ನಮಸ್ತೆ ಸ್ನೇಹಿತರೆ, ಮಂಡ್ಯ ಜಿಲ್ಲೆ, ಕೆಆರ್ ಪೇಟೆ ತಾಲ್ಲೂಕಿನ ಬೂಕನ ಕೆರೆಯಲ್ಲಿ ಪೆಬ್ರವರಿ 27, 1943 ರಲ್ಲಿ ಜನಿಸಿದ ಯಡಿಯೂರಪ್ಪ ಅವರು ತಮ್ಮ ನಾಲ್ಕನೇ ವಯಸ್ಸಿಗೆ ತಾಯಿಯನ್ನ ಕಳೆದುಕೊಂಡರು. ಅಣ್ಣ ಅಕ್ಕಂದಿರ ಪ್ರೀತಿಯಲ್ಲಿ ಬೆಳೆದು, ಮಂಡ್ಯದಲ್ಲಿ ಪಿಯುಸಿ ಮುಗಿಸಿದ ಯಡಿಯೂರಪ್ಪ 1965 ರಲ್ಲಿ ಸೋಷಿಯಲ್ ವೆಲ್ ಪೆರ್ ಡಿಪಾರ್ಟ್‌ಮೆಂಟ್ ನಲ್ಲಿ ಕ್ಲರ್ಕ್ ಆಗಿ ಕೆಲಸಕ್ಕೆ ಸೇರಿಕೊಂಡರು.. ನಂತರ ಕೆಲಸವನ್ನು ಬಿಟ್ಟು ಶಿಕಾರಿಪುರಕ್ಕೆ ಹೋದ ಯಡಿಯೂರಪ್ಪ ಅವರು.. ಶಿಕಾರಿ ಪುರದ ಶಂಕರ ರೈಸ್ ಮಿಲ್ ನಲ್ಲಿ ಕ್ಲರ್ಕ್ ಆಗಿ ಕೆಲಸಕ್ಕೆ ಸೇರಿಕೊಂಡರು.

village

ತಮ್ಮ ಶ್ರದ್ಧೆ, ನಿಷ್ಠೆ ಹಾಗು ಪ್ರಾಮಾಣಿಕ ಕೆಲಸದಿಂದ ಗುರುತಿಸಿಕೊಂಡ ಯಡಿಯೂರಪ್ಪ ಅವರು ನಂತರ 1967 ರಲ್ಲಿ ರೈಸ್ ಮಿಲ್ ಓನರ್ ಮಗಳಾದ ಮೈತ್ರ ದೇವಿ ಅವರನ್ನ ಮದುವೆಯಾದರು. ಮದುವೆಯಾದ ನಂತರ ಶಿವಮೊಗ್ಗದಲ್ಲಿ ಹಾರ್ಡ್ವೇರ್ ಶಾಪ್ ಓಪನ್ ಮಾಡಿದ ಯಡಿಯೂರಪ್ಪ ಹಗಲಿರುಳು ದುಡಿದರು.‌. 1972 ರಲ್ಲಿ ಮೊದಲ ಬಾರಿಗೆ ಶಿಕಾರಿಪುರ ಮುನಿಸಿಪಾಲಿಟಿ ಮೆಂಬರ್ ಆಗಿ.. ನಂತರ ಅದರ ಅಧ್ಯಕ್ಷರಾಗಿ, ಹಂತ ಹಂತವಾಗಿ ಬೆಳೆದರು. ಭೂಕನ ಕೆರೆಯಲ್ಲಿರುವ ಈ ಮನೆ ನೋಡಿ.. ಇದು ಯಡಿಯೂರಪ್ಪ ಅವರ ಮನೆ. ಇದೇ ಮನೆಯಲ್ಲಿ ಯಡಿಯೂರಪ್ಪ ಅವರು ಹುಟ್ಟಿ ಬೆಳೆದದ್ದು..

village

ಹಳೆಯದಾಗಿದ್ದ ಮನೆಯನ್ನು ನಂತರ ನವೀಕರಿಸಿದ ಯಡಿಯೂರಪ್ಪ ಇಲ್ಲಿಗೆ ಬೇಟಿ ಕೊಟ್ಟರೆ ಮನೆಯಲ್ಲಿ ನೆಲದ ಮೇಲೆ ಕೂತು ಊಟ ಮಾಡ್ತಾರೆ. ತಾನು ರಾಜ್ಯದ ಮುಖ್ಯಮಂತ್ರಿಯಾದರು.. ತನ್ನ ಹಳ್ಳಿಯ ಸ್ನೇಹಿತರನ್ನ ಗುರುತು ಹಿಡಿದು ಅವರ ಹೆಸರಿನಿಂದ ಕರೆಯುವ ಯಡಿಯೂರಪ್ಪ ಅವರನ್ನ ಕಂಡರೆ ಈ ಹಳ್ಳಿಯ ಜನಕ್ಕೆ ಎಲ್ಲಿಲ್ಲದ ಪ್ರೀತಿ ಮಮಕಾರ‌. ಅಕ್ಟೊಬರ್ 15, 2004 ರಂದು ಯಡಿಯೂರಪ್ಪನವರ ಪತ್ನಿ ಮೈತ್ರಾ ದೇವಿಯವರು ಮನೆಯ ಮುಂದೆ ಇದ್ದ 8 ಅಡಿ ವಾಟರ್ ಸಂಪ್ ಹೊಳಗೆ ಆಕಸ್ಮಿಕವಾಗಿ ಬಿ’ದ್ದು ನಿಧನರಾದರು.

village

ಯಡಿಯೂರಪ್ಪನವರು ಈ ಹಂತಕ್ಕೆ ಬೆಳೆಯಲು ಅವರ ಪತ್ನಿ ಮೈತ್ರಾ ದೇವಿ ಅವರ ಪಾತ್ರ ಬಹುಮುಖ್ಯವಾದದ್ದು.. ರಾಜಕೀಯ ಅಂದರೆ ವಿವಾದಗಳು ಸರ್ವೇ ಸಾಮಾನ್ಯ. ಅದೆಲ್ಲದನ್ನ ಮೀರಿ ತಮ್ಮ ಪರಿಶ್ರಮ, ವಾಕ್ ಚಾತುರ್ಯ, ಬುದ್ದಿವಂತಿಕೆಯಿಂದ ಇವತ್ತು ಯಡಿಯೂರಪ್ಪ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ.. ನೇರ ನಿಷ್ಠುರ, ನುಡಿದಂತೆ ನಡೆಯುವ ಯಡಿಯೂರಪ್ಪ ಅವರು ಕರ್ನಾಟಕ ರಾಜಕೀಯ ಚರಿತ್ರೆಯಲ್ಲಿ ಅಪರೂಪದ ನಾಯಕ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •