Umashri

ಅಸಲಿಗೆ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಉಮಾಶ್ರಿ ದಿನಕ್ಕೆ ಎಷ್ಟು ಸಂಭಾವನೆ ಪಡೆಯುತ್ತಿದ್ದಾರೆ ಗೊತ್ತಾ..?

Home

ಕನ್ನಡ ಕಿರುತೆರೆಯಲ್ಲಿ ಕೆಲವೊಂದಿಷ್ಟು ಸೀರಿಯಲ್ಗಳು ಆರಂಭದಲ್ಲಿಯೇ ತುಂಬಾ ದೊಡ್ಡದಾದ ರೀತಿ ಯಶಸ್ಸು ಗಳಿಸುತ್ತವೆ. ಹಾಗೂ ಕುತೂಹಲದಿಂದ ಎಲ್ಲಾ ಪ್ರೇಕ್ಷಕರನ್ನು ಎದುರು ನೋಡುವಂತೆ ಮಾಡುತ್ತವೆ. ಅದರ ಸಾಲಿಗೆ ಈಗ ಪುಟ್ಟಕ್ಕನ ಮಕ್ಕಳು ಸಹ ಸೇರಿದೆ. ಜೊತೆ ಜೊತೆಯಲಿ ನಿರ್ದೇಶಕ ಆರೂರು ಜಗದೀಶ್ ಅವರೇ ಈ ಪುಟ್ಟಕ್ಕನ ಮಕ್ಕಳು ಸೀರಿಯಲ್ ನಿರ್ದೇಶನ ಮಾಡುತ್ತಿದ್ದು, ನಿರ್ಮಾಣ ಕೂಡ ಇವರದೇ ಸಂಸ್ಥೆಯಲ್ಲಿ ಆಗುತ್ತಿದೆ. ಸೀರಿಯಲ್ ನ ಎಲ್ಲ ಜವಾಬ್ದಾರಿಯನ್ನು ಆ ಸಂಸ್ಥೆಯೇ ತೋರುತ್ತಿದ್ದು ಈ ಧಾರಾವಾಹಿಯಲ್ಲಿ ಯಾವ ಯಾವ ನಟ-ನಟಿಯರಿಗೆ ಎಷ್ಟು ಸಂಭಾವನೆ ನೀಡಬೇಕೆಂದು ಮೊದಲೇ ಅವರೇ ನಿಯೋಜನೆ ಮಾಡಿಕೊಂಡಿದ್ದಾರೆ.

ಹಾಗೆ ಅದರಿಂದ ಬರುವ ಹೆಚ್ಚು ಲಾಭವನ್ನು ಆ ಸಂಸ್ಥೆಯೇ ಪಡೆಯುತ್ತದೆ. ಹೌದು ಈಗಾಗಲೇ ಐದು ದಿನಗಳಿಂದ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ತುಂಬಾನೇ ಯಶಸ್ವಿಯಾಗಿದೆ ಎನ್ನಬಹುದು. ಕಾರಣ ಅನುಭವ ಇರುವ ನಟಿ ಉಮಾಶ್ರೀ ಅವರು ಪುಟ್ಟಕ್ಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಇವರ ಅಭಿನಯ ನೋಡಿ ಆರೂರು ಜಗದೀಶ್ ಅವ್ರೆ ಬೆರಗಾಗಿದ್ದಾರೆ. ದಿನಕ್ಕೆ ಉಮಾಶ್ರೀ ಅವರಿಗೆ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನಟನೆ ಮಾಡಲಿಕ್ಕೆ ಬರೋಬ್ಬರಿ 45 ಸಾವಿರ ರೂಪಾಯಿ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ಮುಂಚೆ ಜೀ ಕನ್ನಡದ ಖ್ಯಾತ ಧಾರಾವಾಹಿ ಜೊತೆ ಜೊತೆಯಲಿ ನಟ ಅನಿರುದ್ಧ್ ಅವರು 35 ಸಾವಿರ ರೂಪಾಯಿಯನ್ನು ದಿನಕ್ಕೆ ಸಂಭಾವನೆ ರೂಪದಲ್ಲಿ ಪಡೆಯುತ್ತಿದ್ದರು.
ಅಸಲಿಗೆ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಉಮಾಶ್ರಿ ದಿನಕ್ಕೆ ಎಷ್ಟು ಸಂಭಾವನೆ ಪಡೆಯುತ್ತಿದ್ದಾರೆ ಗೊತ್ತಾ..?
ಆದರೀಗ ನಟಿ ಉಮಾಶ್ರೀಯವರು ಅವರನ್ನು ಹಿಂದಿಕ್ಕಿ ದಿನಕ್ಕೆ 45 ಸಾವಿರ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಕಳೆದ ವರ್ಷವೇ ಇದರ ಶೂಟಿಂಗ್ ಆರಂಭವಾಗಿದ್ದು, ಪೂರ್ವ ತಯಾರಿ ನಡೆಸಿ ಈಗ ಪುಟ್ಟಕ್ಕನ ಮಕ್ಕಳು ಎಂಬ ಸೀರಿಯಲ್ ಪ್ರಸಾರ ಆಗುತ್ತಿದೆ. ಹಾಗೆ ತಿಂಗಳಿಗೆ 15 ರಿಂದ 20 ದಿನಗಳ ಕಾಲ ಶೂಟಿಂಗ್ ಇರಲಿದ್ದು, ನಟಿ ಉಮಾಶ್ರೀ ಅವರಿಗೆ ಬರೋಬ್ಬರಿ 9 ರಿಂದ 10 ಲಕ್ಷ ರೂಪಾಯಿ ಸಂಭಾವನೆ ನೀಡಲಾಗುತ್ತದೆ ಎಂದು ಕೇಳಿಬಂದಿದೆ. ಹಾಗೆ ಮುಂದಿನ ವಾರವೇ ಸೀರಿಯಲ್ ರೇಟಿಂಗ್ ಕೊಡ ಹೊರ ಬೀಳುತ್ತಿದ್ದು, ಅಭಿಮಾನಿಗಳು ಈಗಾಗಲೇ ಕಾತುರದಿಂದ ಪುಟ್ಟಕ್ಕನ ಮಕ್ಕಳು ಸೀರಿಯಲ್ ಅದೆಷ್ಟು ಟಿಆರ್ ಪಿ ಪಡೆಯಬಹುದು ಎಂದು ಎದುರುನೋಡುತ್ತಿದ್ದಾರೆ..




ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...