ಕೇವಲ ಒಂದು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಯುವತಿ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಮೈಸೂರಿನ ಶ್ರೀರಾಂಪುರ ಎಸ್ಬಿಎಂ ಕಾಲೋನಿಯಲ್ಲಿ ನಡೆದಿರುವುದಾಗಿ ಮಾಧ್ಯಮ ಮೂಲಕ ಇದೀಗ ತಿಳಿದು ಬಂದಿದೆ. ಮೃತಪಟ್ಟ ದುರ್ದೈವಿಯ ಹೆಸರು ಆಶಾರಾಣಿ. ಇವರಿಗೆ 28 ವರ್ಷ, ಹಾಗೇನೇ ಯುವತಿ ಮೂಲತಹ ನಂಜನಗೂಡು ತಾಲ್ಲೂಕು,ಸರಗೂರು ಎಂಬ ಗ್ರಾಮದ ನಿವಾಸಿ.

Tragedy

ಹೌದು ಆಶಾರಾಣಿಯವರಿಗೆ ಕೇವಲ ಮದುವೆಯಾಗಿ ಒಂದು ತಿಂಗಳು ಕಳೆದಿತ್ತು. ಟೆಕ್ಕಿ ಪ್ರದೀಪ್ ಎನ್ನುವರ ಜೊತೆ ವಿವಾಹವಾಗಿತ್ತು. ಆದರೆ ಇದೀಗ ಸಾವನ್ನಪ್ಪಿರುವ ಆಶರಾಣಿ ಅವರ ಪೋಷಕರು ಹೇಳುವ ಹಾಗೆ ನಮ್ಮ ಮಗಳನ್ನು ಕೊಲೆ ಮಾಡಲಾಗಿದೆ ಎಂದು ಆರೋಪ ಮಾಡಿ ಕುವೆಂಪುನಗರದಲ್ಲಿ ದೂರನ್ನ ಸಹ ದಾಖಲು ಮಾಡಿದ್ದಾರೆ. ಹೌದು 5 ಲಕ್ಷ ಹಣ, 130 ಗ್ರಾಂ ಚಿನ್ನ ವರದಕ್ಷಣೆಯನ್ನಾಗಿ ಪ್ರದೀಪ್ ಅವರಿಗೆ ನೀಡಿ ಮಗಳ ಮದುವೆ ಮಾಡಿಕೊಟ್ಟಿದ್ದೆವು.

ಆದರೆ ಇನ್ನಷ್ಟು ಹೆಚ್ಚಿನ ವರದಕ್ಷಿಣೆ ಕೊಡಿ ಎಂಬುದಾಗಿ ಬೇಡಿಕೆ ಇಟ್ಟಿದ್ದರು ಎಂದು ಆಶರಾಣಿ ಪೋಷಕರು ಹೇಳಿ ಆರೋಪ ಮಾಡಿದ್ದಾರೆ. ನಂತರ ಈ ಪ್ರದೀಪ್ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆಯನ್ನ ನಡೆಸುತ್ತಿದ್ದಾರೆ ಎನ್ನಲಾಗಿ ಕೇಳಿಬಂದಿದೆ…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •