ನಮಸ್ತೇ ಸ್ನೇಹಿತರೆ, ಉಮಾಶ್ರೀಯವರು ಸಿನಿಮಾ ನಟಿ ಹಾಗೂ ರಾಜಕಾರಣಿ. ಇವರು 1957 ರಲ್ಲಿ ತಿಪಟೂರು ಎಂಬಲ್ಲಿ ಜನಿಸುತ್ತಾರೆ.. ಈಗ ಇವರಿಗೆ 63 ವರ್ಷ. 1984 ರಲ್ಲಿ ಅನುಭವ ಸಿನಿಮಾದ ಮೂಲಕ ಇವರು ಬೆಳ್ಳಿ ತೆರೆಗೆ ಕಾಲಿಡುತ್ತಾರೆ. ಸುಮಾರು 400 ಸಿನಿಮಾಗಳಲ್ಲಿ ಊಮಾಶ್ರಿಯವರು ನಟಿಸಿದ್ದಾರೆ.. ಇನ್ನೂ ಇವರಿಗೆ ಗುಲಾಬಿ ಸಿನಿಮಾದ ನಟನೆಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ನಟಿ ಉಮಾ ಶ್ರೀ ಅವರಿಗೆ ಇಬ್ಬರೂ ಮಕ್ಕಳು ಇದ್ದಾರೆ.. ಒಂದು ಗಂಡು ಹಾಗೂ ಹೆಣ್ಣು. ಇವರ ಮಗನ ಹೆಸರು ವಿಜಯ್ ಕುಮಾರ್.. ಲಾಯರ್ ವೃತ್ತಿಯಲ್ಲಿ ತಮ್ಮ ಕೆಲಸವನ್ನು ಮುಂದುವರೆಸುತ್ತಿದ್ದಾರೆ..

ವಿಜಯ್ ಅವರಿಗೆ ಈಗ ಒಂದು ಹೆಣ್ಣು ಮಗುವಿದೆ‌. ಇನ್ನೂ ಉಮಾಶ್ರೀಯವರ ಮಗಳ ಹೆಸರು ಗಾಯತ್ರಿ.. ಡೆಂಟಿಸ್ಟ್ ವೈದ್ಯರಾಗಿ ಕೆಲಸವನ್ನು ಮಾಡುತ್ತಿದ್ದಾರೆ.. ಆದರೆ ಉಮಾಶ್ರೀಯವರ ಮಕ್ಕಳು ಮಾಧ್ಯಮದ ಮುಂದೆ ಬಂದಿಲ್ಲ. ಹೌದು ವಿಜಯ್ ಮತ್ತು ಗಾಯತ್ರಿಯವರು ಮಾಧ್ಯಮದಿಂದ ದೂರವಿದ್ದು ಯಾವುದೇ ಒಂದು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ.. ಉಮಾಶ್ರೀಯವರ ಗಂಡ ಬಿಟ್ಟು ಹೋದ ನಂತರ ಉಮಾಶ್ರೀಯವರು ಪಟ್ಟಂತಹ ಕಷ್ಟ ಅಷ್ಟಿಷ್ಟಲ್ಲ ಬೇರೆಯವರ ಮನೆಗಳಲ್ಲಿ ದಿನನಿತ್ಯ ಕೆಲಸ ಮಾಡಿ ಮಕ್ಕಳನ್ನು ಚೆನ್ನಾಗಿ ಓದಿಸಿ ದೊಡ್ಡವರನ್ನಾಗಿ ಮಾಡಿ ಅವರಿಗೆ ಮದುವೆ ಮಾಡಿಸಿದ್ದಾರೆ..

ಸುಮಾರು ವರ್ಷಗಳ ಕಾಲ ಉಮಾಶ್ರೀಯವರು ಚಲನಚಿತ್ರ ರಂಗದಲ್ಲಿ ಕಷ್ಟಪಟ್ಟು ಆರ್ಥಿಕ ಸಮಸ್ಯೆಯಿಂದ ಹೊರಗಡೆ ಬಂದಿದ್ದಾರೆ. ಯಾರೇ ಆದರೂ ಜೀವನದಲ್ಲಿ ಕಷ್ಟಪಟ್ಟು ಮುಂದೆ ಬಂದರೆ ಅವರಿಗೆ ಪ್ರತಿಫಲ ಅನ್ನುವುದು ಸಿಕ್ಕೇ ಸಿಗುತ್ತದೆ ಅನ್ನುವುದಕ್ಕೆ ಉಮಾಶ್ರೀಯವರು ಕೂಡ ಒಂದು ಉದಾಹರಣೆ.. ಇನ್ನೂ ಉಮಾಶ್ರೀಯವರು ರಾಜಕೀಯದಲ್ಲಿ ಮಿಂಚುತ್ತಿರುವ ಕಾರಣ ಮಕ್ಕಳು ಹಾಗೂ ಮೊಮ್ಮಕ್ಕಳ‌‌ ಜೊತೆ ಸಮಯ ಕಳೆಯುವುದಕ್ಕೆ ಆಗುತ್ತಿಲ್ಲ.. ಇದರಿಂದ ತುಂಬಾ ಬೇಸರವಿದೆ ಎಂದು ಹೇಳಿಕೊಂಡಿದ್ದಾರೆ. ಅದೇ ರೀತಿ ಯಾವುದೇ ಒಂದು ಸುಂದರ ಜೋಡಿ ನೋಡಿದಾಗ ಉಮಾಶ್ರೀಯವರಿಗೆ ನನ್ನ ಗಂಡ ನೆನಪಾಗುತ್ತಾರೆ ಎಂದು ಭಾವುಕರಾಗಿ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!