವರನ್ನು ನಿಮ್ಮ ಶೋಗೆ ಕರೆತನ್ನಿ  ಎಂದು ಇಂದಿಗೂ ಕೂಡ ಸಾಕಷ್ಟು ಅಭಿಮಾನಿಗಳು ಹಾಗೂ ಕನ್ನಡದ ಜನತೆ ಆಗ್ರಹಿಸುತ್ತಿದ್ದಾರೆ.

ಇದರ ನಡುವೆ ಎಸ್ ಕೆ ಬ್ಯಾನರಡಿಯಲಿ ಬರುತ್ತಿರುವ ‘ಮುಖವಾಡ’ ಎನ್ನುವ ಹೊಸ ಸಿನಿಮಾ ತಂಡವು ನಟ ವಿನೋದ್ ರಾಜ್ ಅವರನ್ನು ತಮ್ಮ ಸಿನಿಮಾದಲ್ಲಿ ಅಭಿನಯಿಸಲಿಕ್ಕೆ ಅವಕಾಶ ಕೊಟ್ಟಿದೆಯಂತೆ. ಹಾಗೂ ತಮ್ಮ ಸಿನಿಮಾದಲ್ಲಿ ಅಭಿನಯ ಮಾಡಿ ಸರ್ ಎಂದು ಮುಖವಾಡ ಚಿತ್ರ ತಂಡದವರು ಮನವಿಯನ್ನು ಕೂಡ ಮಾಡಿದ್ದಾರೆ ಎಂದು ತಿಳಿದುಬಂದಿದೆ.ಈ ಖುಷಿಯ ವಿಚಾರ ವಿನೋದ್ ರಾಜ್ ತಾಯಿ ಲೀಲಾವತಿಯವರಿಗೆ ಸಂತಸದ ವಿಷಯವಾಗಿದೆಯಂತೆ. ಹಾಗೆ ತಮ್ಮ ಆಸೆ ಈಡೇರಿದಂತೆ ಆಯಿತು ಎಂದು ಹೇಳಿಕೊಂಡಿದ್ದಾರೆ.

ವಿನೋದ್ ರಾಜ್ ಅವರು ಮುಖವಾಡ ಸಿನಿಮಾದಲ್ಲಿ ಅಭಿನಯ ಮಾಡುತ್ತಾರೋ ಇಲ್ಲವೋ ಎಂಬುದು ಇನ್ನು ತಿಳಿದು ಬಂದಿಲ್ಲ, ಆದ್ರೆ ಚಿತ್ರತಂಡ ಹೇಳುವ ಹಾಗೆ ನಟ ವಿನೋದ್ ರಾಜ್ ಅವರ ಉತ್ತರವನ್ನು ಕಾಯುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •