ಪ್ರವಾಸ

ಪುನೀತ್ ರಾಜ್ ಕುಮಾರ್ ಅವರು ದಕ್ಷಿಣ ಅಮೆರಿಕಾದಲ್ಲಿ ಪ್ರವಾಸ ಮಾಡಿದ ವೀಡಿಯೋ ವೈರಲ್..

Cinema/ಸಿನಿಮಾ Home Kannada News/ಸುದ್ದಿಗಳು

ಪುನೀತ್ ರಾಜ್ ಕುಮಾರ್ ಅವರು ಬದುಕಿದ್ದಷ್ಟೂ ದಿನವೂ ತಮಗೂ ಇತರರಿಗೂ ಖುಷಿಯಾಗುವಂತೆ ಜೀವನ ನಡೆಸಿದವರು. ದುಡ್ಡಿದೆ ಎಂದು ಎಂದಿಗೂ ಹಮ್ಮು-ಬಿಮ್ಮಿನಿಂದ ನಡೆದುಕೊಂಡವರಲ್ಲ. ಹೇಗೆ ಬೇಕೆಂದರೆ ಹಾಗೆ ಹಣವನ್ನು ದುಂದುವೆಚ್ಚ ಮಾಡಿದವರೂ ಅಲ್ಲ. ಬದುಕಿಗೆ ಬೇಕಾಗಿದ್ದಷ್ಟನ್ನೇ ಬಳಸಿಕೊಂಡವರು. ಉಳಿದ ಹಣವನ್ನು ಜನ ಸೇವೆಯೇ ಜನಾರ್ಧನ ಸೇವೆ ಎಂದು ಅಭಿಮಾನಿಗಳಿಗಾಗಿ ಮೀಸಲಿಟ್ಟರು ಅಪ್ಪು. ಅಪ್ಪು ಅವರ ಗುಣಗಳ ಬಗ್ಗೆ  ಹೇಳಲು ಪದಗಳೇ ಸಿಗುವುದಿಲ್ಲ.

ಪುನೀತ್ ರಾಜ್ ಕುಮಾರ್ ಇಬ್ಬರು ಹೆಣ್ಣು ಮಕ್ಕಳು ಈಗ ಎಷ್ಟು ದೊಡ್ಡವರಾಗಿದ್ದಾರೆ ಗೊತ್ತಾ? ತಮ್ಮ ಮಕ್ಕಳ ಜೊತೆ ಪುನೀತ್ ಅವರು ಏಗಿರ್ತಾರೆ ನೋಡಿ.. – Public Master

ಪುನೀತ್ ರಾಜ್ ಕುಮಾರ್ ಅವರಿಗೆ ತಿನ್ನುವುದು ಎಂದರೆ ಬಹಳ ಇಷ್ಟ. ಅಪ್ಪು ಅವರು ಜಗತ್ತಿನ ಎಲ್ಲಾ ದೇಶಗಳ ಆಹಾರದ ರುಚಿ ನೋಡಲು ಬಯಸುತ್ತಿದ್ದರು. ಅದರಂತೆಯೇ ಅಪ್ಪು ಅವರು ಆಗಾಗ ಬೇರೆ ಬೇರೆ ದೇಶಗಳ ಊಟವನ್ನು ಸವಿಯುತ್ತಿದ್ದರು. ಅವರು ಎಲ್ಲೇ ಹೋದರು ಅಲ್ಲಿಯ ಊಟವನ್ನು ಸವಿಯದೆ ಇರುತ್ತಿರಲಿಲ್ಲ. ಈ ಬಗ್ಗೆ ಸ್ವತಃ ಅಪ್ಪು ಅವರೇ ಹಲವು ಸಂದರ್ಶನಗಳಲ್ಲೂ ಹೇಳಿಕೊಂಡಿದ್ದರು. ಅದರಂತೆಯೇ ಕಳೆದೆರಡು ವರ್ಷಗಳ ಹಿಂದೆ ಅಪ್ಪು ಅವರು ದಕ್ಷಿಣ ಅಮೇರಿಕಾದ ಪ್ರವಾಸ ಕೈಗೊಂಡಿದ್ದರು
ಈ ಪ್ರವಾಸದಲ್ಲಿ ಜಾಲಿಯಾಗಿ ಸುತ್ತಾಡಿದ್ದ ಅಪ್ಪು ಅವರು, ತಮ್ಮ ಬೆಸ್ಟ್ ಮೂಮೆಂಟ್ಸ್ ಗಳನ್ನು ಯೂಟ್ಯೂಬ್ ನ ತಮ್ ಪಿಆರ್ ಕೆ ಆಡಿಯೋ ಚಾನೆಲ್ ನಲ್ಲಿ ಅಪ್ ಲೋಡ್ ಮಾಡಿದ್ದರು. ಇದರಲ್ಲಿ ಅಪ್ಪು ಅವರು ಸ್ಕೈ ಡೈವಿಂಗ್ ಮಾಡಿದ್ದರು. ಇಗ್ಯಾಝು ಫಾಲ್ಸ್, ಅಡ್ವೆಂಚರ್ ಗೇಮ್, ಬೋಟಿಂಗ್, ಜಲಪಾತ ಸೇರಿದಂತೆ ರೋಮಾಂಚರವಾಗುವಂತ ಅಡ್ವೆಂಚರ್ಸ್ ಗೇಮ್ ಗಳನ್ನು ಆಡಿದ್ದಾರೆ. ಇದೆಲ್ಲಾ ಸಾಹಸಗಳ ವೀಡಿಯೋ ಅನ್ನು ಅಪ್ಪು ಅವರು ಅಪ್ ಲೋಡ್ ಮಾಡಿದ್ದರು. ಈ ವೀಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...