ಸಿನಿಮಾ ನಟಿಗೆ 20ರ ಪ್ರಾಯದ ಹುಡುಗನೊಬ್ಬ ವಾಟ್ಸಪ್ ವಿಡಿಯೋ ಕಾಲ್ ಮಾಡಿ ಅಶ್ಲೀಲವಾಗಿ ನಡೆದುಕೊಂಡಿದ್ದಾನೆ. ಈ ನಟಿ ಸೆಲ್ಫ್ ಡಿಫೆನ್ಸ್ ತರಬೇತುದಾರಳಾಗಿಯೂ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆಯೂ ಸಹ ತಮಗೆ ಈ ರೀತಿ ಕಿರುಕುಳ ಆಗಿತ್ತು ಎಂದು ಅವರು ಆರೋಪಿಸಿದ್ದಾರೆ.
ವಾಟ್ಸಪ್ನಿಂದ ವಿಡಿಯೋ ಕಾಲ್ ಮಾಡುವ ಮೂಲಕ ತಮಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಸಿನಿಮಾ ನಟಿಯೊಬ್ಬರು ದೂರು ಸಲ್ಲಿಸಿದ್ದಾರೆ. ಮುಂಬೈ ಮೂಲದ ಈ ನಟಿಗೆ ವಾಟ್ಸಪ್ ಮೂಲಕ ವಿಡಿಯೋ ಕಾಲ್ ಮಾಡಿರುವ 20ರ ಹರೆಯದ ಯುವಕನೊಬ್ಬ ಇಂಥ ಕೃತ್ಯ ಎಸಗಿದ್ದಾನೆ.
ವಿಡಿಯೋ ಕಾಲ್ನಲ್ಲಿ ಹಸ್ತ ಮೈಥುನ!
ಇತ್ತೀಚೆಗೆ ಈ ನಟಿಗೆ ಅನೌನ್ ನಂಬರ್ನಿಂದ ವಾಟ್ಸಪ್ ವಿಡಿಯೋ ಕಾಲ್ ಬಂದಿದೆ. ಎರಡು ಬಾರಿ ಅವರು ಅದನ್ನು ರಿಜೆಕ್ಟ್ ಮಾಡಿದ್ದಾರೆ. ಆದರೆ ಮೂರನೇ ಬಾರಿ ಕರೆ ಬಂದಾಗ ಆಕಸ್ಮಿಕವಾಗಿ ರಿಸೀವ್ ಆಯಿತು. ವಿಡಿಯೋ ಕಾಲ್ ಮಾಡಿದ್ದ ಆ ಯುವಕನು ಹಸ್ತ ಮೈಥುನ ಮಾಡಿಕೊಳ್ಳುತ್ತಿರುವುದು ಕಾಣಿಸಿತು ಎಂದು ನಟಿ ಆರೋಪಿಸಿದ್ದಾರೆ. ಸ್ಕ್ರೀನ್ ಶಾಟ್ ತೆಗೆದುಕೊಳ್ಳಬಾರದು ಎಂಬ ಕಾರಣಕ್ಕೆ ತಾವು ಫೋನ್ ಕ್ಯಾಮರಾವನ್ನು ಕವರ್ ಮಾಡಿದ್ದಾಗಿ ನಟಿ ಹೇಳಿಕೊಂಡಿದ್ದಾರೆ.
ಮೊಬೈಲ್ಗೆ ಬಂತು ಮತ್ತೊಂದು ವಿಡಿಯೋ!
ಯುವಕನ ಕೃತ್ಯದಿಂದ ಬೇಸತ್ತ ನಟಿಯು ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ನೀಡುವ ಸಲುವಾಗಿ ಪೊಲೀಸ್ ಸ್ಟೇಷನ್ಗೆ ಹೋಗಿದ್ದಾಗಲೇ ಆ ಯುವಕ ಮತ್ತೊಂದು ಅಶ್ಲೀಲ ವಿಡಿಯೋ ಕಳಿಸಿದ್ದಾನೆ. ಮತ್ತೋರ್ವ ಯುವತಿಯ ಜೊತೆಗೆ ಆತ ಅಸಭ್ಯವಾಗಿ ನಡೆದುಕೊಳ್ಳುತ್ತಿರುವ ದೃಶ್ಯ ಅದರಲ್ಲಿ ಇದೆ ಎನ್ನಲಾಗಿದೆ. ‘ನನಗೆ ಆಗಾಗ ವಾಟ್ಸಪ್ನಲ್ಲಿ ವಿಡಿಯೋ ಕಾಲ್ ಬರುತ್ತವೆ. ನಾನು ರಿಸೀವ್ ಮಾಡುವುದಿಲ್ಲ. ಈ ಬಾರಿ ಆಕಸ್ಮಿಕವಾಗಿ ರಿಸೀವ್ ಮಾಡಿದಾಗ ಯುವಕ ಅಸಭ್ಯವಾಗಿ ನಡೆದುಕೊಂಡ’ ಎಂದು ಆ ನಟಿ ದೂರಿನಲ್ಲಿ ತಿಳಿಸಿದ್ದಾರೆ.
ಕ್ಷಮೆ ಕೇಳುತ್ತಿರುವ ವಿದ್ಯಾರ್ಥಿ
ಈ ಘಟನೆಯಿಂದ ಬೇಸತ್ತ ನಟಿಯು ಆತನ ಮೆಸೇಜ್ ಸ್ಕ್ರೀನ್ ಶಾಟ್ಗಳನ್ನು ಟ್ವೀಟ್ ಮಾಡಿದ್ದಾರೆ. ಜೊತೆಗೆ ಮುಂಬೈ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ. ತನಗೆ ಈಗ ತೊಂದರೆ ಆಗಲಿದೆ ಎಂಬುದು ಗೊತ್ತಾಗುತ್ತಿದ್ದಂತೆಯೇ ಆತ ಕ್ಷಮೆ ಕೇಳಲು ಆರಂಭಿಸಿದ್ದಾನಂತೆ. ‘ತಾನೊಬ್ಬ ವಿದ್ಯಾರ್ಥಿ ಎಂದು ಆತ ಹೇಳಿಕೊಂಡಿದ್ದಾನೆ. ತನ್ನ ಗೆಳತಿಗೆ ಮಾಡಬೇಕಾಗಿದ್ದ ಕರೆಯನ್ನು ಮಿಸ್ ಆಗಿ ನಿಮಗೆ ಮಾಡಿದೆ ಅಂತ ಹೇಳುತ್ತಿದ್ದಾನೆ’ ಎಂದಿದ್ದಾರೆ ನಟಿ.