ಬಿಗ್​ ಬಾಸ್​ ಮನೆಯಲ್ಲಿ ನೀಡಿದ ವೈರಸ್ ಟಾಸ್ಕ್​ ಎಲ್ಲೆಲ್ಲೋ ಬೇರೆ ಬೇರೆ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಸ್ಪರ್ಧಿಗಳ ನಡುವೆ ದೊಡ್ಡ ಮಟ್ಟದ ದ್ವೇಷದ ಬೆಂಕಿ ಕೂಡ ಹತ್ತಿಕೊಳ್ಳುತ್ತಿದೆ. ಹೀಗಿರುವಾಗಲೇ ಒಬ್ಬರಿಗೊಬ್ಬರು ಗಂಭೀರ ಆರೋಪವನ್ನು ಮಾಡಿಕೊಳ್ಳುತ್ತಿದ್ದಾರೆ. ವೈರಸ್​ ತಂಡಕ್ಕೆ ಪ್ರಶಾಂತ್​ ಸಂಬರಗಿ ಕ್ಯಾಪ್ಟನ್​. ಮನುಷ್ಯರ ತಂಡಕ್ಕೆ ಲ್ಯಾಗ್​ ಮಂಜು ನಾಯಕರಾಗಿದ್ದಾರೆ. ವೈರಸ್​ ತಂಡದವರು ಮನುಷ್ಯರ ತಂಡದ ಮೇಲೆ ಆರೋಪ ಮಾಡುತ್ತಿದ್ದಾರೆ, ಮನುಷ್ಯರ ತಂಡದವರು ವೈರಸ್​ ಮೇಲೆ ತಪ್ಪನ್ನು ಹೊರಿಸುತ್ತಿದ್ದಾರೆ. ಈ ನಡುವೆ ಮಂಜು ಮತ್ತು ಶಮಂತ್​ ವಿರುದ್ಧ ನಿಧಿ ಸುಬ್ಬಯ್ಯ ಗಂಭೀರ ಆರೋಪ ಒಂದನ್ನು ಮಾಡಿದ್ದಾರೆ. 

Treasure

ಮಂಜು ಮತ್ತು ಶಮಂತ್​ ಉದ್ದೇಶಪೂರ್ವಕವಾಗಿ ಪರಚುತ್ತಿದ್ದಾರೆ. ಬೇಕೆಂತಲೇ ಅವರು ಎಲ್ಲೆಲ್ಲೋ ಮುಟ್ಟುತ್ತಿದ್ದಾರೆ. ನಮ್ಮ ತಂಡದವರು ಯಾರೊಬ್ಬರೂ ಹುಡುಗಿಯನ್ನು ಮುಟ್ಟಿಲ್ಲ. ಆದರೆ, ಅವರು ತಂಡದವರು ಹಾಗಲ್ಲ. ಪ್ಲ್ಯಾನ್​ ಮಾಡಿ ಅವರು ಬಂದು ನಮ್ಮನ್ನು ಹಿಡಿದುಕೊಳ್ಳುತ್ತಿದ್ದಾರೆ. ತುಂಬಾನೇ ರಫ್​ ಆಗಿ ನಡೆಸಿಕೊಳ್ಳುತ್ತಿದ್ದಾರೆ. ಮಂಜು ಬಂದು ನನ್ನನ್ನು ಎಲ್ಲೆಲ್ಲೋ ಮುಟ್ಟಿ ಎಸೆದಿದ್ದಾರೆ. ನಮಗೆ ಹೇಸಿಗೆ ಎನಿಸುತ್ತಿದೆ. ಈ ಆಟ ಸಾಕು ಇಲ್ಲಿಗೆ ನಿಲ್ಲಿಸಿ ಎಂದು ಕಣ್ಣೀರು ಹಾಕಿದ್ದಾರೆ. 

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •