ಈಗಿನ ಪ್ರಪಂಚದಲ್ಲಿ ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನ್ ಇರುತ್ತದೆ. ಮನುಷ್ಯರು ತಮ್ಮನ್ನು ತಾವು ನೋಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ತಮ್ಮ ಮೊಬೈಲ್ ಗಳ ಗಮನ ಹರಿಸುತ್ತಾರೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರ ವರೆಗೂ ಎಲ್ಲರ ಕೈಯಲ್ಲೂ ಈಗ ಸ್ಮಾರ್ಟ್ ಫೋನ್ ಇರುತ್ತದೆ. ಸ್ಮಾರ್ಟ್ ಫೋನ್ ಗಳಿಂದ ಒಳ್ಳೆಯ ಉಪಯೋಗಗಳು ಕೂಡ ಇವೆ, ಆದರೆ ಇದರ ಬಳಕೆ ಅತಿಯಾದಷ್ಟು ಅನುಕೂಲಕ್ಕಿಂತ ಅ-ನಾನುಕೂಲವೆ ಹೆಚ್ಚು. ಅತಿಯಾದ ಸ್ಮಾರ್ಟ್ ಫೋನ್ ಬಳಕೆ ಇಂದ ಹೆಚ್ಚು ತೊಂದರೆ ಆಗುತ್ತಿರುವುದು ಮಕ್ಕಳಿಗೆ. ಕೆಲವು ತಂದೆ ತಾಯಿ ಮಕ್ಕಳಿಗೆ ಊಟ ಮಾಡಿಸುವಾಗ, ಮಾತನಾಡಿಸಿ ಮುದ್ದು ಮಾಡಿ ಊಟ ಮಾಡಿಸುವುದಕ್ಕಿಂತ, ಸ್ನಾರ್ಟ್ ಫೋನ್ ಅನ್ನು ಕೈಗೆ ಕೊಟ್ಟು ಊಟ ಮಾಡಿಸುತ್ತಾರೆ. ಇನ್ನಿ ಕೆಲವು ಮಕ್ಕಳು ಗೇಮ್ ಆಡಬೇಕೆಂದು ಗಂಟೆಗಟ್ಟಲೆ ಕೈಯಲ್ಲಿ ಮೊಬೈಲ್ ಫೋನ್ ಹಿಡಿದುಕೊಂಡು ಕುಳಿತಿರುತ್ತಾರೆ. ಕೆಲವೊಮ್ಮೆ ಮೊಬೈಲ್ ಇಂದಾಗಿ ತಂದೆ ತಾಯಿಯರು ತಮ್ಮ ಮಕ್ಕಳನ್ನು ಅಲಕ್ಷ್ಯ ಮಾಡಿರುವ ಘ-ಟನೆಗಳನ್ನು ಕೂಡ ನಾವು ನೋಡಿದ್ದೇವೆ. ಪುಟ್ಟ ಮಕ್ಕಳಿರುವ ತಂದೆ ತಾಯಿ ಹೆಚ್ಚಾಗಿ ಮೊಬೈಲ್ ಬಳಕೆ ಮಾಡುವುದರಿಂದ ಮಕ್ಕಳ ಮೇಲೆ ಅದು ಹೇಗೆ ಪ-ರಿಣಾಮ ಬೀರುತ್ತದೆ ಗೊತ್ತಾ ? ಈ ಘ-ಟನೆ ಓದಿ ನಿಮಗೆ ತಿಳಿಯುತ್ತದೆ..

teacher-at-school

ರಜೆ ಮುಗಿದು ಶಾಲೆ ಶುರುವಾದಾಗ ಪಾಠ ಮಾಡಲು ತರಗತಿಗೆ ಬಂದ ಟೀಚರ್, ಮುಂದೆ ನೀವು ಏನಾಗಲು ಬಯಸುತ್ತೀರಾ, ನಿಮ್ಮ ಗು-ರಿ ಏನು ಎಂಬುದರ ಬಗ್ಗೆ ಟಿಪ್ಪಣಿ ಬರೆಯಿರಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು. ಶಿಕ್ಷಕಿ ಹೇಳಿದಂತೆ, ವಿದ್ಯಾರ್ಥಿಗಳು ತಮ್ಮ ಜೀವನದ ಗು-ರಿ ಬಗ್ಗೆ ಟಿಪ್ಪಣಿ ಬರೆದು ಕೊಟ್ಟರು. ಮಕ್ಕಳು ಬರೆದ ಟಿಪ್ಪಣಿಯನ್ನು ತಿ-ದ್ದುವ ಸಲುವಾಗಿ ಉತ್ತರ ಪತ್ರಿಕೆಗಳನ್ನು ಮನೆಗೆ ತೆಗೆದುಕೊಂಡು ಹೋದರು. ಮನೆಯಲ್ಲಿ ತಮ್ಮ ಮಕ್ಕಳನ್ನೆಲ್ಲಾ ಮಲಗಿಸಿ, ವಿದ್ಯಾರ್ಥಿಗಳು ಬರೆದಿದ್ದ ಉತ್ತರ ಪತ್ರಿಕೆಗಳನ್ನು ತಿದ್ದಲು ಶುರು ಮಾಡಿದರು. ಶಿಕ್ಷಕಿಯ ಪತಿ ಅವರ ಪಕ್ಕದಲ್ಲೇ ಕುಳಿತು ಮೊಬೈಲ್ ನಲ್ಲಿ ಕ್ಯಾಂಡಿ ಕ್ರ#ಶ್ ಗೇಮ್ ಆಡುತ್ತಿದ್ದರು. ಎಲ್ಲಾ ಉತ್ತರ ಪತ್ರಿಕೆಗಳನ್ನು ತಿ-ದ್ದದ ಟೀಚರ್, ಕೊನೆ ಉತ್ತರ ಪತ್ರಿಕೆಯನ್ನು ಕೈಗೆ ತೆಗೆದುಕೊಂಡರು. ಆ ಉತ್ತರ ಪತ್ರಿಕೆಯಲ್ಲಿದ್ದ ಟಿಪ್ಪಣಿಯನ್ನು ಓದಿ ಶಿಕ್ಷಕಿಯ ಕಣ್ಣಲ್ಲಿ ನೀರು ಬರಲು ಆರಂಭವಾಯಿತು.

teacher-at-school

ಇದನ್ನು ನೋಡಿದ ಅವರ ಪತಿ, ಯಾಕೆ ಅಳುತ್ತಿದ್ದೀಯ ಎಂದು ಕೇಳಿದರು, ಆದರೆ ಟೀಚರ್ ಉತ್ತರಿಸಲಿಲ್ಲ, ಆಗ ಅವರ ಪತಿ ಮತ್ತೊಮ್ಮೆ ಹೇ ಏನಾಯಿತು ಯಾಕೆ ಅಳುತ್ತಿದ್ದೀಯ ಎಂದು ಮತ್ತೊಮ್ಮೆ ಕೇಳಿದರು. ನೀವು ಜೀವನದಲ್ಲಿ ಮುಂದೆ ಏನಾಗುತ್ತೀರಾ ಎಂಬ ವಿಷಯದ ಬಗ್ಗೆ ಟಿಪ್ಪಣಿ ಬರೆಯಿರಿ ಎಂದು ವಿದ್ಯಾರ್ಥಿಗಳಿಗೆ ಹೇಳಿದ್ದೆ, ಅದರಲ್ಲಿ ಒಬ್ಬ ವಿದ್ಯಾರ್ಥಿ ಬರೆದಿರುವ ಉತ್ತರ ಓದಿ ಅಳು ಬರ್ತಿದೆ ಕಣ್ರೀ ಎನ್ನುತ್ತಾರೆ ಶಿಕ್ಷಕಿ. ಹೌದಾ ಆ ಪತ್ರಿಕೆಯಲ್ಲಿ ಅಂಥ ವಿಶೇಷವಾಗಿ ಏನಿದೆ, ಎಂದು ಕೇಳುತ್ತಾರೆ ಶಿಕ್ಷಕಿಯ ಪತಿ. ಆಗ ವಿದ್ಯಾರ್ಥಿ ಬರೆದಿದ್ದ ಟಿಪ್ಪಣಿಯನ್ನು ಓದಿ ತಿಳಿಸುತ್ತಾರೆ ಶಿಕ್ಷಕಿ.. ಉತ್ತರ ಪತ್ರಿಕೆಯಲ್ಲಿ ಹೆಡ್ ಲೈನ್ ಇದ್ದದ್ದು ಹೀಗೆ “ನಾನು ಸ್ಮಾರ್ಟ್ ಫೋನ್ ಆಗಲು ಬಯಸುತ್ತೇನೆ… ನನ್ನ ಪೋಷಕರು ಸ್ಮಾರ್ಟ್ ಫೋನ್ ಅನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ, ನನಗಿಂತ ಹೆಚ್ಚಾಗಿ ತುಂಬಾ ಕೇರ್ ಮಾಡುತ್ತಾರೆ.

teacher-at-school

ನನ್ನ ತಂದೆ ಕೆಲಸದಿಂದ ಮನೆಗೆ ಬಂದಾಗ, ಸ್ಮಾರ್ಟ್ ಫೋನ್ ಅವರಿಗೆ ರೀಲ್ಯಾಕ್ಸ್ ಆಗುವಂತೆ ಮಾಡುತ್ತದೆ. ನನ್ನ ಪೋಷಕರು ಮನೆಯಲ್ಲಿದ್ದಾಗ ಫೋನ್ ಜೊತೆ ಹೆಚ್ಚಿನ ಸಮಯ ಕಳೆಯುತ್ತಾರೆ ನನ್ನ ಜೊತೆ ಅಲ್ಲ. ಫೋನ್ ರಿಂಗ್ ಆದ ತಕ್ಷಣ ರಿಸೀವ್ ಮಾಡುತ್ತಾರೆ, ಆದರೆ ನಾನು ಎಷ್ಟು ಬಾರಿ ಕೂ-ಗಿದರೂ ಕೇಳಿಸಿಕೊಳ್ಳುವುದಿಲ್ಲ. ನಾನು ಅ-ಳುತ್ತಿದ್ದರೂ ಅವರು ಫೋನ್ ನಲ್ಲಿ ಗೇಮ್ ಆಡುತ್ತಿರುತ್ತಾರೆ, ನನ್ನ ಜೊತೆ ಮಾತ್ರ ಆಟ ಆಡುವುದಿಲ್ಲ. ಅವರು ಫೋನ್ ನಲ್ಲಿ ಮಾತನಾಡುತ್ತಿರುವಾಗ ನಾನು ಅ-ಳುತ್ತಿರುವುದು ಅವರಿಗೆ ಕೇಳಿಸುವುದಿಲ್ಲ. ಅದೆಷ್ಟೇ ಮುಖ್ಯವಾದ ವಿಷಯವಾದರು ಕೂಡ ತಮ್ಮ ಖಾಲಿ ಸಮಯವನ್ನು ಫೋನ್ ಜೊತೆ ಕಳೆಯುತ್ತಾರೆ. ಅದನ್ನು ತುಂಬಾ ಪ್ರೀತಿಸುತ್ತಾರೆ ನನ್ನನ್ನು ಅಲ್ಲ. ಮ-ಲಗುವಾಗ ಫೋನ್ ಅನ್ನು ಪಕ್ಕದಲ್ಲೇ ಇಟ್ಟುಕೊಳ್ಳುತ್ತಾರೆ. ಬೆಳಗ್ಗೆ ಎದ್ದ ತಕ್ಷಣ ಮೊದಲು ಅದನ್ನೇ ನೋಡುತ್ತಾರೆ. ಅದಕ್ಕೆ ನನ್ನ ಆಸೆ ಏನೆಂದರೆ ತಂದೆ ತಾಯಿ ಜೊತೆ ಇರುವ ಸ್ಮಾರ್ಟ್ ಫೋನ್ ಆಗಬೇಕೆಂದು, ಆಗ ನಾನು ನನ್ನ ತಂದೆ ತಾಯಿ ಜೊತೆ ಪ್ರತಿಕ್ಷಣ ಇರಬಹುದು..” ಎಂದು ಟಿಪ್ಪಣಿ ಬರೆದಿದ್ದರು ಒಬ್ಬ ವಿದ್ಯಾರ್ಥಿ.

ಟೀಚರ್ ಈ ಉತ್ತರವನ್ನು ಓದುತ್ತಿದ್ದಾಗ ಅವರ ಪತಿಗೆ ಹೃ-ದಯ ಹಿo-ಡಿದಂತೆ ಆಯಿತು. ಯಾರು ಈ ಉತ್ತರ ಬರೆದಿದ್ದು ಎಂದು ಕೇಳಿದಾಗ, “ಈ ಉತ್ತರ ಬರೆದಿದ್ದು ನಮ್ಮ ಮಗಳು ಕಣ್ರೀ..” ಎಂದು ಹೇಳಿದರು ಟೀಚರ್. ಪೋಷಕರಿಗೆ ಎಷ್ಟೇ ಕೆಲಸ ಇದ್ದರು, ಏನೇ ಟೆನ್ಷನ್ ಇದ್ದರು, ಮಕ್ಕಳೊಡನೆ ಕಾಲ ಕಳೆಯಬೇಕು. ಮಕ್ಕಳನ್ನು ಅಸಡ್ಡೆ ಮಾಡಿ ಮೊಬೈಲ್ ಬಳಕೆ ಜಾಸ್ತಿ ಮಾಡಿದರೆ, ಮಕ್ಕಳ ಮನಸ್ಸಿನ ಮೇಲೆ ಯಾವ ರೀತೀಯ ಪ್ರಭಾವ ಬೀರುತ್ತದೆ ಎನ್ನುವುದಕ್ಕೆ ಈ ಘಟನೆ ಒಂದು ಉದಾಹರಣೆ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಹಾಗು ನಿಮ್ಮ ಸ್ನೇಹಿತರ ಜೊತೆಗೆ ಶೇರ್ ಮಾಡಿರಿ. ಇಂತಹ ಮತ್ತಷ್ಟು ಇಂಟೆರೆಸ್ಟಿಂಗ್ ಕಥೆ ಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •