ಪ್ರತಿಯೊಬ್ಬ ಮಹಿಳೆ ಯಾವಾಗಲೂ ತಾನು ಯಂಗ್ ಆಗಿ ಕಾಣಬೇಕೆಂದು ಬಯಸುತ್ತಾಳೆ.  ಅದರಲ್ಲೂ ಹೊಳೆಯುವ ಚರ್ಮ, ವಯಸ್ಸಾದರೂ ಕಿರಿಯರಂತೆ ಕಾಣವ ಮಹಿಳೆಯರನ್ನು ನೋಡಿದಾಗ ಅಸೂಸೆಯಾಗುವುದು ಸಹಜ. ಬಹುತೇಕ  ನಟಿಯರನ್ನು ನೋಡಿದಾಗ ಅವರ ನಿಜವಾದ ವಯಸ್ಸು ಎಷ್ಟು ಎಂದು ಕಂಡುಹಿಡಿಯುವುದು ಅಸಾಧ್ಯ. ಇನ್ನು ಅನೇಕ ಮಹಿಳೆಯರು ತಾವು ಯಂಗ್ ಆಗಿ ಕಾಣಲು ವಿವಿಧ ರೀತಿಯ ಸೌಂದರ್ಯವರ್ಧಕಗಳನ್ನು ಬಳಸುತ್ತಾರೆ. ಆದರೆ ಇದನ್ನು ಬಳಸುವುದರಿಂದ ಕೆಲವೇ ಗಂಟೆಗಳವರೆಗೆ ಮಾತ್ರ ಯಂಗ್ ಆಗಿ ಕಾಣುವಂತೆ ಮಾಡುತ್ತದೆ. ಆದರೆ ಸೌಂದರ್ಯವರ್ಧಕಗಳಲ್ಲಿರುವ ರಾಸಾಯನಿಕಗಳ ಅಡ್ಡಪರಿಣಾಮಗಳು ಅದರ ದೀರ್ಘಕಾಲೀನ ಬಳಕೆಯಿಂದಾಗಿ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. ಅಷ್ಟೇ ಅಲ್ಲ, ಬಹಳ ಬೇಗ ವಯಸ್ಸಾದವರಂತೆ ಕಾಣುತ್ತೀರಿ.

tricks

ಆದರೆ ಈಗ ನೀವು ಇದಕ್ಕೆಲ್ಲಾ ಚಿಂತಿಸಬೇಕಾಗಿಲ್ಲ. ತಜ್ಞರು ಹೇಳಿರುವ ಈ ಸಲಹೆಗಳನ್ನು ಅನುಸರಿಸಿದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಒಂದು ವೇಳೆ ನೀವು ಯಂಗ್ ಆಗಿ ಕಾಣಲು ಮಾರ್ಗಗಳನ್ನು ಹುಡುಕುತ್ತಿದ್ದರೆ, ಈ ಲೇಖನದಲ್ಲಿ ನಾವು 40 ನೇ ವಯಸ್ಸಿನಲ್ಲಿಯೂ 30 ವರ್ಷದವರಂತೆ ಕಾಣಲು ಏನು ಮಾಡಬೇಕು ಎಂದು ಹೇಳಲಿದ್ದೇವೆ.

ವಯಸ್ಸಾಗುತ್ತಿದ್ದಂತೆ ಮಹಿಳೆಯರು ತಮ್ಮ ದೇಹದ ಕಡೆ ಗಮನ ಕಳೆದುಕೊಳ್ಳುತ್ತಾರೆ.  ಇದು ತೂಕ ಹೆಚ್ಚಾಗಲು ಕಾರಣವಾಗುತ್ತದೆ. ವಿಶೇಷವಾಗಿ ಬೊಜ್ಜು ಬರಲು ಪ್ರಾರಂಭಿಸುತ್ತದೆ. ಆಗ ನೋಡಲು ವಿಚಿತ್ರವಾಗಿ ಕಾಣುವಿರಿ. ಹಾಗೆಯೇ ಹೊಟ್ಟೆಯ ಕೊಬ್ಬಿನಿಂದಾಗಿ, ಹೆಚ್ಚು ವಯಸ್ಸಾದ ಹಾಗೆ ಕಾಣಲು ಪ್ರಾರಂಭಿಸುತ್ತಾರೆ. ಮುಖದ ಮೇಲೆ ಮಾತ್ರ ಕೇಂದ್ರೀಕರಿಸಿ, ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡದಿದ್ದರೆ, ನೀವು ಯಂಗ್ ಆಗಿ ಕಾಣಿಸದೇ ಇರಬಹುದು.

tricks

ಆದ್ದರಿಂದ ನೀವು 40 ರ ಆಸುಪಾಸಿನಲ್ಲಿದ್ದರೆ ನಿಮ್ಮ ಹೊಟ್ಟೆಯ ಕೊಬ್ಬು ಸಾಕಷ್ಟು ಹೆಚ್ಚಿದ್ದರೆ ಅದನ್ನು ಕಡಿಮೆ ಮಾಡಲು ಪ್ರಯತ್ನಿಸಿ. ಇದಕ್ಕಾಗಿ ವ್ಯಾಯಾಮ ಮತ್ತು ಯೋಗ ಮಾಡಿ. ದೈಹಿಕ ಚಟುವಟಿಕೆಯನ್ನು ಮಾಡುವುದರಿಂದ ನೀವು ಸಕ್ರಿಯವಾಗಿರುವುದಲ್ಲದೆ, ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ನಿಮ್ಮ ದೇಹವನ್ನು ಸ್ಲಿಮ್ ಆಗಿ ಕಾಣುವಂತೆ ಮಾಡುತ್ತದೆ. ಇದಲ್ಲದೆ, ನಿಯಮಿತ ವ್ಯಾಯಾಮವು ಚರ್ಮವನ್ನು ಸುಧಾರಿಸುತ್ತದೆ ಮತ್ತು ನಿಮ್ಮನ್ನು ಯಂಗ್ ಆಗಿ ಕಾಣುವಂತೆ ಮಾಡುತ್ತದೆ.

tricks

ಮುಖದ ಸೌಂದರ್ಯವನ್ನು ಹೆಚ್ಚಿಸಲು ಟೊಮೆಟೊಗಳನ್ನು ಸಹ ನೀವು ಬಳಸಬಹುದು. ಟೊಮೆಟೊದಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಸಿ ಕಂಡುಬರುವುದರಿಂದ ಇದು ಮುಖವನ್ನು ಸುಂದರಗೊಳಿಸುತ್ತದೆ. ಮೈಬಣ್ಣವನ್ನು ಹೆಚ್ಚಿಸುತ್ತದೆ ಮತ್ತು ಮುಖದ ಸುಕ್ಕುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ಆಂಟಿ-ಆಕ್ಸಿಡೆಂಟ್, ಪೊಟ್ಯಾಶಿಯಮ್ ಮತ್ತು ಲೈಕೋಪೀನ್ ನಂತಹ ಅನೇಕ ಅಂಶಗಳನ್ನು ಒಳಗೊಂಡಿದೆ. ಇದು ಡಾರ್ಕ್ ಸರ್ಕಲ್ ಮತ್ತು ಹಣೆಯ ಸೂಕ್ಷ್ಮ ರೇಖೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದರಿಂದಾಗಿ ನಿಮ್ಮ ನಿಜವಾದ ವಯಸ್ಸು ಪತ್ತೆಯಾಗುವುದಿಲ್ಲ. 10 ವರ್ಷಕ್ಕಿಂತ ಕಡಿಮೆ ವಯಸ್ಸಿನವರಂತೆ ಕಾಣುತ್ತೀರಿ. ಹಾಗಾದರೆ ಟೊಮೆಟೊ ಹೇಗೆ ಬಳಸಬೇಕೆಂದು ತಿಳಯೋಣ…

ಟೊಮೆಟೊ ಬಳಸುವ ವಿಧಾನ

*ನಿಮ್ಮ ಮುಖವನ್ನು ಚೆನ್ನಾಗಿ ಸ್ವಚ್ಛಗೊಳಿಸಿ.

*ನಂತರ ಮುಖಕ್ಕೆ ತಾಜಾ ಟೊಮೆಟೊ ರಸವನ್ನು ಹಚ್ಚಿ, 10 ನಿಮಿಷಗಳ ಕಾಲ ಒಣಗಲು ಬಿಡಿ.

*ನಂತರ ಮುಖವನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

*ವಾರಕ್ಕೆ ಎರಡು ಬಾರಿಯಾದರೂ ಹೀಗೆ ಮಾಡಿ.

*ಹೀಗೆ ನಿಯಮಿತವಾಗಿ ಟೊಮೆಟೊ ಬಳಸುವುದರಿಂದ, ಕೆಲವು ದಿನಗಳಲ್ಲಿ ನೀವು ಚರ್ಮದಲ್ಲಿನ ವ್ಯತ್ಯಾಸವನ್ನು ಕಾಣುವಿರಿ.

tricks

ಹೀಗೂ ಬಳಸಬಹುದು

ನೀವು ಟೊಮೆಟೊಗೆ ಕೆಲವು ಮಿಶ್ರಣವನ್ನು ಬೆರೆಸಿ ಸಹ ಬಳಸಬಹುದು.

ಇದಕ್ಕಾಗಿ 2 ಟೀ ಸ್ಪೂನ್ ಮೊಸರು ಮತ್ತು 1 ಟೀ ಸ್ಪೂನ್ ನಿಂಬೆ ರಸವನ್ನು 2 ಟೀ ಸ್ಪೂನ್ ಟೊಮೆಟೊ ರಸದಲ್ಲಿ ಬೆರೆಸಿ ಪೇಸ್ಟ್ ತಯಾರಿಸಿ.

ಈಗ ಈ ಪೇಸ್ಟ್ ಅನ್ನು ಹತ್ತಿಯ ಸಹಾಯದಿಂದ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ.

15 ನಿಮಿಷ ಬಿಟ್ಟು ಮುಖ ತೊಳೆಯಿರಿ.

ನೀವು ವಾರದಲ್ಲಿ ಎರಡು ಬಾರಿ ಈ ರೀತಿ ಮಾಡಿದರೆ ಒಳ್ಳೆಯದು.

ಹೀಗೆ ಮಾಡುವುದರಿಂದ ಮುಖದ ಸುಕ್ಕುಗಳು ಕಡಿಮೆಯಾಗುತ್ತವೆ.

tricks

ಹೆಚ್ಚು ನೀರು ಕುಡಿಯಿರಿ

ನಿಮ್ಮ ನಿಜ ವಯಸ್ಸಿಗಿಂತ 10 ವರ್ಷ ಚಿಕ್ಕವರಾಗಿ ಕಾಣಲು ನೀವು ಬಯಸಿದರೆ, ರಾಸಾಯನಿಕ ಭರಿತ ಸೌಂದರ್ಯ ಉತ್ಪನ್ನಗಳನ್ನು ಬಳಸುವ ಬದಲು, ನಿಮ್ಮ ಹೆಚ್ಚು ದ್ರವ ಪದಾರ್ಥ ಸೇವಿಸಿ. ಇದು ಅಗ್ಗದ ಮಾರ್ಗ ಅಂತಾನೇ ಹೇಳಬಹುದು. ಸುಂದರವಾಗಿ ಮತ್ತು ಯುವಕರಂತೆ ಕಾಣಲು ಇದಕ್ಕಿಂತ ಉತ್ತಮವಾದ ದಾರಿ ಇನ್ನೊಂದಿಲ್ಲ. ದೇಹದಲ್ಲಿ ನೀರಿನ ಕೊರತೆಯಿಂದಾಗಿ ಚರ್ಮದ ಮೇಲೆ ಸುಕ್ಕುಗಳು ಪ್ರಾರಂಭವಾಗುತ್ತವೆ. ಆಗ ನೀವು ವಯಸ್ಸಾದಂತೆ ಕಾಣಲು ಪ್ರಾರಂಭಿಸುತ್ತೀರಿ. ದಿನವಿಡೀ 8 ರಿಂದ 10 ಲೋಟ ನೀರು ಕುಡಿಯಿರಿ ಮತ್ತು ನಿಮ್ಮ ದೇಹವನ್ನು ಹೈಡ್ರೀಕರಿಸಿ.

ಹಣ್ಣಿನ ರಸ ಕುಡಿಯಿರಿ

ಇದಲ್ಲದೆ,  ನಿಯಮಿತವಾಗಿ ಹಣ್ಣಿನ ರಸವನ್ನು ಕುಡಿಯುವುದರಿಂದ ನೀವು ಕಿರಿಯರಂತೆ ಕಾಣುವಿರಿ. ಆದ್ದರಿಂದ ನೀರಿನೊಂದಿಗೆ ನಿಮ್ಮ ಉಪಾಹಾರದಲ್ಲಿ ಒಂದು ಲೋಟ ಹಣ್ಣು ಅಥವಾ ತರಕಾರಿ ಜ್ಯೂಸ್ ಅಥವಾ ಸೂಪ್ ಇರಲಿ. ನೀವು ಕಿತ್ತಳೆ, ಬೀಟ್, ಆಮ್ಲಾ ಸೇರಿದಂತೆ ವಿವಿಧ ರೀತಿಯ ಹಣ್ಣುಗಳ ಜ್ಯೂಸ್ ಆಯ್ಕೆ ಮಾಡಿಕೊಳ್ಳಬಹುದು. ತೆಂಗಿನ ನೀರು ಸಹ ಬಹಳ ಒಳ್ಳೆಯದು. ಕಡಿಮೆ ಕ್ಯಾಲೋರಿ ಹೊಂದಿರುವ ಈ ಪಾನೀಯದಲ್ಲಿ ಉತ್ಕರ್ಷಣ ನಿರೋಧಕಗಳು, ಅಮೈನೋ-ಆಮ್ಲಗಳು, ಕಿಣ್ವಗಳು, ಬಿ-ಕಾಂಪ್ಲೆಕ್ಸ್ ಜೀವಸತ್ವಗಳು, ವಿಟಮಿನ್ ಸಿ ಮತ್ತು ಹಲವಾರು ಪ್ರಮುಖ ಲವಣಗಳಿವೆ. ಅಲ್ಲದೆ, ಇದರಲ್ಲಿರುವ ಸೈಟೊಕಿನಿನ್ ವಯಸ್ಸಾದ ಚಿಹ್ನೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ನಿಮ್ಮ ಮೈಬಣ್ಣವೂ ಸುಧಾರಿಸುತ್ತದೆ ಮತ್ತು ನೀವು ಚಿಕ್ಕವರಂತೆ ಕಾಣುತ್ತೀರಿ.

ಇಷ್ಟು ಸಲಹೆಯನ್ನು ಸರಿಯಾಗಿ ಪಾಲಿಸಿದ್ದೇ ಆದಲ್ಲಿ, ನೀವು ನಿಮ್ಮ ವಯಸ್ಸಿಗಿಂತ 10 ವರ್ಷ ಚಿಕ್ಕವರಾಗಿ ಕಾಣಿಸಬಹುದು ಎನ್ನುತ್ತಾರೆ ತಜ್ಞರು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •