ನಮ್ಮ ಸ್ಯಾಂಡಲ್ ವುಡ್ ನಲ್ಲಿ ಎಲ್ಲರೂ ಇಷ್ಟಪಡುವ ದಂಪತಿಗಳು ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ. ಇವರಿಬ್ಬರ ದಾಂಪತ್ಯ ಒಂದು ರೀತಿ ಎಲ್ಲರಿಗೂ ಸ್ಪೂರ್ತಿ. ನಟ ಉಪೇಂದ್ರ ಸಿನಿಮಾ ಹಾಗೂ ರಾಜಕೀಯದಲ್ಲಿ ತೊಡಗಿಕೊಂಡರೆ, ಪತ್ನಿ ಪ್ರಿಯಾಂಕ ಉಪೇಂದ್ರ ಮಕ್ಕಳ ಪಾಲನೆ ಪೋಷಣೆ ಕುಟುಂಬದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಜೊತೆಗೆ ಬಿಡುವಿನ ಸಮಯದಲ್ಲಿ ಸಿನಿಮಾಗಳಲ್ಲೂ ನಟಿಸುತ್ತಾರೆ. ಪ್ರಿಯಾಂಕ ಮತ್ತು ಉಪೇಂದ್ರ ಅವರ ಲವ್ ಸ್ಟೋರಿ ಬಗ್ಗೆ ನಿಮಗೆ ಗೊತ್ತಾ ? ಉಪೇಂದ್ರ ಅವರು ಪ್ರಿಯಾಂಕರನ್ನು ಮೊದಲ ಬಾರಿಗೆ ಎಲ್ಲಿ ಭೇಟಿಯಾದರು? ಇವರ ಪ್ರೀತಿ ಹೇಗೆ ಆಯಿತು, ಯಾವ ಕಾರಣದಿಂದ ಆಯಿತು ಗೊತ್ತಾ! ತಿಳಿಯಲು ಮುಂದೆ ಓದಿ..

Upendra-Priyanka

ಉಪೇಂದ್ರ ಅವರು 1968, ಸೆಪ್ಟೆಂಬರ್ 18 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆ ಮಂಜುನಾಥ್ ರಾವ್ ಮತ್ತು ತಾಯಿ ಅನಸೂಯ. ಮೂಲತಃ ಇವರು ಕುಂದಾಪುರದವರು. ಬಡತನದಲ್ಲಿ ಬೆಳೆದಿದ್ದ ಉಪೇಂದ್ರ ಅವರಿಗೆ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಹಠ ಛಲ ಇತ್ತು. ಬಿಕಾಂ ಮುಗಿಸಿದ ನಂತರ ಕನ್ನಡ ಚಿತ್ರರಂಗದ ಮೇರು ನಟ ಮತ್ತು ನಿರ್ದೇಶಕರಾದ ಕಾಶಿನಾಥ್ ಅವರ ತಂಡಕ್ಕೆ ಸೇರಿಕೊಂಡರು, ಅಸಿಸ್ಟಂಟ್ ಡೈರೆಕ್ಟರ್ ಆಗಿ ಕೆಲಸ ಶುರು ಮಾಡಿದರು. ತರ್ಲೆ ನನ್ಮಗ ಸಿನಿಮಾ ಮೂಲಕ ನಿರ್ದೇಶಕರಾದರು ಉಪೇಂದ್ರ. ನಂತರದ ದಿನಗಳಲ್ಲಿ ಉಪೇಂದ್ರ ಅವರು ನಿರ್ದೇಶಿಸಿ, ಹ್ಯಾಟ್ರಿಕ್ ಹೀರೋ ಶಿವ ರಾಜ್ ಕುಮಾರ್ ಹೀರೋ ಆಗಿ ನಟಿಸಿದ ಓಂ ಸಿನಿಮಾ ಕನ್ನಡ ಚಿತ್ರರಂಗದ ದಾಖಲೆಗಳನ್ನು ಮುರಿದಿತ್ತು. ನಂತರ ‘ಎ’ ಸಿನಿಮಾ ಮೂಲಕ ನಟನಾದರು ಉಪೇಂದ್ರ.

Upendra-Priyanka

ಮೊದಲ ಬಾರಿಗೆ ಪ್ರಿಯಾಂಕ ಅವರನ್ನು ಉಪೇಂದ್ರ ಅವರು ಭೇಟಿಯಾಗಿದ್ದು ತೆಲುಗು ಸಿನಿಮಾ ಒಂದರ ಚಿತ್ರೀಕರಣ ಸಮಯದಲ್ಲಿ ಭೇಟಿಯಾದರು. ನಂತರ H20 ಸಿನಿಮಾಗೆ ನಾಯಕಿಯಾದರು ಪ್ರಿಯಾಂಕ. ಈ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಉಪೇಂದ್ರ ಮತ್ತು ಪ್ರಿಯಾಂಕ ಅವರ ನಡುವೆ ಸ್ನೇಹ ಬೆಳೆಯಿತು, ಸ್ನೇಹ ಪ್ರೀತಿಗೆ ತಿರುಗಿತು. ಒಬ್ಬರನ್ನೊಬ್ಬರು ಪ್ರೀತಿಸಲು ಶುರು ಮಾಡಿದರು. ಉಪೇಂದ್ರ ಅವರು ಹಾಲಿವುಡ್ ಸಿನಿಮಾ ಚಿತ್ರೀಕರಣಕ್ಕಾಗಿ ಅಮೆರಿಕಾಗೆ ಹೋದ ಸಮಯದಲ್ಲಿ ಪ್ರಿಯಾಂಕ ಮತ್ತು ಉಪೇಂದ್ರ ಅವರು ಪ್ರೀತಿಯಲ್ಲಿದ್ದರು. ಪ್ರೀತಿಸುತ್ತಿರುವ ಇಬ್ಬರು ಪ್ರೇಮಿಗಳು ಸಾಮಾನ್ಯವಾಗಿ ಫೋನ್ ನಲ್ಲಿ ಮಾತನಾಡುತ್ತಾರೆ. ಅದೇ ರೀತಿ ಉಪೇಂದ್ರ ಮತ್ತು ಪ್ರಿಯಾಂಕ ಅವರು ರಾ-ತ್ರಿ ಮಾತನಾಡಲು ಶುರು ಮಾಡಿದರೆ, ಬೆಳಗಿನಜಾವದ ವರೆಗೂ ಮಾತನಾಡುತ್ತಿದ್ದರಂತೆ. ಉಪೇಂದ್ರ ಅವರ ಮನೆಗೆ 5000 ಬರುತ್ತಿದ್ದ ಫೋನ್ ಬಿಲ್, ಪ್ರೀತಿಸಲು ಶುರು ಮಾಡಿದ ನಂತರ 40 ರಿಂದ 60,000 ಸಾವಿರ ಬಿಲ್ ಬರಲು ಶುರು ಆಯಿತಂತೆ. ಅದೇ ರೀತಿ ಪ್ರಿಯಾಂಕ ಅವರ ಮನೆಯಲ್ಲಿ ಕೂಡ ಫೋನ್ ಬಿಲ್ ಜಾಸ್ತಿ ಬರಲು ಶುರು ಆಯಿತಂತೆ.

Upendra-Priyanka

ಫೋನ್ ಬಿಲ್ ಜಾಸ್ತಿ ಬರಲು ಶುರುವಾದಾಗ, ಇದನ್ನು ಗಮನಿಸಿದ ಪ್ರಿಯಾಂಕ ಅವರ ತಾಯಿ, ವಿಚಾರಿಸಿದಾಗ ಪ್ರಿಯಾಂಕ ಅವರು ಉಪೇಂದ್ರ ಅವರನ್ನು ಪ್ರೀತಿಸುತ್ತಿರುವ ವಿಚಾರ ಗೊತ್ತಾಯಿತಂತೆ. ವಿಷಯ ತಿಳಿದ ತಕ್ಷಣ ಪ್ರಿಯಾಂಕ ಅವರ ತಾಯಿ, ನೀನು ಮೊದಲು ಮದುವೆಯಾಗು ಫೋನ್ ಬಿಲ್ ಕಟ್ಟಲು ಆಗುವುದಿಲ್ಲ ಎಂದಿದ್ದರಂತೆ. ಇದೆ ರೀತಿ ಉಪೇಂದ್ರ ಅವರ ಮನೆಯಲ್ಲೂ ಸಂದೇಹ ಬಂದಿತ್ತಂತೆ. ನಂತರ ಎರಡು ಕುಟುಂಬದವರನ್ನು ಒಪ್ಪಿಸಿ ಮದುವೆಯಾಗುತ್ತಾರೆ. 2003 ರಲ್ಲಿ ಬೆಂಗಾಲಿ ಸಂಪ್ರದಾಯದ ಪ್ರಕಾರ ಉಪೇಂದ್ರ ಮತ್ತು ಪ್ರಿಯಾಂಕ ಮದುವೆಯಾಗುತ್ತಾರೆ. ಮದುವೆ ಆಗೋ ಸಂದರ್ಭದಲ್ಲಿ ಪ್ರಿಯಾಂಕ ಅವರಿಗೆ ಹೆಚ್ಚಾಗಿ ಕನ್ನಡ ಬರುತ್ತಿರಲಿಲ್ಲ, ಮದುವೆಯಾದ ನಂತರ ಬಹಳ ಚೆನ್ನಾಗಿ ಕನ್ನಡ ಕಲಿತ ಪ್ರಿಯಾಂಕ ಈಗ ಅದ್ಭುತವಾಗಿ ಕನ್ನಡ ಮಾತನಾಡುತ್ತಾರೆ.

Upendra-Priyanka

ಜೊತೆಗೆ ಮದುವೆಯಾದ ನಂತರ ಪ್ರಿಯಾಂಕ ಅವರು ಕರ್ನಾಟಕದ ಸಂಸ್ಕೃತಿಯನ್ನು ಬಹಳ ಚೆನ್ನಾಗಿ ಕಲಿತರು. ಈಗ ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಸುಂದರವಾದ ಸುಖ ಸಂಸಾರ ನಡೆಸುತ್ತಿದ್ದಾರೆ. ನಮ್ಮ ಉಪೇಂದ್ರ ಹಾಗು ಪ್ರಿಯಾಂಕಾ ದಂಪತಿಗಳ ಸುಂದರ ಫೋಟೋಗಳನ್ನು ನೀವು ಇಲ್ಲಿ ನೋಡಬಹುದು! ಉಪೇಂದ್ರ ಅವರ ಮುದ್ದಾದ ಕುಟುಂಬದ ಫೋಟೋಗಳನ್ನು ನೀವು ಇಲ್ಲಿ ನೋಡಬಹುದು! ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಮತ್ತಷ್ಟು ಮಾಹಿತಿಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

 

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •