ನಮಸ್ತೆ ಸ್ನೇಹಿತರೆ, ಪಂಚರ್ ಹಾಕುತ್ತಿದ್ದ ಮಹಿಳೆಯನ್ನು ನೋಡಿದ ಪೋಲಿಸ್ ಇನ್ಸ್ಪೆಕ್ಟರ್ ಜೀಪ್ ನಿಲ್ಲಿಸಿ ಮಾಡಿದ ಕೆಲಸ ನೋಡಿ ಅಲ್ಲಿದ್ದ ಜನಗಳೆಲ್ಲಾ ದಂಗಾಗಿದ್ದಾರೆ.. ಅದೇ ಸಮಯ ಆ ಮಹಿಳೆಯ ಕಣ್ಣಲ್ಲಿ ಧಾರಾಕಾರವಾಗಿ ಕಣ್ಣೀರು ಹರಿಯಲು ಶುರುವಾಗುತ್ತದೆ.. ಅಷ್ಟಕ್ಕೂ ಈ ಘಟನೆಯಲ್ಲಿ ಏನಿದೆ ಎಂಬುದನ್ನು ಪೂರ್ತಿಯಾಗಿ ತಿಳಿಯೋಣ ಬನ್ನಿ. ಸ್ನೇಹಿತರೆ 2020 ರಲ್ಲಿ ಕೆಟ್ಟ ಘಟನೆಗಳಿಗೆ ಮಿತಿಯೇ ಇಲ್ಲ. ಸಾಕಷ್ಟು ನಡೆದಿದೆ‌‌.. ಈಗಿರುವಾಗ 2020 ರಲ್ಲಿ ಕೆಲವು ಒಳ್ಳೆಯ ಘಟನೆಗಳು ಕೂಡ ನಡೆದದೆ ಅದರಲ್ಲಿ ಈ ಘಟನೆ ಕೂಡ ಒಂದು.. ಒಬ್ಬ ಸ್ನೇಹ ಎಂಬ ಮಹಿಳೆ ಹೈವೇಗಳಲ್ಲಿ ಪಂಚರ್ ಹಾಕುವ ಕೆಲಸವನ್ನು ಮಾಡುತ್ತಿದ್ದಳು.

The-Puncher

ಈಗೆ ಒಂದು ದಿನ ಈ ಮಹಿಳೆ ಪಂಚರ್ ಹಾಕುವ ಸಮಯದಲ್ಲಿ ಅಲ್ಲಿಗೆ ಪೋಲಿಸ್ ಜೀಪ್ ಒಂದು ಬರುತ್ತದೆ.. ಸ್ನೇಹ ಕಷ್ಟಪಟ್ಟು ಲಾರಿ ಟೈರ್ ಗಳಿಗೆ ಪಂಚರ್ ಹಾಕುತ್ತಿರುವುದನ್ನು ನೋಡಿದ ಪೋಲಿಸ್.. ಜೀಪ್ ನಿಂದ ಕೆಳಗಿಳಿದು ಸ್ನೇಹ ಅವರ ಹತ್ತಿರ ಬರುತ್ತಾರೆ. ಇನ್ನೂ ಈ ಮಹಿಳೆಯ ಹತ್ತಿರ ಬಂದ ಪೋಲಿಸ್ ಈ ರೀತಿ ಕೇಳುತ್ತಾರೆ.. ಈ ದಿನ ರಕ್ಷಾ ಬಂಧನ ಹಬ್ಬ ಇದೆ ಇವತ್ತು ನಿಮ್ಮ ಅಣ್ಣನಿಗೆ ರಾಕಿ ಕಟ್ಟಲು ಹೋಗಲಿಲ್ವಾ.. ಈ ದಿನವೂ ಕೂಡ ಕೆಲಸ ಮಾಡುತ್ತಿದ್ದಿಯಾ ಎಂದು ಕೇಳುತ್ತಾರೆ.. ಇನ್ನೂ ಪೋಲಿಸ್ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗದ ಸ್ನೇಹ ಅವರು ಒಂದು ಕ್ಷಣ ಕಣ್ಣೀರು ಹಾಕುತ್ತಾರೆ.

ನಂತರ ನನಗೆ ಯಾರು ಅಣ್ಣ ಇಲ್ಲ.. ನನ್ನ ಜೀವನದಲ್ಲಿ ಇದುವರೆಗೂ ರಾಕಿ ಕಟ್ಟಿಲ್ಲ. ತಂದೆ ತಾಯಿಗೆ ನಾನು ಒಬ್ಬಳೇ ಮಗಳು.. ಅವರನ್ನು ನೋಡಿಕೊಳ್ಳಲು ರಸ್ತೆಯ ಬದಿಯಲ್ಲಿ ಹೋಡಾಡುವ ಗಾಡಿಗಳಿಗೆ ಪಂಚರ್ ಹಾಕುತ್ತಿದ್ದೇನೆ ಎಂದು ತಿಳಿಸುತ್ತಾರೆ‌.

The-Puncher

ಮಹಿಳೆಯ ಮಾತನ್ನು ಕೇಳಿದ ಪೋಲಿಸ್ ಇನ್ಸ್ಪೆಕ್ಟರ್ ಮನಸ್ಸು ಕರಗಿತು.. ಆ ಕೂಡಲೇ ಜೀಪ್ ಹೋಳಗಿದ್ದ ಸ್ವೀಟ್ ಬಾಕ್ಸ್ ಮತ್ತು ರಾಕಿಯನ್ನು ತಂದು ಆ ಮಹಿಳೆಗೆ ನೀಡಿ.. ತಗೋ ರಾಕಿ ಕಟ್ಟು ನಾನೇ ಇನ್ನು ಮುಂದೆ ನಿನಗೆ ಅಣ್ಣ ಎಂದು ಹೇಳುತ್ತಾರೆ..

ಇನ್ಸ್ಪೆಕ್ಟರ್ ಮಾತನ್ನು ಕೇಳಿದ ಆ ಮಹಿಳೆ ಕುಷಿಯಿಂದ ಕಣ್ಣೀರು ಹಾಕುತ್ತಾ ಪೋಲಿಸ್ ಗೆ ರಾಕಿಯನ್ನು ಕಟ್ಟುತ್ತಾರೆ.. ಈ ಸಮಯದಲ್ಲಿ ಪೋಲಿಸ್ ಕೂಡ ಭಾವುಕರಾಗಿದ್ದಾರೆ. ಜೀವನದಲ್ಲಿ ನಿನಗೆ ಏನೇ ಸಮಸ್ಯೆ ಬಂದರು ನನಗೆ ಹೇಳು, ನಾನು ನಿನಗೆ ಸಹಾಯ ಮಾಡುತ್ತೇನೆ ಎಂದು ಸ್ನೇಹ ಅವರಿಗೆ ಪೋನ್ ನಂಬರ್ ಕೊಟ್ಟು ಕೆಲಸದ ನಿಮಿತ್ತ ಹೊರಟು ಹೋಗುತ್ತಾರೆ.. ಸ್ನೇಹಿತರೆ ಯಾರೋ ಅಪರಿಚಿತ ಮಹಿಳೆಗೆ ಅಣ್ಣ ಇಲ್ಲ ಎಂದು ಗೊತ್ತಾಗಿ ಪಂಚರ್ ಹಾಕುವ ಮಹಿಳೆಗೆ ಪೋಲಿಸ್ ಮಾಡಿದ ಈ ಕೆಲಸದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •