ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಎಂಬ ಧಾರಾವಾಹಿ ಮೂಲಕ‌ ಜನಪ್ರಿಯರಾದವರು ಸನ್ನಿಧಿ ಪಾತ್ರಧಾರಿ ನಟಿ ವೈಶ್ಣವಿ ಗೌಡ ಅವರು. ಹೌದು ಸತತ ಏಳು ವರ್ಷಗಳ ಕಾಲ ಪ್ರಸಾರವಾಗಿದ್ದ ಈ ಧಾರಾವಾಹಿಯಲ್ಲಿ ಸನ್ನಿಧಿ ಪಾತ್ರದ ಮೂಲಕ ಕನ್ನಡ ಕಿರುತೆರೆ ಪ್ರಿಯರ ಮನೆಮಾತಾದ ನಟಿ ವೈಶ್ಣವಿ ಗೌಡ ಅವರು ಇದೀಗ ಬಿಗ್ ಬಾಸ್ ಸೀಸನ್ 8 ಕ್ಕೂ ಕೂಡ ಪ್ರವೇಶ ಮಾಡಿ ತಮ್ಮ ನೇರ ಮಾತಿನಿಂದ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿದ್ದಾರೆ. ಕಿರುತೆರೆ ಲೋಕದಲ್ಲಿ ವೈಷ್ಣವಿ ಗೌಡ ಅವರಿಗೆ ತಮ್ಮದೇ ಆದ ಅಭಿಮಾನಿ ಬಳಗವಿದೆ.

 

 

ಸಾಕಷ್ಟು ಯುವ ಪೀಳಿಗೆಗಳು ವೈಷ್ಣವಿ ಅವರನ್ನು ಬಹಳ ಇಷ್ಟಪಡುತ್ತಾರೆ ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಅವರು ಅಪ್ ಲೋಡ್ ಮಾಡುವ ಫೋಟೋಗಳಿಗೆ ಕಮೆಂಟ್ ಮಾಡುವ ಮೂಲಕ ತಮ್ಮ ಅಭಿಮಾನವನ್ನು ತೋರಿಸುತ್ತಾರೆ. ಮೊದಲ ಎರಡು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಬಹಳ ನಿಶ್ಯಬ್ಧವಾಗಿದ್ದ ವೈಷ್ಣವಿ ಅವರನ್ನು ಕಂಡು ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸಿದ್ದರು. ಆದರೆ ಮೂರನೇ ವಾರದಿಂದ ಅವರು ಓಪನ್ ಅಪ್ ಆಗಿದ್ದು ಮನೆಯಲ್ಲಿ ಇದೀಗ ಸ್ಟ್ರಾಂಗ್ ಕಂಟೆಂಡರ್ ಆಗಿದ್ದರೆ.

 

 

ಸಾಮಾನ್ಯವಾಗಿ ಬಿಗ್ ಬಾಸ್ ಮನೆಯೊಳಗೆ ಹೋಗುವ ಸ್ಪರ್ಧಿ ಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿರುತ್ತಾರೆ. ಅಲ್ಲದೆ ಅವರ ವೈಯಕ್ತಿಕ ವಿಚಾರಗಳು ಕೂಡ ಸಾಕಷ್ಟು ವೈರಲ್ ಆಗಿ ಬಿಡುತ್ತವೆ. ಇದೀಗ ವೈಷ್ಣವಿ ಗೌಡ ಅವರ ವಿಚಾರ ಕೂಡ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದು ಅವರ ಬಗ್ಗೆ ನಿಮಗೆ ತಿಳಿಯದ ಆಶ್ಚರ್ಯಕಾರಿ ವಿಚಾರವನ್ನು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ ಬನ್ನಿ..ಹೌದು ಒಂದು ಕಾಲದಲ್ಲಿ ಸನ್ನಿಧಿ ಎಂಬ ಪಾತ್ರದ ಮೂಲಕ ಕರುನಾಡ ಮನೆ ಮಾತಾಗಿದ್ದ ವೈಷ್ಣವಿ ಗೌಡ ಅವರು ಇದೀಗ ಕನ್ನಡ ಕಿರುತೆರೆಯ ಜನಪ್ರಿಯ ಶೋ ಬಿಗ್ ಬಾಸ್ ಮನೆ ಸೇರಿದ್ದಾರೆ.

 

 

ಅದೊಂದು ದಿನ ತಮ್ಮ ಪ್ರೀತಿಯ ತಾಯಿ ಜೊತೆ ದೇವಾಲಯಕ್ಕೆ ತೆರಳಿದ್ದಾಗ,ಇದೇ ಸಂದರ್ಭದಲ್ಲಿ ಒಂದು ಧಾರಾವಾಹಿಯ ಸಹ ನಿರ್ದೇಶಕರು ವೈಷ್ಣವಿ ಅವರನ್ನು ನೋಡಿ ತಮ್ಮ ಧಾರಾವಾಹಿಯಲ್ಲಿ ಅಭಿನಯಿಸುವುದಕ್ಕೆ ಅವಕಾಶ ನೀಡುತ್ತಾರೆ. ಹೌದು ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ದೇವಿ ಎಂಬ ಧಾರಾವಾಹಿಯ ಮೂಲಕ ವೈಷ್ಣವಿ ಅವರ ಕಿರುತೆರೆ ಲೋಕದ ಬಣ್ಣದ ಜರ್ನಿ ಪ್ರಾರಂಭವಾಗುತ್ತದೆ. ಈ ಧಾರಾವಾಹಿಯ ಯಶಸ್ಸಿನ ನಂತರ ಪುನರ್ವಿವಾಹ ಧಾರಾವಾಹಿಯಲ್ಲಿ ಅಭಿನಯಿಸಿದ ವೈಷ್ಣವಿ, ನಂತರ ಅಗ್ನಿಸಾಕ್ಷಿಯ ಸನ್ನಿಧಿ ಪಾತ್ರದ ಮೂಲಕ ಕರುನಾಡ ಮೂಲೆ ಮೂಲೆಯಲ್ಲೂ ಜನಪ್ರಿಯರಾಗುತ್ತಾರೆ.

 

 

ಹೌದು ಸನ್ನಿಧಿ ಎಂಬ ಪಾತ್ರದ ಮೂಲಕ ಸುಮಾರು 6 ವರುಷಗಳ ಕಾಲ ಜನರನ್ನು ರಂಜಿಸಿದ ವೈಷ್ಣವಿ ಅಪಾರ ಯಶಸ್ಸನ್ನು ಕಾಣುತ್ತಾರೆ. ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವೈಷ್ಣವಿ ನಿರಂತರ ಚಿತ್ರೀಕರಣದಿಂದ ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ತ್ಯಜಿಸಿ ನಂತರ ಬೆಂಗಳೂರಿನ ವಿಶ್ವವಿದ್ಯಾಲಯದಲ್ಲಿ ದೂರ ಶಿಕ್ಷಣದ ಮೂಲಕ ಪದವಿಯನ್ನು ಪಡೆಯುತ್ತಾರೆ. ನಟನೆಯಲ್ಲಿ ಮಾತ್ರವಲ್ಲದೇ ಬೆಲ್ಲಿ ಡ್ಯಾನ್ಸ್, ಕುಚುಪುಡಿ, ಭರತ ನಾಟ್ಯಂ ನಲ್ಲಿ ಪರಿಣತಿ ಹೊಂದಿರುವ ವೈಷ್ಣವಿ ಗೌಡ , ಗಿರಿಗಿಟ್ಲೆ ಎಂಬ ಸಿನಿಮಾದ ಮೂಲಕ ಬೆಳ್ಳಿ ತೆರೆಯಲ್ಲಿಯೂ ಕೂಡ ತಮ್ಮ ಅದೃಷ್ಟ ಪರೀಕ್ಷೆ ಯನ್ನು ಪರೀಕ್ಷಿಸಿದರು.

 

 

ಕೇವಲ ನಟನೆ ಹಾಗೂ ನೃತ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುದ ವೈಷ್ಣವಿ ಭರ್ಜರಿ ಕಾಮಿಡಿ ಎಂಬ ಕಾರ್ಯಕ್ರಮದಲ್ಲಿ ನಿರೂಪಣೆಯನ್ನು ಕೂಡ ಮಾಡಿದ್ದರು. ಇದರ ಜೊತೆಗೆ ಕುಣಿಯೋಣ ಬಾರಾ ಎಂಬ ನೃತ್ಯ ರಿಯಾಲಿಟಿ ಕಾರ್ಯಕ್ರಮದಲ್ಲಿ ಅತ್ಯದ್ಭುತ ನೃತ್ಯದಿಂದ ಅಪಾರ ಜನಪ್ರಿಯತೆ ಗಳಿಸಿದ್ದರು. ಇದೀಗ ಕಿಚ್ಚ ಸುದೀಪ್ ಅವರ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಅತ್ಯದ್ಭುತ ಸ್ಪರ್ಧಿಯಾಗಿ ತಮ್ಮ ಜರ್ನಿಯನ್ನು ನಡೆಸುತ್ತಿದ್ದು ಕಿರುತೆರೆ ಪ್ರೇಕ್ಷಕರ ಮೆಚ್ಚಿನ ಸ್ಪರ್ಧಿಯಾಗಿದ್ದಾರೆ.

 

ಸದ್ಯ ಅಗ್ನಿಸಾಕ್ಷಿ ಧಾರಾವಾಹಿಯ ನಂತರ ಮತ್ಯಾವ ಧಾರಾವಾಹಿಯಲ್ಲೂ ಕಾಣಿಸಿಕೊಳ್ಳದ ವೈಷ್ಣವಿ ಗೌಡ , ಬಿಗ್ ಬಾಸ್ ಮುಗಿದ ನಂತರ ಕಿರುತೆರೆ ಲೋಕಕ್ಕೆ ಮರುತ್ತಾರಾ? ಅಥವಾ ಬೆಳ್ಳಿಲೋಕದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡುತ್ತಾರಾ? ಕಾದು ನೋಡ ಬೇಕಿದೆ. ನಿಮಗೂ ಕೂಡ ವೈಷ್ಣವಿ ಗೌಡ ಅವರು ಇಷ್ಟವಾದರೆ ಬಿಗ್ ಬಾಸ್ ನಲ್ಲಿ ಗೆಲ್ಲುತ್ತಾರಾ ಎಂಬುದನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •