ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ನಾವು ಇಂದಿಗೆ ಕಳೆದುಕೊಂಡು ಒಂದು ವಾರವಾಗಿದೆ. ಆದರೂ ಕೂಡ ಅವರು ನಮ್ಮೊಂದಿಗೆ ಇಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲಾಗದ ಅಂತಹ ಪರಿಸ್ಥಿತಿ ನಮ್ಮಲ್ಲಿದೆ. ಹೌದು ಗೆಳೆಯರೇ ಸದಾ ನಗುತ್ತಿರುವ ಅವರ ಮುಖವನ್ನು ಹೇಗೆ ತಾನೇ ಮರೆಯಲು ಸಾಧ್ಯ. ಅವರ ಹತ್ತಿರ ಹೋದರೆ ಕೇವಲ ಒಳ್ಳೆಯ ವಿಷಯಗಳನ್ನು ಮಾತ್ರ ಕಲಿಯಲು ಸಾಧ್ಯವೆಂಬುದನ್ನು ಅವರನ್ನು ಬಲ್ಲವರು ಹೇಳುವ ಮಾತು.

ಯಾವುದೇ ವಿಚಾರವಿರಲಿ ಅದರ ಕುರಿತಂತೆ ಆಸಕ್ತಿ ತೋರಿಸುವವರು ಅದನ್ನು ಕಲಿಯುವವರೆಗೂ ಕೂಡ ಬಿಡುತ್ತಿರಲಿಲ್ಲ. ತಾನು ಸ್ಟಾರ್ ನಟನ ಮಗನೆಂಬ ಹಮ್ಮು ಹಾಗೂ ಬಿಮ್ಮುಗಳು ಎಂದಿಗೂ ಕೂಡ ಪುನೀತ್ ರಾಜಕುಮಾರ್ ಅವರಲ್ಲಿ ಇರಲಿಲ್ಲ. ಇನ್ನು ಬೇರೆ ಬೇರೆ ಸ್ಟಾರ್ ನಟರು ತಮ್ಮ ಕುಟುಂಬಗಳಿಗೆ ಅಷ್ಟೊಂದು ಸಮಯವನ್ನು ಕೊಡುವುದಿಲ್ಲ. ಕೇವಲ ಚಿತ್ರೀಕರಣ ಹಾಗೂ ಗೆಳೆಯರೊಂದಿಗೆ ಇರುವುದು ಹೆಚ್ಚು. ಆದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಹಾಗಲ್ಲ ಚಿತ್ರೀಕರಣದೊಂದಿಗೆ ತಮ್ಮ ಕುಟುಂಬಕ್ಕೂ ಕೂಡ ಸಮಯವನ್ನು ನೀಡುವ ಫ್ಯಾಮಿಲಿ.

ಪುನೀತ್ ಪತ್ನಿ ಹಾಗೂ ಮಕ್ಕಳ ಜೊತೆಗಿರುವ ಅಪರೂಪದ ಚಿತ್ರಗಳು🤩 | Puneeth Rajkumar Family | Puneeth Daughters Pic - YouTube

ಹೌದು ಗೆಳೆಯರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ತಮ್ಮ ಪತ್ನಿ ಹಾಗೂ ಹೆಣ್ಣು ಮಕ್ಕಳ ಜೊತೆಗೆ ಮತ್ತು ಕುಟುಂಬದ ಜೊತೆಗೆ ಆಗಾಗ ಪ್ರವಾಸಗಳಿಗೆ ಹೋಗುತ್ತಿದ್ದರು. ಅದರಲ್ಲೂ ಕೆಲವು ವರ್ಷಗಳ ಹಿಂದಷ್ಟೇ ಫಾರಿನ್ ಪ್ರವಾಸಕ್ಕೆ ಹೋಗಿರುವ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದ್ದವು. ಅದರಲ್ಲಿ ಕೆಲವು ಭಾವಚಿತ್ರಗಳನ್ನು ನೀವು ಕೂಡ ಇಲ್ಲಿ ನೋಡಬಹುದಾಗಿದೆ. ಈ ಕೆಳಗೆ ಕಾಣಿಸುತ್ತಿರುವ ವಿಡಿಯೋದಲ್ಲಿ ಅಪ್ಪು ರವರು ತಮ್ಮ ಕುಟುಂಬದೊಂದಿಗೆ ಫಾರಿನ್ ಟೂರ್ ಗೆ ಹೋಗಿರುವ ವಿಡಿಯೋವನ್ನು ನೋಡಬಹುದಾಗಿದೆ. ಈ ವಿಡಿಯೋದಲ್ಲಿ ಕಾಣಿಸುತ್ತಿರುವ ನಗು ಇನ್ನು ಮುಂದೆ ಸಿಗುವುದಿಲ್ಲ ಎಂಬ ಬೇಸರ ಪ್ರತಿಯೊಬ್ಬರಲ್ಲೂ ಮೂಡೋದು ಸಹಜ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!