ಕೋವಲಂ: ಪ್ರೀತಿಗೆ ಯಾವುದೇ ಜಾತಿ, ಧರ್ಮ, ಭಾಷೆ, ಗಡಿ ಹಾಗೂ ವಯಸ್ಸಿನ ಮಿತಿ ಇಲ್ಲ. ಪವಿತ್ರ ಪ್ರೀತಿ ಎಲ್ಲವನ್ನು ಮೀರಿದ್ದು ಎನ್ನುವುದಕ್ಕೆ ಕೇರಳದ ಈ ಒಂದು ಲವ್​ಸ್ಟೋರಿ ಉತ್ತಮ ಉದಾಹರಣೆ ಆಗಿದೆ. ಆತ ಕೇರಳದ ಒಂದು ಪುಟ್ಟ ಹಳ್ಳಿಯ ಯುವಕ. ಆಕೆ ಇಂಗ್ಲಿಷ್​​ ಲೇಡಿ. ಇಬ್ಬರಿಗೂ ಎಲ್ಲಿಂದೆಲ್ಲಿ ಸಂಬಂಧ ಅಂದುಕೊಂಡರು ಇಬ್ಬರನ್ನು ಪ್ರೀತಿ ಎಂಬ ಸೇತುವೆ ಬೆಸಿದಿದೆ.

ಯುವಕನ ಹೆಸರು ಕನ್ನಪ್ಪನ್​ ಹಾಗೂ ಇಂಗ್ಲಿಷ್​ ಲೇಡಿಯ ಹೆಸರು ಮಿರಾಂಡಾ. ಇಬ್ಬರ ಲವ್​ ಸ್ಟೋರಿ ಯಾವ ಸಿನಿಮಾ ಸ್ಟೋರಿಗೂ ಕಡಿಮೆ ಇಲ್ಲ. ಇಬ್ಬರ ಲವ್ ಸ್ಟೋರಿ ಶುಭಾಂತ್ಯಗೊಂಡು ಇದೀಗ ತಮ್ಮ ಮಗುವಿನ ಸಮ್ಮುಖದಲ್ಲಿ ಅವದುಥುರಾ ದೇವಸ್ಥಾನದಲ್ಲಿ ಇಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಬ್ಬರನ್ನು ಒಂದು ಮಾಡಿದ್ದು, ಒಂದು ಪುಟ್ಟ ನಾಯಿ ಎಂಬುದೇ ವಿಶೇಷ. ಆ ನಾಯಿಯ ಹೆಸರು ಜೈಕಾ. ಮದುವೆ ಬಳಿಕ ಇಬ್ಬರು ಜೈಕಾ ಜತೆ ಸುಂದರ ಫೋಟೋ ಶೂಟ್​ ಕೂಡ ಮಾಡಿಸಿದ್ದಾರೆ.

ಇನ್ನು ಇಬ್ಬರ ಲವ್​ ಸ್ಟೋರಿಯ ಬಗ್ಗೆ ಹೇಳುವುದಾದರೆ, ಜೈಕಾ ಒಮ್ಮೆ ಅನಿರೀಕ್ಷಿತವಾಗಿ ಅರಣ್​ ಚಂದ್ರನ್​ (ಕಣ್ಣಪ್ಪನ್​) ಮನೆಗೆ ಓಡಿ ಹೋಗುತ್ತದೆ. ಅದನ್ನು ಹುಡುಕಿಕೊಂಡು ಮಿರಾಂಡ ಅವರ ಮನೆಗೆ ಬರುತ್ತಾರೆ. ಬಳಿಕ ಇಬ್ಬರಿಗೂ ಪರಸ್ಪರ ಪರಿಚಯವಾಗುತ್ತದೆ. ಇದೇ ಪರಿಚಯ ಸ್ನೇಹಕ್ಕೆ ತಿರುಗುತ್ತದೆ. ಬಳಿಕ ತುಂಬಾ ಸಲುಗೆ ಬೆಳೆದು ಒಬ್ಬೊರಿಗೊಬ್ಬರು ಪ್ರೀತಿಸಲು ಶುರು ಮಾಡುತ್ತಾರೆ.ಅರುಣ್​ ಚಂದ್ರನ್​ ಕೊವಲಂಗೆ ಭೇಟಿ ನೀಡುವ ವಿದೇಶಿಗರಿಗೆ ಸಮುದ್ರ ತೀರದಲ್ಲಿ ಸರ್ಫಿಂಗ್​ ಬಗ್ಗೆ ಹೇಳಿಕೊಡುತ್ತಾರೆ. ಮಿರಾಂಡ ಇಂಗ್ಲೆಂಡ್​ ಮೂಲದ ಉದ್ಯಮಿ ಆಗಿದ್ದು, ಲಾಕ್​ಡೌನ್​ಗೂ ಮುಂಚೆ ಕೇರಳದ ಕೊವಲಂ ಪ್ರವಾಸಕ್ಕೆಂದು ಬಂದ ಮಿರಾಂಡ ಲಾಕ್​ಡೌನ್​ನಿಂದಾಗಿ ಪ್ರಯಾಣದ ಮೇಲೆ ಏರಿದ ನಿರ್ಬಂಧದಿಂದಾಗಿ ಇಲ್ಲಿಯೇ ಲಾಕ್​ ಆಗುತ್ತಾರೆ.

ಇದರ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಮಿರಾಂಡಗೆ ಮತ್ತೆ ಇಂಗ್ಲೆಂಡ್​ ಹೋಗುವ ಅವಕಾಶ ದೊರೆತರೂ ಹಿಂದಿರುಗದೇ ಅರುಣ್​ ಜತೆಯಲ್ಲೇ ಉಳಿದುಕೊಳ್ಳುತ್ತಾರೆ. ಇಬ್ಬರ ಪ್ರೀತಿ ಅರುಣ್​ ಮನೆಗೆ ತಿಳಿದಿರುತ್ತದೆ. ಹೀಗಿರುವಾಗ ಮಿರಾಂಡ ಗರ್ಭಿಣಿ ಎಂಬ ವಿಚಾರ ತಿಳಿದು ಅರುಣ್​ ಕುಟುಂಬಕ್ಕೆ ಸಂತಸವಾಗುತ್ತದೆ. ಎರಡು ತಿಂಗಳ ಹಿಂದಷ್ಟೇ ಮಿರಾಂಡ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ಸಾಯಿ ಎಂದು ಹೆಸರಿಟ್ಟಿದ್ದಾರೆ. ಮಿರಾಂಡ ಆಸೆಯಂತೆಯೇ ಅಧಿಕೃತವಾಗಿ ಸಾಯಿ ಅರ್ಥೂರ್​ ಲಿಟಲ್​ಗುಡ್​ ಎಂದು ಹೆಸರಿಸಲಾಗಿದೆ.

ಮಗುವಿಗೆ ಜನ್ಮ ನೀಡಿದ ಬಳಿಕ ಕುಟುಂಬದ ಆಸೆ ನೆರವೇರಿಸಲು ಇಬ್ಬರು ಮದುವೆ ಆಗಲು ನಿರ್ಧರಿಸಿದರು. ಮಗು ಕೂಡ ಮದುವೆ ಮಂಟಪದಲ್ಲಿತ್ತು. ಅದ್ಧೂರಿಯಾಗಿ ಮದುವೆ ಕಾರ್ಯ ಮುಗಿದಿದ್ದು, ಆದಷ್ಟು ಬೇಗ ದಂಪತಿ ಇಂಗ್ಲೆಂಡ್​ಗೆ ತೆರಳುವ ಸಾಧ್ಯತೆ ಇದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •