ಹಸಿವು ಕಲಿಸುವ ಪಾಠವನ್ನು ಯಾವ ವಿಶ್ವವಿದ್ಯಾಲಯ ಕೂಡ ಕಲಿಸಲ್ಲ ಅನ್ನೋ ಮಾತೊಂದಿದೆ. ಆ ಮಾತು ಎಷ್ಟು ಅರ್ಥಗರ್ಭಿತ ಅನಿಸುತ್ತದೆ. ಉದರನಿಮಿತ್ತಂ ಬಹುಕೃತ ವೇಷಂ ಅನ್ನೋ ಸಾಲುಗಳು ಸಾರ್ವಕಾಲಿಕವಾಗಿ ಧ್ವನಿಸುವಂತಹ ಸಾಲುಗಳು. ಹೌದು ಇವತ್ತು ನಾವ್ಯಾಕೆ ಹೀಗೆಲ್ಲ ಪೀಠಿಕೆ ಕೊಡ್ತಾಯಿದ್ದೀವಿ ಅಂದ್ರೆ ಅದಕ್ಕೂ ಒಂದು ಕಾರಣವಿದೆ. ಎಷ್ಟೋ ಜನ ಇವತ್ತು ತಮಗೆ ಅಗತ್ಯಕ್ಕಿಂತ ಜಾಸ್ತಿ ಆಹಾರವನ್ನು ತೆಗೆದುಕೊಳ್ತಾರೆ, ನಂತರ ವೇಸ್ಟ್ ಮಾಡ್ತಾರೆ. ಇನ್ನು ಕೆಲವರು ಅನ್ನದ ಬೆಲೆ ಗೊತ್ತಿಲ್ಲದೇ ಹಾಳು ಮಾಡುತ್ತಾರೆ. ಹೀಗೆ ಆಹಾರವನ್ನು ಹಾಳು ಮಾಡುವ ಅದೆಷ್ಟೋ ಜನರು ನಮ್ಮ ಕಣ್ಣಮುಂದೆಯೇ ಇದ್ದಾರೆ, ಇದೇ ರೀತಿ ನಮ್ಮ ದೇಶದಲ್ಲಿ ಆಹಾರವನ್ನು ವ್ಯರ್ಥ ಮಾಡುವವರ ಸಂಖ್ಯೆ ದೊಡ್ಡದೇಯಿದೆ.

ಈ ಆಹಾರವೆಲ್ಲ ವ್ಯರ್ಥ ಮಾಡೋದನ್ನು ನೋಡಿ ಒಬ್ಬ ವೈದ್ಯೆ ಮಾಡಿದ ಮಾಸ್ಟರ್ ಪ್ಲಾನ್ ಇವತ್ತು ಎಷ್ಟೋ ಜನರಿಗೆ ಆಹಾರ ಪೂರೈಕೆಯಾಗಲು ನೆರವಾಗಿದೆ. ಎಂತಹ ಗ್ರೇಟ್ ಪ್ಲಾನ್ ನೋಡಿ.
ಹೌದು ಈಕೆಯ ಹೆಸರು ಫಾತೀಮಾ ವೃತ್ತಿಯಲ್ಲಿ ವೈದ್ಯೆ. ಒಂದು ದಿನ ಹೀಗೆ ಪೇಪರ್ ಓದುತ್ತಾ ಇರುತ್ತಾರೆ. ಪೇಪರ್‌ನಲ್ಲಿ ಆ’ಘಾ’ತಕಾರಿಯಾದ ಸುದ್ದಿ ನೋಡುತ್ತಾರೆ. ನಮ್ಮ ದೇಶದಲ್ಲಿ ಇರುವ ಜನಸಂಖ್ಯೆಯ ಎರಡುಪಟ್ಟು ಆಹಾರವನ್ನು ದೇಶವಾಸಿಗಳು ವ್ಯರ್ಥ ಮಾಡ್ತಾರಂತೆ. ಇದಕ್ಕೆ ಪೂರಕವಾದ ಒಂದು ಲೇಖನವನ್ನು ನೋಡಿ ಶಾ’ಕ್ ಆಗ್ತಾರೆ. ಜೊತೆಗೆ ಏನಾದ್ರೂ ಒಂದು ಪ್ಲಾನ್ ಮಾಡಬೇಕು ಅಂತ ಯೋಚಿಸಿ ಒಂದು ಅದ್ಭುತ ಪ್ಲಾನ್ ಮಾಡುತ್ತಾರೆ. ಎಸ್ ಬೀಚ್ ಸೈಡ್‌ನಲ್ಲಿ ಒಂದು ದೊಡ್ಡ ಫ್ರಿಡ್ಜ್ ಖರೀದಿಸಿ ಇಡುತ್ತಾರೆ..

 

ಅದರ ಒಳಗೆ ಜನರಿಗೆ ಹೆಚ್ಚಾದ ಆಹಾರವನ್ನು ತಂದಿರಿಸಲು ಅರಿವು ಮೂಡಿಸುತ್ತಾರೆ. ಕೆಲವೇ ದಿನಗಳಲ್ಲಿ ಇವರ ಐಡಿಯಾ ವರ್ಕ್ ಔಟ್ ಆಯ್ತು. ಅನೇಕ ಜನರು ತಮಗೆ ಬೇಡವಾದ ಹೆಚ್ಚಾದ ಆಹಾರವನ್ನು ಈ ಫ್ರಿಡ್ಜ್ನಲ್ಲಿ ತಂದಿರಿಸಲು ಶುರು ಮಾಡಿದ್ರು. ಈ ಆಹಾರವನ್ನು ನಿರ್ಗತಿಕರು, ಹಸಿವಿನಿಂದ ಬಳಲುತ್ತಿದ್ದವರು ತೆಗೆದುಕೊಳ್ಳುತ್ತಿದ್ದರು. ಮುಂದೆ ಹೋಗ್ತಾ ಜನ ತಮಗೆ ಬೇಡವಾದ ಚಪ್ಪಲಿ, ಬಟ್ಟೆಗಳನ್ನು ಸಹ ತಂದಿರಿಸಲು ಶುರು ಮಾಡಿದ್ರು.

ಇದು ಎಷ್ಟೋ ಜನ ಚಳಿಯಿಂದ ನಡುಗುವುದನ್ನು ತಪ್ಪಿಸಿದೆ. ಜೊತೆಗೆ ಹೊಟ್ಟೆ ಹಸಿವಿನಿಂದ ಬಳಲುವುದನ್ನು ತಪ್ಪಿಸಿದೆ. ಶಾಲಾ ಮಕ್ಕಳಂತು ನಿತ್ಯವೂ ಏನಾದ್ರೂ ಆಹಾರವನ್ನು ತಂದಿಡುತ್ತಿದ್ರು.
ಇನ್ನು ಫಾತಿಮಾ ಅವರ ಈ ಐಡಿಯಾ ಬೆಂಗಳೂರಿನಲ್ಲಿ ಸಹ ಅಳವಡಿಸಲಾಗಿದೆ. ಎಷ್ಟರ ಮಟ್ಟಿಗೆ ಈ ಐಡಿಯಾ ಐಟಿಬಿಟಿ ಮಹಾನಗರಿ ಸಿಲಿಕಾನ್‌ಸಿಟಿ ಖ್ಯಾತಿಯ ಬೆಂಗಳೂರಿನಲ್ಲಿ ಸಕ್ಸಸ್ ಆಗುತ್ತೆ ಕಾದು ನೋಡಬೇಕು..
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •