ಕನ್ನಡ ಕಿರುತೆರೆಯ ಪ್ರಮುಖ ಧಾರವಾಹಿಗಳಲ್ಲಿ ಸಾಕಷ್ಟು ಧಾರಾವಾಹಿಗಳು ಮುಕ್ತಾಯಗೊಂಡಿದ್ದು, ಇಂದಿಗೂ ಕೂಡ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಅಂತಹ ಧಾರವಾಹಿಗಳಲ್ಲಿ ಅಗ್ನಿಸಾಕ್ಷಿ ಕೂಡ ಒಂದು. ಈ ಧಾರಾವಾಹಿಯಲ್ಲಿ ನಟಿಸಿದ ನಟ ವಿಜಯ್ ಸೂರ್ಯ ಹಾಗೂ ನಟಿ ವೈಷ್ಣವಿ ಇಂದಿಗೂ ಕೂಡ ಜನರ ಮನಸಿನಲ್ಲಿ ಉಳಿದಿದ್ದಾರೆ. ಈ ಧಾರಾವಾಹಿ ಪ್ರಾರಂಭವಾದಾಗ ಜನರ ಮನಸ್ಸಿಗೆ ಹತ್ತಿರವಾಗಿ ಅದು ಮುಕ್ತಾಯಗೊಂಡಿದ್ದರೂ ಕೂಡ ಜನರಿಗೆ ಇಂದಿಗೂ ಧಾರಾವಾಹಿ ಹೆಸರು ಹೇಳಿದರೆ ಅದರ ನಟ-ನಟಿಯರ ಮುಖ ನೆನಪಿಗೆ ಬರುತ್ತದೆ.

ಇನ್ನೂ ಧಾರವಾಹಿಯ ಮೂಲಕ ಜನರ ಮನಸ್ಸನ್ನು ಗೆದ್ದ ನಟಿ ವೈಷ್ಣವಿ ಅವರ ನಿಜ ಜೀವನದಲ್ಲಿ ರಿಲೇಶನ್ ಬಗ್ಗೆ ಮಾತನಾಡಿದಾಗ ಅವರು ಸರಿಯಾಗಿ ಉತ್ತರ ನೀಡಿಲ್ಲ. ಇನ್ನು ಅವರ ಅಭಿಮಾನಿಗಳು ಅವರು ಯಾರೊಂದಿಗೆ ಪ್ರೀತಿಯಲ್ಲಿ ಇದ್ದಾರೆ? ಯಾರೊಂದಿಗೆ ರಿಲೇಷನ್ಶಿಪ್ ನಲ್ಲಿದ್ದಾರೆ? ಎಂಬ ಕುತೂಹಲ ಭರಿತವಾದ ಪ್ರಶ್ನೆಗಳು ಕೇಳುತ್ತಿದ್ದಾರೆ. ಆದರೆ ಇದುವರೆಗೂ ಕೂಡ ವೈಷ್ಣವಿ ಪ್ರಶ್ನೆಗಳಿಗೆ ಯಾವುದೇ ರೀತಿಯ ಸರಿಯಾದ ಉತ್ತರವನ್ನು ನೀಡಿಲ್ಲ.

Vaishnavi

ಇದುವರೆಗೂ ತಮ್ಮ ರೆಲೇಶನ್ಶಿಪ್ ಬಗ್ಗೆ ಉತ್ತರ ನೀಡದ ವೈಷ್ಣವಿ ಅವರು ಇದೀಗ ಕಲರ್ಸ್ ಕನ್ನಡ ವಾಹಿನಿ ಪ್ರಸಾರವಾಗುತ್ತಿರುವ ಚಾಟ್ ಕಾರ್ನರ್ ನಲ್ಲಿ ಈ ಬಗ್ಗೆ ಉತ್ತರ ನೀಡಿದ್ದಾರೆ. ಹೌದು ಕಲರ್ಸ್ ಕನ್ನಡ ವಾಹಿನಿಯ ಚಾಟ್ ಕಾರ್ನರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೈಷ್ಣವಿ ಅವರು ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ವೈಷ್ಣವಿ ಅವರು ಈ ಕಾರ್ಯಕ್ರಮದಲ್ಲಿ ‘ಹೌದು ನಾನು ರಿಲೇಶನ್ ಶಿಪ್ ನಲ್ಲಿ ಇದ್ದೇನೆ. ನಮ್ಮಿಬ್ಬರ ರಿಲೇಷನ್ಶಿಪ್ ಸ್ಟ್ರಾಂಗ್ ಆಗಿದೆ. ಹಾಗೆಯೇ ಮುಂದುವರೆಯುತ್ತಿದೆ’ ಎಂದು ಉತ್ತರಿಸಿದ್ದಾರೆ.

Vaishnavi

ಆದರೆ ತದನಂತರದಲ್ಲಿ ಅವರು ಯಾರು? ಎಲ್ಲಿದ್ದಾರೆ? ಎಂದು ಕೇಳಿದಾಗ ವೈಷ್ಣವಿ ಅವರು ಅವರು ಬೇರೆ ಯಾರು ಅಲ್ಲ ಅದು ನನ್ನ ಕೆಲಸ ಎಂದು ಹೇಳಿದ್ದಾರೆ. ಇದು ಹಳೇ ಟೆಕ್ನಿಕ್ ಆದರೂ ಕೂಡ ಇಂದು ಇದು ಹೊಸತನವನ್ನು ಉಂಟುಮಾಡಿತ್ತು. ಅಷ್ಟರಮಟ್ಟಿಗೆ ಅಗ್ನಿಸಾಕ್ಷಿ ನಟಿ ವೈಷ್ಣವಿ ಅವರು ಉತ್ತರಿಸಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ಕಮೆಂಟ್ ಮಾಡಿ ತಿಳಿಸಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •