ಪುನೀತ್ ಮೃ*ತಪಟ್ಟ ದಿನ ಶಿವರಾಜ್​ಕುಮಾರ್​ ನಟನೆಯ ‘ಭಜರಂಗಿ 2’ ಸಿನಿಮಾ ರಿಲೀಸ್​ ಆಗಿತ್ತು.ಈ ಸಿನಿಮಾ ಬಗ್ಗೆ ಪುನೀತ್​ ಕೂಡ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದರು.

ಪುನೀತ್​ ರಾಜ್​ಕುಮಾರ್​ ಅವರು ಇನ್ನಿಲ್ಲ ಎಂಬ ವಿಚಾರವನ್ನು ಯಾರೆಂದರೆ ಯಾರ ಬಳಿಯೂ ಒಪ್ಪಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಕನ್ನಡ ನಾಡಿನ ಬಗ್ಗೆ, ಕನ್ನಡ ಜನತೆ ಬಗ್ಗೆ ಅವರು ಇಟ್ಟುಕೊಂಡಿದ್ದ ಪ್ರೀತಿಯನ್ನು ಯಾರು ಕೂಡ ಮರೆಯೋಕೆ ಸಾಧ್ಯವಿಲ್ಲ. ಪುನೀತ್​ ಅವರು ಏಕಾಏಕಿ ಕೋಟ್ಯಂತರ ಅಭಿಮಾನಿಗಳನ್ನು ತೊರೆದು ಹೋಗಿದ್ದಾರೆ. ಅವರ ಅಂ*ತಿಮ ದರ್ಶನ ಪಡೆಯೋಕೆ ಕೋಟ್ಯಂತರ ಅಭಿಮಾನಿಗಳು ಆಗಮಿಸಿದ್ದಾರೆ. ಈ ಮಧ್ಯೆ ಸಾಯುವುದಕ್ಕೂ ಮೊದಲು ಅವರು ದೂರವಾಣಿ ಮೂಲಕ  ಮಾತನಾಡಿದ್ದ ಆಡಿಯೋ ಕ್ಲಿಪ್​ ಒಂದು ವೈರಲ್​ ಆಗಿದೆ. ಈ ಆಡಿಯೋ ಕ್ಲಿಪ್​ನಲ್ಲಿ ಸಾಕಷ್ಟು ವಿಚಾರಗಳಿವೆ.

ಪುನೀತ್ ಮೃ*ತಪಟ್ಟ ದಿನ ಶಿವರಾಜ್​ಕುಮಾರ್​ ನಟನೆಯ ‘ಭಜರಂಗಿ 2’ ಸಿನಿಮಾ ರಿಲೀಸ್​ ಆಗಿತ್ತು.ಈ ಸಿನಿಮಾ ಬಗ್ಗೆ ಪುನೀತ್​ ಕೂಡ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದರು. ಈ ಕಾರಣಕ್ಕೆ ಅವರು, ಈ ಚಿತ್ರದ ಪ್ರೀ ರಿಲೀಸ್ ಇವೆಂಟ್​ಗೆ ತೆರಳಿ ಶುಭ ಕೋರಿದ್ದರು. ಸಾಯುವ ಕೆಲವೇ ಗಂಟೆಗಳ ಮೊದಲು ಸಿನಿಮಾ ವಿತರಕ ಮಂಜುನಾಥ್​​ಗೆ ಕರೆ ಮಾಡಿ ಮಾತನಾಡಿದ್ದರು ಅಪ್ಪು. ಈ ವೇಳೆ ಸಿನಿಮಾ ಹೇಗಿತ್ತು ಎಂದು ಮಂಜುನಾಥ್​ ಬಳಿ ಅವರು ಪ್ರಶ್ನೆ ಮಾಡಿದ್ದರು. ಅವರ ಸಂಭಾಷಣೆ ಹೀಗಿದೆ.

ಮಂಜುನಾಥ್​: ಬಾಸ್​, ಗುಡ್​ ಮಾರ್ನಿಂಗ್​.
ಪುನೀತ್​: ಗುಡ್​ ಮಾರ್ನಿಂಗ್​, ಸಿನಿಮಾ ಹೇಗಿದೆ?
ಮಂಜುನಾಥ್: ಫಸ್ಟ್​ ಹಾಫ್​ ನಿಧಾನ ಎನಿಸಿತು. ಸಿಜಿ ಹಾಗೂ ದೃಶ್ಯಗಳು ಅದ್ದೂರಿಯಾಗಿ ಮೂಡಿ ಬಂದಿವೆ. ಸಿನಿಮಾ ಚೆನ್ನಾಗಿದೆ.
ಪುನೀತ್​: ಶಂಕರ್​ನಾಗ್​ ಅಲ್ಲಿ ಯಾವುದು ಹಾಕಿದ್ದೀರಿ?
ಮಂಜುನಾಥ್​: ‘ಭಜರಂಗಿ 2’ ಸಿನಿಮಾನೇ ಹಾಕಿದ್ದೇವೆ. ಮೂರು ಶೋ ಇದೆ.
ಪುನೀತ್​: ಗುಡ್, ನವೆಂಬರ್​ 1ನೇ ತಾರೀಕಿನ ನಂತರ ಟೀಸರ್​ ಕಳುಹಿಸಿ ಕೊಡುತ್ತೇನೆ. ಅದನ್ನು ಚಿತ್ರಮಂದಿರದಲ್ಲಿ ಪ್ಲೇ ಮಾಡಿ.
ಮಂಜುನಾಥ್​: ಮೊನ್ನೆ ತೋರಿಸಿದೀರಲ್ಲ. ಖಂಡಿತವಾಗಿಯೂ ಪ್ಲೇ ಮಾಡ್ತೀವಿ. ಕಳುಹಿಸಿಕೊಡಿ.
ಪುನೀತ್​: ಥ್ಯಾಂಕ್​ಯೂ
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!