ಹದಿಹರಿಯದ ಹುಡುಗರಿಂದ ಹಿಡದು ವಯಸ್ಸಾದ ಮುದುಕರ ವರೆಗೂ ಈ ದುಂಡು ಮುಖದ ಚೆಲುವಯನ್ನು ನೋಡಿದರೆ ಏತಕೇ.. ಭೊಗಸೆ ತುಂಬ ಆಸೆ ನೀಡುವೆ ಎಂದು ಹೇಳುತ್ತಾರೆ. ಪಡ್ಡೆ ಹುಡುಗರ ಹಾಟ್ ಫೇವರೇಟ್ ಕೂಡ ಇವರೇ, ಚಿತ್ರರಂಗದ ಭರವಸೆಯ ನಾಯಕ ನಟಿಯೂ ಇವರೇ. ಆ ನಟಿ ಬೇರ್ಯಾರು ಅಲ್ಲ ಕನ್ನಡ ಚಿತ್ರರಂಗದ ಯಶಸ್ವಿ ನಟಿ ಹರಿಪ್ರಿಯಾ ಅವರು.ಇತ್ತೀಚಿಗೆ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಜನಪ್ರಿಯ ನಟಿಯಾಗಿ ಬೆಳೆಯುತ್ತಿರುವ ನಾಯಿಕಿ ಹರಿಪ್ರಿಯಾ ಅವರು, ಕಳೆದ ಎರಡು ವರುಷದಿಂದ ನಿಭಾಯಿಸಿರುವ ಬಹುತೇಕ ಪಾತ್ರಗಳು ಬಹಳ ವಿಭಿನ್ನ ಹಾಗೂ ಬೋಲ್ಡ್ ಪಾತ್ರಗಳಾಗಿದ್ದು, ಸಿನಿ ವೀಕ್ಷಕರನ್ನು ಸೆಳೆಯುವುದರಲ್ಲಿ ಯಶಸ್ವಿಯಾಗಿದೆ.

ನಟಿ-ಹರಿಪ್ರಿಯಾ

ಚಂದನವನದ ಕ್ವೀನ್ ಆಗಿ ಬೆಳೆಯುತ್ತಿರುವ ಹರಿಪ್ರಿಯಾ, ಅಳುಮುಂಜಿ ಪಾತ್ರದಲ್ಲಿ ಕಾಣಿಸಿಕೊಳ್ಳುವು ತೀರಾ ಕಡಿಮೆ. ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುತ್ತ, ಕನ್ನಡ ಚಿತ್ರರಂಗದ ಬೇಡಿಕೆಯ ನಟಿಯಾಗಿರುವ ಅವರು, ಶ್ರೇಷ್ಠ ನಟಿ ಪ್ರಶಸ್ತಿಗೂ ಕೂಡ ಭಾಜನರಾಗಿದ್ದಾರೆ. ನೋಯ್ಡಾದಲ್ಲಿ ನಡೆದ 4ನೇ ಭಾರತೀಯ ವಿಶ್ವ ಸಿನಿಮೋತ್ಸವದಲ್ಲಿ ಹರಿಪ್ರಿಯಾ ಅಭಿನಯದ “ಅಮೃತಮತಿ” ಚಿತ್ರ ಪ್ರದರ್ಶನಗೊಂಡಿದ್ದು, ಈ ಚಿತ್ರದ ಅಭಿನಯಕ್ಕಾಗಿ ಹರಿಪ್ರಿಯಾಗೆ ಶ್ರೇಷ್ಠ ನಟಿ ಪ್ರಶಸ್ತಿ ಲಭಿಸಿದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •