ವಿಜಯಲಕ್ಷ್ಮಿ ದರ್ಶನ್ ಅವರು ಕೆಲ ದಿನಗಳ ಹಿಂದಷ್ಟೇ ರೈತರಿಗೆ ನೆರವಾಗುವ ಸಲುವಾಗಿ ಮೈ ಫ್ರೆಶ್ ಬ್ಯಾಸ್ಕೆಟ್ ಎಂಬ ಆನ್ಲೈನ್ ಅಪ್ಲಿಕೇಶನ್ ಒಂದನ್ನು ತೆರೆದು ರೈತರು ಬೆಳೆದ ಹಣ್ಣ ತರಕಾರಿಗಳು ಗ್ರಾಹಕರಿಗೆ ನೇರವಾಗಿ ತಲುಪಲು ನೆರವಾಗಿದ್ದರು.. ವಿಜಯಲಕ್ಷ್ಮಿ ದರ್ಶನ್ ಅವರ ಈ ಕೆಲಸವನ್ನು ಗುರುತಿಸಿ ಅವರಿಗೆ ಸಂಸ್ಥೆಯೊಂದು ಉದಯೋನ್ಮುಕ ಮಹಿಳಾ ಉದ್ಯಮಿ ಪ್ರಶಸ್ತಿ ನೀಡಿ ಗೌರವಿಸಿತ್ತು‌.. ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಇರುವ ವಿಜಯಲಕ್ಷ್ಮಿ ದರ್ಶನ್ ಅವರು ಈ ವಿಚಾರವನ್ನು ಸ್ನೇಹಿತರೊಂದಿಗೆ ಹಂಚಿಕೊಂಡು ಸಂತೋಷ ವ್ಯಕ್ತಪಡಿಸಿದ್ದರು..

ಇನ್ನು ಸದಾ ಮಗನ ಜೊತೆ ಸಮಯ ಕಳೆಯುವ ವಿಜಯಲಕ್ಷ್ಮಿ ಅವರಿಗೆ ಪ್ರತಿ ವಾರಾಂತ್ಯದಲ್ಲಿ ಮಗನನ್ನು ಮೈಸೂರಿನ ಫಾರ್ಮ್ ಹೌಸ್ ಗೆ ಕರೆದುಕೊಂಡು ಬಂದು ಮಗನಿಗೆ ಇಷ್ಟವಾದ ಹಾರ್ಸ್ ರೈಡ್ ಮಾಡಿಸಿ ಮೈಸೂರಿ‌ನಲ್ಲಿಯೇ ಉಳಿದು ನಂತರ ಬೆಂಗಳೂರಿಗೆ ತೆರಳುವ ಅಭ್ಯಾಸವಿದೆ‌‌..

ವಿಜಯಲಕ್ಷ್ಮ- ದರ್ಶನ್

ಇನ್ನು ಆಯುಧ ಪೂಜಾ ಸಮಯದಲ್ಲಿ ಮೈಸೂರಿಗೆ ಆಗಮಿಸಿರುವ ವಿಜಯಲಕ್ಷ್ಮಿ ಅವರು ಮೈಸೂರಿನಲ್ಲಿಯೇ ಹಬ್ಬವನ್ನು ಆಚರಿಸಿ ಹೊಸದೊಂದು ಕೆಲಸಕ್ಕೆ ಕೈ ಹಾಕಿದ್ದಾರೆ.. ಹೌದು ಕೊರೊನಾ ಸಮಯದಲ್ಲಿ ಲಾಕ್ ಡೌನ್ ಆದಾಗ ದರ್ಶನ್ ಅವರು ಸಂಪೂರ್ಣವಾಗಿ ಮೈಸೂರಿನಲ್ಲಿಯೇ ಸಮಯ ಕಳೆದಿದ್ದರು.. ಸಿನಿಮಾ ಕೆಲಸ ಶುರುವಾಗುವವರೆಗೂ ಮೈಸೂರಿನಲ್ಲಿಯೇ ಉಳಿದಿದ್ದ ದರ್ಶನ್ ಅವರು ಫಾರ್ಮ್ ಹೌಸ್ ನಲ್ಲಿ ಕೆಲ ತಿಂಗಳ ಹಿಂದಷ್ಟೇ ಹೊಸ ಟ್ರ್ಯಾಕ್ಟರ್ ಒಂದನ್ನು ಕೊಂಡು ಕೃಷಿ ಚಟುವಟಿಕೆಯನ್ನು ಆರಂಭಿಸಿದ್ದರು..

ಇದೀಗ ವಿಜಯಲಕ್ಷ್ಮಿ ದರ್ಶನ್ ಅವರು ಪತಿಗೆ ಸಾಥ್ ನೀಡಿದ್ದು ತಾವು ಸಹ ಕೃಷಿ ಚಟಿವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.. ಹೌದು ಅದಾಗಲೇ ರೈತರಿಗೆ ಅನುಕೂಲವಾಗುವ ಸಲುವಾಗಿ ಆನ್ಲೈನ್ ಅಪ್ಲಿಕೇಶನ್ ತೆರೆದಿರುವ ವಿಜಯಲಕ್ಷ್ಮಿ ಅವರು ಖುದ್ದು ನಿಂತು ಕೃಷಿ ಮಾಡಿಸಿದರೆ ಇನ್ನಷ್ಟು ಕೃಷಿಯ ಬಗ್ಗೆ ಅನುಭವ ಸಿಗಬಹುದೆಂದು ಇದೀಗ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ..ತಾವಷ್ಟೇ ಅಲ್ಲದೇ ಮಗನಿಗೂ ಸಹ ಕೃಷಿ ಚಟುವಟಿಕೆಗಳ ಬಗ್ಗೆ ತಿಳುವಳಿಕೆ ನೀಡುತ್ತಿರುವುದು ಮೆಚ್ಚುವಂತ ವಿಚಾರ..

ಇನ್ನು ಮೈಸೂರಿಗೆ ಬಂದರೆ ಮಗನ ಜೊತೆ ತಾವೂ ಸಹ ಹಾರ್ಸ್ ರೈಡ್ ಮಾಡುವ ಅಭ್ಯಾಸ ವಿಜಯಲಕ್ಷ್ಮಿ ಅವರದ್ದು.. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹಾರ್ಸ್ ರೈಡ್ ಮಾಡುವ ಫೋಟೋ ಒಂದನ್ನು ಹಂಚಿಕೊಂಡಿರುವ ವಿಜಯಲಕ್ಷ್ಮಿ ದರ್ಶನ್ ಅವರು ಮನಸ್ದಿಗೆ ಇಷ್ಟವಾಗುವ ಕೆಲಸ ಯಾವುದಾದರೂ ಅದನ್ನು ಬಿಡದೇ ಮಾಡಬೇಕು.. ಅದು ನಮ್ಮನ್ನು ದೂರ ತಳ್ಳಿದರೂ ನಾವು ಬಿಗಿಯಾಗಿ ಅದನ್ನೇ ಹಿಡಿಯಬೇಕು ಎಂದು ಬರೆದು ಪೋಸ್ಟ್ ಮಾಡಿದ್ದಾರೆ.. ದರ್ಶನ್ ಅವರಂತೆಯೇ ವಿಜಯಲಕ್ಷ್ಮಿ ಅವರಿಗೂ ಸಹ ಪ್ರಾಣಿ ಪ್ರೀತಿ ಇದ್ದು ಇದೀಗ ಕೃಷಿಯಲ್ಲಿಯೂ ಸಹ ತೊಡಗಿಸಿಕೊಂಡಿರುವುದಕ್ಕೆ ಸ್ನೇಹಿತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.. ಇನ್ನು ಡಿ ಬಾಸ್ ಅಭಿಮಾನಿಗಳು ವಿಜಯಲಕ್ಷ್ಮಿ ದರ್ಶನ್ ಅವರಿಗೆ ಕಮೆಂಟ್ ಮೂಲಕ ಶುಭ ಕೋರಿದ್ದಾರೆ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •