ಇತ್ತೀಚೆಗಷ್ಟೇ ಬಿಡುಗಡೆಯಾಗಿ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿರುವ ನಟ ಅಕ್ಷಯ್​ ಕುಮಾರ್​ ಅಭಿನಯದ ‘ಮಿಷನ್​ ಮಂಗಲ್​’ ಚಿತ್ರದಲ್ಲಿ ಅಮೋಘ ಅಭಿನಯದ ಮೂಲಕ ಮತ್ತೆ ಮುನ್ನೆಲೆಗೆ ಬಂದಿರುವ ನಟಿ ವಿದ್ಯಾ ಬಾಲನ್​ ಅವರು ತಾವು ಸುದೀರ್ಘ ಸಿನಿ ಪಯಣದಲ್ಲಿ ಎದುರಿಸಿದ ಹಲವು ಸವಾಲುಗಳನ್ನು ಬಿಚ್ಚಿಟ್ಟಿದ್ದಾರೆ.

vidya

ವೆಬ್​ಸೈಟ್​ವೊಂದರ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿರುವ ವಿದ್ಯಾ, ಸ್ಟಾರ್​ ಪಟ್ಟ ಪಡೆಯಲು ತಾವು ಅನುಭವಿಸಿದ ಕಷ್ಟಗಳನ್ನು ಮೆಲುಕು ಹಾಕಿದ್ದಾರೆ. ಸಿನಿಮಾ ಇಂಡಸ್ಟ್ರಿಯಲ್ಲಿ ಪೆಡಂಭೂತವಾಗಿರುವ ಕಾಸ್ಟಿಂಗ್​ ಕೌಚ್​ ಬಗ್ಗೆಯೂ ಮಾತನಾಡಿದ್ದಾರೆ. ತಮ್ಮ ಸಿನಿ ಬದುಕಿನಲ್ಲಿ ಉತ್ತುಂಗಕ್ಕೇರಲು ಹಲವು ಚಿತ್ರಗಳನ್ನು ನಿರಾಕರಿಸಿದ ಬಗ್ಗೆಯೂ ತಿಳಿಸಿದ್ದಾರೆ. ನೋಡಲು ಸುಂದರವಾಗಿಲ್ಲ ಎಂದು ಹೇಳಿ ಪ್ರಾದೇಶಿಕ ಸಿನಿಮಾ ಒಂದರಿಂದ ತಿರಸ್ಕೃತಗೊಳಿಸಿದರು.

ಇದರಿಂದ ಆಘಾತಕ್ಕೆ ಒಳಗಾದ ನಾನು ಸುಮಾರು ಒಂದು ತಿಂಗಳು ಕಾಲ ಕನ್ನಡಿಯಲ್ಲಿ ನನ್ನ ಮುಖವನ್ನು ನೋಡಿಕೊಳ್ಳಲು ಎದುರುತ್ತಿದ್ದೆ ಎಂದು ವಿವರಿಸಿದ್ದಾರೆ.ಕಾಸ್ಟಿಂಗ್​ ಕೌಚ್​ ಬಗ್ಗೆಯೂ ಮಾತನಾಡಿರುವ ವಿದ್ಯಾ, ಒಮ್ಮೆ ನಾನು ಚೆನ್ನೈನಲ್ಲಿದ್ದೆ. ಓರ್ವ ನಿರ್ದೇಶಕರು ನನ್ನನ್ನು ಭೇಟಿಯಾಗಲು ಬಂದರು. ಕಾಫಿಶಾಪ್​ನಲ್ಲಿ ಕುಳಿತು ಮಾತನಾಡೋಣ ಎಂದು ಹೇಳಿದೆ. ಆದರೆ, ನಿಮ್ಮ ರೂಮಿಗೆ ಹೋಗೋಣ ಎಂದರು. ಅಲ್ಲದೆ, ನನ್ನನ್ನು ಒತ್ತಾಯ ಮಾಡಿದರು.

 

vidya

ನಾನು ಬಾಗಿಲನ್ನು ತೆರೆದು ಹೊರಡುವಂತೆ ಹೇಳಿದೆ. ಐದೇ ನಿಮಿಷದಲ್ಲಿ ಅವರು ಅಲ್ಲಿಂದ ನಿರ್ಗಮಿಸಿದರು ಎಂದು ಹಿಂದಿನ ಕರಾಳತೆಯನ್ನು ಬಿಚ್ಚಿಟ್ಟರು. ನಾನು ನನ್ನ ರೀತಿಯಲ್ಲಿಯೇ ನನ್ನನ್ನು ಒಪ್ಪಿಕೊಳ್ಳುತ್ತೇನೆ ಮತ್ತು ಪ್ರೀತಿಸುತ್ತೇನೆ ಎಂದ ವಿದ್ಯಾ, ಕೆಟ್ಟ ಸನ್ನಿವೇಶಗಳಿಂದ ಜೀವನದಲ್ಲಿ ಹೇಗೆ ಮುನ್ನೆಡೆಯುತ್ತಾರೆ ಎಂಬುದಕ್ಕೆ ಇದು ಒಂದು ಸಾಕ್ಷಿಯಾಗಿದೆ ಎಂದು ತಿಳಿಸಿದರು.

ಮತ್ತಷ್ಟು ಇಂಟರೆಸ್ಟಿಂಗ್ ಸ್ಟೋರಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ಇದರ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •