ಹೌದು ಹಾವೇರಿ ಜಿಲ್ಲೆ, ಹಾನಗಲ್ ತಾಲೂಕು ಬೈಚವಳ್ಳಿ ಎನ್ನುವ ಗ್ರಾಮದ ಗ್ರಾಮ ಪಂಚಾಯಿತಿಯಲ್ಲಿ ಸುಮಾರು 23 ವರ್ಷಗಳಿಂದ ಕಸ ಗುಡಿಸುತ್ತಾ, ಅಲ್ಲಿಯ ಸದಸ್ಯರಿಗೆ  ಟೀ ಕೊಡುತ್ತಾ, ಜಮಾನನ ಕೆಲಸ ಮಾಡುತ್ತಿರುವ ಈ ಬಸವರಾಜ್ ಎನ್ನುವ ವ್ಯಕ್ತಿ, ಇತ್ತೀಚೆಗಷ್ಟೇ ನಡೆದ ಗ್ರಾಮ ಪಂಚಾಯಿತಿ ಎಲೆಕ್ಷನ್ ನಲ್ಲಿ, ಇಡೀ ಊರಿನ ಗ್ರಾಮಸ್ಥರ ಒತ್ತಾಯದ ಮೇರೆಗ,  ತನ್ನ ಪತ್ನಿಯನ್ನೇ ಎಲೆಕ್ಷನ್ನಲ್ಲಿ ನಿಲ್ಲಿಸಿದ್ದರು. ಬಳಿಕ ಊರಿನ ಗ್ರಾಮಸ್ಥರು ಈತನ ಹೆಂಡತಿಯನ್ನೇ ಗೆಲ್ಲಿಸಿದರು. ತದನಂತರ ಹಿಂದುಳಿದ ವರ್ಗದ ಸೀಟಲ್ಲಿ ಅಧ್ಯಕ್ಷ ಸ್ಥಾನ ಕೂಡ ಈತನ ಹೆಂಡತಿಗೆ ದೊರೆಯಿತು.  

ಆದರೆ ಇಂದಿಗೂ ಕೂಡ ಊರಿನ ಗ್ರಾಮಸ್ಥರು, ಗ್ರಾಮದ ಅಧಿಕಾರಿಗಳು, ಪಂಚಾಯ್ತಿ ಸದಸ್ಯರು, ಹಾಗೂ ಅಧ್ಯಕ್ಷ, ಉಪಾಧ್ಯಕ್ಷರು ಹೇಳಿದ ಹಾಗೆ ಎಲ್ಲಾ ಕೆಲಸವನ್ನು ತಪ್ಪದೇ  ಮಾಡಿಕೊಂಡು ಹೋಗುತ್ತಿದ್ದಾರೆ ಈ ಬಸವರಾಜ್ ಅವ್ರು ಹೌದು ಸ್ನೇಹಿತರೆ ಇಂದಿನ ಕಾಲದಲ್ಲಿ ಸ್ವಲ್ಪ ಅಧಿಕಾರ ಬಂದರೆ ಸಾಕು,ಅವರ ಸೊಕ್ಕು, ಗರ್ವ, ನಡೆದುಕೊಳ್ಳುವ ರೀತಿ ನಾವು ನಮ್ಮ ಕಣ್ಣಿನಲ್ಲಿ ನೋಡಲಾಗದು. ಅಂತಹ  ಕಾಲದಲ್ಲಿ, ಇಂತಹವರು ಕೂಡ ನಮ್ಮ ಇದ್ದಾರೆ ಎಂದರೆ ಇಂತಹ ವ್ಯಕ್ತಿಗಳನ್ನು ನಾವು ಮೆಚ್ಚಿಕೊಳ್ಳಲೇಬೇಕು.  

ಬಸವರಾಜ್ ಅವರ ಈ ನಿಷ್ಠಯ ಸೇವೆ ಎಲ್ಲರಿಗೂ ಮಾದರಿಯಾಗುತ್ತದೆ. ಹಾಗಾಗಿ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಇಲ್ಲಿರುವ ಸಂಕ್ಷಿಪ್ತವಾದ ವಿಡಿಯೋ ಒಮ್ಮೆ ನೋಡಿ ನಿಮಗೆ ಎಲ್ಲಾ ತಿಳಿಯುತ್ತದೆ. ಮತ್ತು ಈತನ ಕಾರ್ಯ ಮತ್ತು ಈತನ ಹೆಂಡತಿಯ ಅಧ್ಯಕ್ಷ ಸ್ಥಾನದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ, ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •