ನಮಸ್ತೆ ಸ್ನೇಹಿತರೆ, ‌ಕನ್ನಡ ಚಿತ್ರರಂಗದಲ್ಲಿ ಭಿಕ್ಷುಕ ಮತ್ತು ಕುಡುಗನ‌ ಪಾತ್ರ ಎಂದೊಡನೆ ಮೊದಲು ಎಲ್ಲರಿಗೂ ನೆನಪಾಗುವುದು ನಟ ವೈಜನಾಥ್ ಬಿರಾದಾರ್ ಅವರು.. ಇವರನ್ನು ಕನ್ನಡ ಚಿತ್ರರಂಗದ ಹೆಸರಾಂತ ನಟ ಹಾಗು ಅದ್ಭುತವಾದ ಕಲಾವಿದ ಎಂದರು ತಪ್ಪಾಗಲಾರದು..

ಯಾಕೆಂದರೆ ವೈಜನಾಥ್ ಬಿರಾದಾರ್ ಅವರು ಸಿನಿಮಾಗಳಲ್ಲಿ ಹೆಚ್ಚಾಗಿ ಭಿಕ್ಷುಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಅಷ್ಟೇ ಅಲ್ಲದೆ ಅಣ್ಣ, ತಂದೆಯ ಪಾತ್ರದಲ್ಲಿ ಕೂಡ ನಟಿಸಿದ್ದಾರೆ, ಇವರು ಸಿನಿಮಾಗಳಲ್ಲಿ ಹೆಚ್ಚಾಗಿ ಸಾಂಸಾರಿಕ ಚಿತ್ರಗಳಲ್ಲಿ ನಟಿಸಿದ್ದಾರೆ.. ವೈಜನಾಥ್ ಬಿರಾದಾರ್ ಓ ಮಲ್ಲಿಗೆ, ಅಕ್ಕ, ಹುಲಿಯಾ, ಮಠ, ಲವ್ ಟ್ರೈನಿಂಗ್ ಸ್ಕೂಲ್ ಸೇರಿದಂತೆ 500ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.. ಇಷ್ಟೇ ಅಲ್ಲದೆ ನಾಲ್ಕು ಲಂಬಾಣಿ, ತುಳು ಹಾಗೂ ಹಿಂದಿಯ ‘ಹ್ಯಾಂಗ್ ಟು ಡೆತ್’ ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ.‌.

Vaijnath

ವೈಜನಾಥ ಬಿರಾದಾರ ಅವರು ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ತೇಂಪುರದಲ್ಲಿ ಬಸಪ್ಪ ಮತ್ತು ನಾಗಮ್ಮ ಎಂಬ ದಂಪತಿಗಳಿಗೆ ಮಗನಾಗಿ ಜನಿಸಿದರು.. ಇವರು ನಾಲ್ಕನೇ ತರಗತಿ ವಿದ್ಯಾಭ್ಯಾಸ ಪಡೆಯುತ್ತಿದ್ದಾಗ ಅವರ ತಂದೆ ತೀ’ರಿಕೊಂಡರು ಅನಂತರ ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಬಿಟ್ಟರು. ನಂತರ ಬಿರಾದಾರ್ ಅವರು ನಾಟಕದಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದ್ದರು..

ಅಲ್ಲದೆ ಬೆಳಗಾವಿ ಜಿಲ್ಲೆಯ ಗೋಕಾಕ್ ನಲ್ಲಿ ಅಪ್ಪಾಸಾಬ್ ಅವರ ಬಳಿ ನಾಟಕ ತಂಡದಲ್ಲಿ ಕೆಲಸ ಮಾಡಿದರು.. ವೈಜನಾಥ್ ಬಿರಾದಾರ್ ಅವರು ಎಷ್ಟೇ ಸಿನಿಮಾಗಳನ್ನು ಮಾಡಿದ್ದರು ಕೂಡ ಅವರು ಐಶಾರಾಮಿ ಜೀವನ ಮಾಡುತ್ತಿಲ್ಲ.. ಈಗಲೂ ಕೂಡ ಅವರ ಮನೆಗೆ ನಾಲ್ಕೈದು ಜನ ಮನೆಗೆ ಬಂದರೆ ಕೂರಲು ಸ್ಥಾನವಿಲ್ಲದಷ್ಟು ಒಂದು ಸಣ್ಣ ಮನೆಯಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಜೀವನ ಮಾಡುತ್ತಿದ್ದಾರೆ..

Vaijnath

ಇನ್ನೂ‌ ಚಿಕ್ಕ ವಯಸ್ಸಿನಲ್ಲೇ ಸಿನಿಮಾರಂಗಕ್ಕೆ ಬಂದ‌ ವೈಜನಾಥ್ ಬಿರಾದಾರ್ ಅವರನ್ನು‌‌, ಅವರು ನಾಟಕದಲ್ಲಿ ಕಲಿತ ವಿದ್ಯೆ ಕೈಬಿಡಲಿಲ್ಲ.. ತಮ್ಮ ಇಷ್ಟು ವರ್ಷದ ಸಿನಿಮಾ‌ ರಂಗದಲ್ಲಿ ಇವರಿಂದ ಶೂಟಿಂಗ್ ಗೆ ತೊಂದರೆ ಆಯಿತು ಎಂದು ಯಾರೊಬ್ಬರೂ ಕೂಡ ಇವರಿಗೆ ಬೆರಳು ತೋರಿಸಿ ಮಾತುಕೂಡ ಆಡಲಿಲ್ಲ..‌ ಇವರು ತನ್ನ ಜೀವನದಲ್ಲಿ ಯಾರಿಗೂ ತೊಂದರೆ ನೀಡದೆ ಸಿನಿಮಾವನ್ನೇ ದೇವರೆಂದು ಕೊಂಡಿದ್ದ ಬಿರಾದಾರ್ ಅವರಿಗೆ 2014ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿರುವ.. ಅಷ್ಟೇ ಅಲ್ಲದೆ ಸ್ಪೇನ್‍ನ ಮ್ಯಾಡ್ರಿಡ್‌ನಲ್ಲಿ ನಡೆದ 2011ರ ಸಾಲಿನ “ಇಮ್ಯಾಜಿನ್ ಇಂಡಿಯಾ” ಚಲನಚಿತ್ರೋತ್ಸವದಲ್ಲಿ ‘ಕನಸೆಂಬೋ ಕುದುರೆಯನೇರಿ’

ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟ ಎಂಬ ಪ್ರಶಸ್ತಿ ನೀಡಿ ಗೌರವಿಸಿದರು.. ಆದರೆ‌ ವಿಚಾರ ಕನ್ನಡದ ಅದೆಷ್ಟೋ ಜನರಿಗೆ ತಿಳಿದಿಲ್ಲ.. ಅಲ್ಲದೆ ಇಂತಹ ಕಲಾವಿದರ ಬಗ್ಗೆ ಯಾವುದೇ ವಾಹಿನಿಯಲ್ಲಿ ಕೂಡ ಪ್ರಸಾರ ಮಾಡಿರಲಿಲ್ಲ.. ಇನ್ನೂ ಈ ವಿಷಯ ತಿಳಿದ ಅಮಿತಾ ಬಚ್ಚನ್ ಅವರು ವೈಜನಾಥ ಬಿರಾದಾರ್ ಅವರಿಗೆ ಪೋನ್ ಮಾಡಿ ಶುಭಾಶಯವನ್ನು ತಿಳಿಸಿದ್ದರು.. ಅಲ್ಲದೆ ನಮ್ಮ ಭಾರತೀಯ ಕನ್ನಡ ಚಿತ್ರರಂಗದ ನಟನಿಗೆ ಈ‌ ಗೌರವ ಸಿಕ್ಕಿರುವುದು ನಮಗೂ ಹೆಮ್ಮೆ ಎಂದಿದ್ದರು.. ಸಿನಿಮಾದಲ್ಲಿ ಭಿಕ್ಷುಕನ ಪಾತ್ರ ಮಾಡುತ್ತಿದ್ದ ಬಿರಾದಾರ್ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •