ಕನ್ನಡದ ಚಿತ್ರರಂಗದಲ್ಲಿ ಹಲವಾರು ನಟಿಯರು ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಒಂದಾನೊಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟಿಯರ ಸಾಲಿನಲ್ಲಿ ನಟಿ ಲೀಲಾವತಿ ಅವರ ಹೆಸರು ಕೂಡ ಕೇಳಿಬರುತ್ತದೆ. ನಟಿ ಲೀಲಾವತಿ ಅವರು ನಾಯಕ ನಟಿಯಾಗಿ ಹಾಗೂ ನಂತರದ ದಿನಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ಕೀರ್ತಿಯನ್ನು ಗಳಿಸಿಕೊಂಡವರು. ನಟಿ ಲೀಲಾವತಿ ಅವರು ಕನ್ನಡದ ಅನೇಕ ಪಾತ್ರಗಳಲ್ಲಿ ವಿವಿಧ ಸಿನಿಮಾಗಳಲ್ಲಿ ತಮ್ಮದೇ ಆದ ಕೌಶಲ್ಯವನ್ನು ಪ್ರತಿಬಿಂಬಿಸಿದ್ದಾರೆ.

ಇನ್ನು ಅವರ ಮಗ ವಿನೋದ್ ರಾಜ್ ಅವರು ಕೂಡ 80ರ ದಶಕದಲ್ಲಿ ಖ್ಯಾತ ನಟ. ಅಂದಿನ ದಿನಗಳಲ್ಲಿ ತಮ್ಮ ನೃತ್ಯದ ಮೂಲಕ ಗಮನ ಸೆಳೆದಿದ್ದ ವಿನೋದರಾಜ್ ಅವರು ಕನ್ನಡದ ಮೈಕಲ್ ಜಾಕ್ಸನ್ ಎಂದೇ ಪ್ರಖ್ಯಾತ ಪಡೆದಿದ್ದರು. ಅಂತಹ ಖ್ಯಾತಿ ಪಡೆದಿದ್ದ ವಿನೋದರಾಜ್ ಅವರು ಅನಾರೋಗ್ಯದ ಕಾರಣದಿಂದಲೋ ಅಥವಾ ಚಿತ್ರರಂಗದ ದೂರ ತಳ್ಳುವಿಕೆಯ ಕಾರಣದಿಂದಲೋ ಗೊತ್ತಿಲ್ಲ ಆದರೆ ಅವರು ಚಿತ್ರರಂಗದಿಂದ ದೂರ ಉಳಿದರು. ಇನ್ನು ಇದೀಗ ಅವರಿಗೆ 53 ವರ್ಷ ವಯಸ್ಸಾಗಿದೆ. ತಮ್ಮ ತಾಯಿಯೊಂದಿಗೆ ಜೀವನ ನಡೆಸುತ್ತಿದ್ದು ಇದೀಗ ಸುದ್ದಿಯೊಂದನ್ನು ನೀಡಿದ್ದಾರೆ. ಹೌದು ವಿನೋದ್ ರಾಜ್ ಅವರ ಈ ಸಿಹಿ ಸುದ್ದಿ ಎಂದು ಅವರ ತಾಯಿ ಲೀಲಾವತಿ ಕೂಡ ತುಂಬಾ ಖುಷಿಯಲ್ಲಿದ್ದಾರೆ.

ಹೌದು ವಿನೋದ್ ರಾಜ್ ಅವರು ಎಂಬತ್ತರ ದಶಕದಲ್ಲಿ ಖ್ಯಾತ ನಟನಾಗಿ ಗುರುತಿಸಿಕೊಂಡಿದ್ದರು. ತಮ್ಮ ನೃತ್ಯದ ಮೂಲಕ ಹಲವಾರು ಅಭಿಮಾನಿಗಳನ್ನು ಕೂಡ ಗಳಿಸಿಕೊಂಡಿದ್ದರು. ಆದರೆ ನಂತರದ ವರ್ಷಗಳಲ್ಲಿ ಕಾರಣಾಂತರಗಳಿಂದ ಅವರು ಸಿನಿಮಾರಂಗದಿಂದ ದೂರ ಉಳಿದರು. ಆದರೆ ಎಂಬತ್ತರ ದಶಕದಲ್ಲಿ ತಮ್ಮ ನೃತ್ಯದ ಮೂಲಕ ಗಮನ ಸೆಳೆದಿದ್ದ ವಿನೋದ್ ರಾಜ್ ಅವರು ದ್ವಾರಕೀಶ್ ನಿರ್ದೇಶನದ ಮೊದಲ ಸಿನಿಮಾದಲ್ಲಿ ನಾಯಕನಟನಾಗಿ ಅಭಿನಯಿಸುವುದರ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದರು. ಆದರೆ ಅವರಿಗೆ ಅವಕಾಶಗಳು ಸರಿಯಾಗಿ ಸಿಗಲಿಲ್ಲ. ಆದ್ದರಿಂದ ವರ್ಷಗಳು ಕಳೆದಂತೆ ಅವರು ಸಿನಿಮಾರಂಗದಿಂದ ದೂರವಾಗುತ್ತ ಬಂದರು.

ಇನ್ನು ವಿನೋದ್ ರಾಜ್ ಅವರ ತಾಯಿ ಲೀಲಾವತಿ ಅವರ ಆಸೆಯನ್ನು ಈಡೇರಿಸಲು ಮುಂದಾಗಿದ್ದಾರೆ. ಹೌದು ನಟಿ ಲೀಲಾವತಿಯವರ ಕೊನೆಯ ಆಸೆ ತಾವು ಸಾಯುವುದಕ್ಕಿಂತ ಮುಂಚೆ ನನ್ನ ಆಸೆಯನ್ನು ಈಡೇರಿಸುವ ಎಂದು ಹೇಳಿದ್ದರಂತೆ. ಇದೀಗ ತಾಯಿಯ ಆಸೆಯನ್ನು ಈಡೇರಿಸಲು ವಿನೋದ್ ರಾಜ್ ಅವರು ಮುಂದಾಗಿದ್ದಾರೆ. ಹಾಗಾದರೆ ಲೀಲಾವತಿಯವರ ಆಸೆ ಏನಾಗಿತ್ತು? ವಿನೋದ್ ರಾಜ್ ಏನು ಮಾಡಲಿದ್ದಾರೆ? ಎಂಬುವುದನ್ನು ಇಲ್ಲಿ ತಿಳಿಯೋಣ ಬನ್ನಿ.

ಹೌದು ವಿನೋದ್ ರಾಜ್ ಅವರು ತಮ್ಮ ತಾಯಿಯ ಆಸೆಯನ್ನು ಈಡೇರಿಸಲು 53ನೇ ವಯಸ್ಸಿನಲ್ಲಿ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ. ಹೌದು ವಿನೋದ್ ರಾಜ್ ಅವರು ಮುಖವಾಡ ಎಂಬ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ಎಸ್. ಕೆ. ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಒಳಗೊಂಡಿರುವ ಮುಖವಾಡ ಎಂಬ ಸಿನಿಮಾದಲ್ಲಿ ಒಂದು ಪಾತ್ರದಲ್ಲಿ ವಿನೋದ್ ರಾಜ್ ಅವರು ಕಾಣಿಸಿಕೊಳ್ಳಲಿದ್ದಾರೆ. ನಟಿ ಲೀಲಾವತಿ ಅವರ ಆಸೆ ಕೂಡ ವಿನೋದ ರಾಜ್ ಅವರು ತೆರೆ ಮೇಲೆ ಮತ್ತೆ ನಟಿಸಬೇಕು ಎಂಬುದು ಆಗಿತ್ತಂತೆ. ಇದೀಗ ವಿನೋದ್ ರಾಜ್ ಅವರು ತಮ್ಮ ತಾಯಿಯ ಆಸೆಯನ್ನು ಈಡೇರಿಸಿದ್ದಾರೆ. ಇನ್ನು ಈ ಸುದ್ದಿ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •