ಮದುವೆ ಆಯಿತು. ೧ ತಿಂಗಳು ಎಲ್ಲವೂ ಚೆನ್ನಾಗಿಯೇ ಇತ್ತು. ಅವರ ಗಂಡನ ಕೂಡು ಕುಟುಂಬ. ಅವರು ಮೂರುಜನ ಅಣ್ಣ ತಮ್ಮಂದಿರು. ಮೂರು ಜನ ಒರಗಿತ್ತಿಯರು.ಅವರ ಅತ್ತೆ ರುದ್ರಮ್ಮ ಮತ್ತು ಮಕ್ಕಳು ಅಂತ ಹತ್ತು ಬಾಯಿಗಳು ತಿನ್ನಬೇಕು. ಗಂಡಸರು ವಾರಕ್ಕೆ ದುಡಿದು ಹತ್ತೋ ಇಪ್ಪತ್ತೋ ರೂಪಾಯಿಯನ್ನು ಅಮ್ಮನ ಕೊಡೋರು. ಅದನ್ನು ತೆಕ್ಕೊಂಡು ರುದ್ರಮ್ಮ ಹಾಂಗೋ ಹಿಂಗೋ ಸಂಸಾರ ತೂಗಿಸೋರು.

ಈ ಮದ್ದೆ ಉಮಾಶ್ರೀ ಅವರಿಗೂ ಮತ್ತು ಅವರ ಗಂಡನ ನಡುವೆ ಜಗಳ, ಕಿತ್ತಾಟ ಶುರುವಾಯಿತು. ಅವರ ಸಹನೆಯ ಕಟ್ಟೆ ಒಡೆಯಲು ಆರಂಭವಾಯಿತು. ಮದುವೆಯಾದ ಒಂದೂವರೆ ಎರಡು ತಿಂಗಳಿನಲ್ಲಿಯೇ ಈ ಕೆಟ್ಟ ಅನುಭವಗಳು ಉಮಾ ಅವರಿಗೆ ಘಾಸಿಗೋಳಿಸಿದವು.ಹಸಿವು ತಾಳಲಾರದೆ ತವರು ಮನೆಗೆ ಬಂದು ಉಳಿಯಲು ಆರಂಭಸಿದರು. ಎರಡು ಹೊತ್ತು ತಾಯಿಯನ್ನು ಹೇಗೆ ನೋಡಿಕೊಳ್ಳಬೇಕು, ತಂಗಿಯರನ್ನು ಹೇಗೆ ಕಾಣಬೇಕು, ಒಬ್ಬ ಅಣ್ಣನಾಗಿ, ಮಗನಾಗಿ ತನ್ನ ಕರ್ತವ್ಯಗಳೇನು ಇದ್ಯಾವುದರ ಕುರಿತು ಅವರ ಗಂಡ ನವರಿಗೆ ಅರಿವು ಇರಲಿಲ್ಲ.

ಈ ಮದ್ದೆ ಉಮಾಶ್ರೀ ಅವರಿಗೂ ಮತ್ತು ಅವರ ಗಂಡನ ನಡುವೆ ಜಗಳ, ಕಿತ್ತಾಟ ಶುರುವಾಯಿತು. ಅವರ ಸಹನೆಯ ಕಟ್ಟೆ ಒಡೆಯಲು ಆರಂಭವಾಯಿತು. ಮದುವೆಯಾದ ಒಂದೂವರೆ ಎರಡು ತಿಂಗಳಿನಲ್ಲಿಯೇ ಈ ಕೆಟ್ಟ ಅನುಭವಗಳು ಉಮಾ ಅವರಿಗೆ ಘಾಸಿಗೋಳಿಸಿದವು.ಹಸಿವು ತಾಳಲಾರದೆ ತವರು ಮನೆಗೆ ಬಂದು ಉಳಿಯಲು ಆರಂಭಸಿದರು. ಎರಡು ಹೊತ್ತು ತಾಯಿಯನ್ನು ಹೇಗೆ ನೋಡಿಕೊಳ್ಳಬೇಕು, ತಂಗಿಯರನ್ನು ಹೇಗೆ ಕಾಣಬೇಕು, ಒಬ್ಬ ಅಣ್ಣನಾಗಿ, ಮಗನಾಗಿ ತನ್ನ ಕರ್ತವ್ಯಗಳೇನು ಇದ್ಯಾವುದರ ಕುರಿತು ಅವರ ಗಂಡ ನವರಿಗೆ ಅರಿವು ಇರಲಿಲ್ಲ.

ಅವರು ಶಿಕ್ಷಣವಂತರು ಅಲ್ಲ. ಆದರೆ ಬದುಕನ್ನು ಅರ್ಥಮಾಡಿಕೊಳ್ಳಲು ಈ ಶಾಲಾ ಶಿಕ್ಷಣದ ಅಗತ್ಯವೇನೂ ಇರಲಿಲ್ಲ.. ಅವರು ಬೇರೆ ಯಾಗಿ ಸಂಸಾರ ಮಾಡಿದರು ಅದು 2 ತಿಂಗಳು ಮಾತ್ರ ಅವರ ಗಂಡ ಅವರನ್ನು ಬಿಟ್ಟು ಹೋದರು, ಆಗ ಉಮಾಶ್ರೀ ಅವರು ಅವರ ತವರು ಮನೆಯಲ್ಲೇ ವಾಸವಾದರು. ಆದರೆ ಅವರ ಅಮ್ಮ ಕಿರಿ ಕಿರಿ, ಮೂದಲಿಕೆ.

umashree-life

ಅತೀ ಹೆಚ್ಚು ಅವಾಚ್ಯ ಶಬ್ದ ಬಳಕೆ, ರೋಸಿ ಹೋಗಿದ್ದ ಉಮಾಶ್ರೀ, ಅವರ ಅಮ್ಮನ ಮಾತು, ಮಟ್ಟ ಮತ್ತು ಸಂಸ್ಕಾರದ ಸಮಾನತೆ ಕಾಯ್ದುಕೊಂಡಿದ್ದ ಉಮಾ ಸತ್ತು ದೊಡ್ಡ ಬಾಯಿಯ ಬಾಯಡಿ ಉಮಾ ಹುಟ್ಟಿದಳು. ನಿನ್ನ ಮನೇಲಿ ನಾನು ಊಟ ಮಾಡಲ್ಲ. ನಾನು ಪ್ರತ್ಯೇಕ ಉಳಕೊಳ್ತೀನಿ. ಬೇಯಿಸಿಕೊಳ್ತೀನಿ. ಉಳಿಯಲು ಒಂದು ಸಣ್ಣ ಜಾಗ ಕೊಡು, ನಿನ್ನ ಮಾತು ಸಹವಾಸ ಯಾವುದು ಬೇಡ ಎಂದು ಅವರ ಅಮ್ಮನಿಗೆ ಹೇಳಿದರು.

ಪಕ್ಕದ ಮನೇಲಿ ಲೀಲಮ್ಮ ಅವರ ಹತ್ತಿರ 5 ರೂಪಾಯಿ ಸಾಲ ಇಸಗೊಂಡು ಒಂಟಿ ಬದುಕನ್ನು ಬಚ್ಚಲು ಮನೆಯಲ್ಲಿ ಆರಂಭ ಮಾಡಿದರು. ಅವರಲ್ಲಿ ಒಂದು ಓಲೆ ಇಟ್ಟು, ಇಡ್ಲಿ ತಪ್ಪಲೆ ತಂದು ಇಡ್ಲಿ ಮಾಡಿ ಅದನ್ನು ಮಾರಲು ಆರಂಭ ಮಾಡಿದರು. ನಾಳೆ ಹೇಗೋ ಗೊತ್ತಿರಲಿಲ್ಲ. ಕಡ್ಡಿಯಂತಾಗಿ ಸೂರಗಿ, ಕೊರಗಿ, ಕರಗಿ ಹೋಗಿದ್ದ ಶರೀರದ ಆ ಗುಡೊಳಗೆ ಬದುಕಿ ಬೆಳೆದು ನಿಲ್ಲುವ ಒಂದು ಛಲದ ಮಿಣುಕು ದೀಪ. ಇದನ್ನೇ ವಿಧಿ ವಿಲಾಸ ಅನ್ನೋದೇ…

ಅವರಿಗೆ ಬದುಕಲು ಅಲ್ಲಿ ಜಾಗ, ಆಸರೆ ಇರಲಿಲ್ಲ. ಅಂಥ ಹೊತ್ತಲ್ಲಿ ಪ್ರತಿದಿನ ಅವರಿಗೆ ರಂಗ ಪ್ರಯೋಗಗಳ ಧ್ವನಿ ಕೇಳಿಸುತಿತ್ತು ಒಂದು ದಿನ ಆ ರಂಗ ಪ್ರಯೋಗದ ನಟಿ ಬರಲಿಲ್ಲ ತಕ್ಷಣ ರಂಗ ಪ್ರಯೋಗಕ್ಕಾಗಿ ಒಬ್ಬ ಮಹಿಳೆ ಅವರಿಗೆ ಬೇಕಾಗಿರುವಾಗ ಉಮಾಶ್ರೀ ಯವರಿಗೆ ಎಲ್ಲ ಪಾತ್ರಗಳು ನೆನಪು ಆಗಿ ಬಿಟ್ಟಿದ್ದವು ಅಲ್ಲಿಂದ ಅವರ ಸಾಧನೆಯ ದಾರಿ ಪ್ರಾರಂಭವಾಯಿತು…

350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯ. 6000ಕ್ಕೂ ಹೆಚ್ಚು ರಂಗ ಪ್ರಯೋಗಗಳು. ವಡಲಾಳದ ಸಾಕವ್ವ, ಪುಟ್ನನಂಜ ಚಿತ್ರದ ಪುಟ್ನನಂಜಿ, ಗುಲಾಬಿ ಟಾಕೀಸ ಚಿತ್ರದ ಗುಲಬಿ ಇವು ಅತ್ಯಂತ ಪ್ರಸಿದ್ಧಯನ್ನು ತಂದು ಕೊಟ್ಟವು..

ಬಾಲ್ಯ, ಯೌವನಗಳಲ್ಲಿ ಹೆಣ್ಣು ಬದುಕು ಅನುಭವಿಸಿದ ಅಸಹಾಯಕತೆ, ತಬ್ಬಲಿತನ, ಅಸಹನೀಯತೆ ಮತ್ತು ಸ್ವಂತಿಕೆಯ ಗಟ್ಟಿ ನಿರ್ಧಾರದಿಂದ ಅದನ್ನು ಮೀರಿ ನಿಲ್ಲುವ ಛಾತಿಯ ಜೀವನ ದರ್ಶನ ಇವರದು..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •