ತನ್ನ ಪ್ರೇಯಸಿಯನ್ನು ಗುಟ್ಟಾಗಿ ಭೇಟಿಯಾಗಲು ವ್ಯಕ್ತಿಯೊಬ್ಬ ತನ್ನ ಮನೆಯಿಂದ ಆಕೆಯ ಮನೆಯ ಬೆಡ್ ರೂಂಗೇ ಸುರಂಗ ಕಟ್ಟಿರುವ ಸಂಗತಿ ಮೆಕ್ಸಿಕೊದಲ್ಲಿ ಬೆಳಕಿಗೆ ಬಂದಿದೆ. ಮೆಕ್ಸಿಕೊದ ಡೆಲ್ ಪ್ರಾಡೋ ಎಂಬಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕನಾಗಿದ್ದ ಅಲ್ಬರ್ಟೊ ಹಾಗೂ ಪಮೇಲಾ ಎಂಬುವರ ನಡುವೆ ಪ್ರೀತಿ ಶುರುವಾಗಿತ್ತು. ಆದರೆ ಈ ಇಬ್ಬರೂ ವಿವಾಹಿತರಾಗಿದ್ದವರು. ಕದ್ದುಮುಚ್ಚಿ ಇವರಿಬ್ಬರ ನಡುವಿನ ಸಂಬಂಧ ಮುಂದುವರೆದಿತ್ತು. ಆದರೆ ಮನೆಯವರ ಭಯದ ನಡುವೆ ಈ ಪ್ರೇಮಿಗಳ ಭೇಟಿಯೂ ಕಷ್ಟವಾಗುತ್ತಿತ್ತು.

ಈ ಬಗ್ಗೆ ಯೋಚಿಸಿದ ಅಲ್ಬರ್ಟೊ ಕೊನೆಗೂ ಒಂದು ತೀರ್ಮಾನಕ್ಕೆ ಬಂದ. ಇಬ್ಬರ ಮನೆಯೂ ಸಮೀಪವೇ ಇದ್ದುದರಿಂದ ತನ್ನ ಮನೆಯಿಂದ ತನ್ನ ಪ್ರೇಯಸಿ ಮನೆ ನಡುವೆ ಸುರಂಗ ಕೊರೆಯಲು ಯೋಜನೆ ರೂಪಿಸಿದ. ಕೆಲವು ತಿಂಗಳಲ್ಲೇ ಪಮೇಲಾ ಬೆಡ್ ರೂಂಗೇ ನೇರ ತಲುಪುವಂತೆ ಸುರಂಗವನ್ನು ಕೊರೆದೇ ಬಿಟ್ಟ.

the-tunnel

ಸುರಂಗ ಕೊರೆದ ಕೆಲವು ತಿಂಗಳವರೆಗೂ ಇವರ ಭೇಟಿ ಯಾರ ಗಮನಕ್ಕೂ ಬರಲೇ ಇಲ್ಲ. ಆದರೆ ಹೀಗೆ ಒಂದು ದಿನ ಇದ್ದಕ್ಕಿದ್ದಂತೆ ಕೆಲಸದಿಂದ ಪಮೇಲಾ ಪತಿ ಜಾರ್ಜ್ ಬೇಗ ಬಂದಿದ್ದಾನೆ. ಬೆಡ್ ರೂಂಗೆ ಬಂದ ಜಾರ್ಜ್ ಗೆ ಯಾಕೋ ಅನುಮಾನ ಶುರುವಾಗಿದೆ. ಸೋಫಾ ಹಿಂಬದಿ ಯಾರೋ ಸರಿದಂತೆ ಕಂಡಿದ್ದು, ಬಗ್ಗಿ ನೋಡಿದವನಿಗೆ ಶಾಕ್ ಆಗಿದೆ. ಸೋಫಾ ಹಿಂಬದಿ ದೊಡ್ಡ ರಂಧ್ರ ಕಂಡುಬಂದಿದ್ದು, ಆ ಸುರಂಗದೊಳಗೆ ನಡೆದುಕೊಂಡು ಹೋದವನು ತಲುಪಿದ್ದು ಅಲ್ವರ್ಟೊ ಮನೆಗೆ.

ಈ ಸಮಯದಲ್ಲೇ ಇಬ್ಬರಿಗೂ ಜಟಾಪಟಿಯೂ ಆಗಿದೆ. ಪೊಲೀಸರನ್ನು ಕರೆಸಿದ ಜಾರ್ಜ್ ಅಲ್ಬರ್ಟೊನನ್ನು ಹಿಡಿದುಕೊಟ್ಟಿದ್ದಾನೆ. ಈ ಸುರಂಗ ಎಷ್ಟು ಉದ್ದ ಇದೆ ಎಂಬ ಕುರಿತು ಯಾವುದೇ ಮಾಹಿತಿ ಸಿಕ್ಕಿಲ್ಲ. ಈ ಘಟನೆ ನಂತರ ಈ ಪ್ರೇಮಿಗಳ ಕಥೆ ಏನಾಯಿತು ಎಂಬುದೂ ತಿಳಿಯಲಿಲ್ಲ. ಆದರೆ ಈ ಸುರಂಗದ ಪ್ರವೇಶ ದ್ವಾರ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

…….
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •