ಸೋನುಸೂದ್ ಕೊರೋನಾದಿಂದ ದೇಶ ಸಂಕಷ್ಟದಲ್ಲಿದ್ದಾಗ ನೆರವು ನೀಡಿದ್ದರು. ಸಾವಿರಾರು ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಿದರು. ವಲಸೆ ಕಾರ್ಮಿಕರು ತಮ್ಮ ಊರಿಗೆ ಮರಳಲು ಬಸ್ ಸಿಗದಿದ್ದಾಗ ಅವರಿಗಾಗಿ ಬಸ್ಸಿನ ವ್ಯವಸ್ಥೆ ಮಾಡಿದರು. ಅನೇಕ ಯುವ ಜನತೆ ಕೆಲಸ ಇಲ್ಲದೇ ಕಂಗೆಟ್ಟಾಗ ಅವರಿಗೆ ಉದ್ಯೋಗ ಕೊಟ್ಟರು . ಅವರು ಸಿನಿಮಾದಲ್ಲಿ ವಿಲನ್ ಆದರೂ ನಿಜ ಜೀವನದಲ್ಲಿ ಹೀರೋ ಆದರು.

ಈಗ ಸೋನುಸೂದ್ ಅವರಿಗಾಗಿ ಜನರು ಕೃತಜ್ಞತೆ ಸಲ್ಲಿಸುವ ಸಲುವಾಗಿ ದೇವಸ್ಥಾನವನ್ನೇ ಕಟ್ಟಿಧಾರೆ. ಒಬ್ಬ ಸಿನಿಮಾ ನಟನೊಬ್ಬ ತಾನು ಮಾಡಿದ ಸಾಮಾಜಿಕ ಕಾರ್ಯಕ್ಕೆ ಜನರಿಂದ ದೇಗುಲ ಕಟ್ಟಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯ.

temple-of-sonusud

ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯ ದುಬ್ಬಾ ತಾಂಡ ಗ್ರಾಮದಲ್ಲಿ ಸೋನು ಹೆಸರಲ್ಲಿ ದೇವಸ್ಥಾನ ಕಟ್ಟಿಸಲಾಗಿದೆ. ಭಾನುವಾರ (ಡಿ.20) ಅದರ ಉದ್ಘಾಟನೆ ಕೂಡ ನೆರವೇರಿದೆ. ಲಾಕ್‌ಡೌನ್‌ ಸಮಯದಲ್ಲಿ ಮಾಡಿದ ಸಹಾಯ, ಕಷ್ಟದಲ್ಲಿ ಇರುವವರಿಗೆ ನೀಡುತ್ತಿರುವ ನೆರವು, ಅವರ ಮಾನವೀಯ ಗುಣ… ಇದನ್ನೆಲ್ಲ ಗಮನದಲ್ಲಿಟ್ಟು ಇಟ್ಟುಕೊಂಡು, ಊರಿನ ಗ್ರಾಮಸ್ಥರು ಸೋನು ಹೆಸರಲ್ಲಿ ದೇವಸ್ಥಾನ ಕಟ್ಟಿಸಿದ್ದಾರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!