37 ವರ್ಷಕ್ಕೆ ತಾರಾ ಮದುವೆ ಆಗಿದ್ದು ಯಾಕೆ ಗೊತ್ತಾ.??ಪ್ರೀತಿಸಿದ ಹುಡುಗನಿಗಾಗಿ 16 ವರ್ಷ ಕಾದಿದ್ದ ತಾರಾ.!!

Cinema/ಸಿನಿಮಾ Home Kannada News/ಸುದ್ದಿಗಳು

ನಮಸ್ಕಾರ ಸ್ನೇಹಿತರೇ,ಹುಟ್ಟು ಶ್ರೀಮಂತ ಕುಟುಂಬದಲ್ಲಿ ಜನಿಸಿದರು ಕೂಡ ಯಾವುದೇ ಅಮ್ಮು ಭೀಮ್ಮು ಇಲ್ಲದೆ ಚಿತ್ರರಂಗದಲ್ಲಿ ಭದ್ರವಾಗಿ ನೆಲೆಯೂರ ಬೇಕು ಅಂತ ಸಾಕಷ್ಟು ಏಳುಬೀಳುಗಳನ್ನು ಕಂಡರೂ ಕೂಡ ಚಂದನವನದಲ್ಲಿ ತಮ್ಮ ಪ್ರತಿಭೆಯಿಂದ ಗುರುತಿಸಿಕೊಂಡವರು ತಾರಾ ಅವರು.ಇವರಲ್ಲಿದ್ದ ಪ್ರತಿಭೆ ಹಾಗೂ ಚಾತುರ್ಯತೆಯಾನ್ನು ನೋಡಿ ಇವರನ್ನು ಎಲ್ಲರೂ ಪ್ರೀತಿಯಿಂದ ತಾರಮ್ಮ ಎಂದು ಕರೆಯುತ್ತಾರೆ.

ಶ್ರೀಮಂತ ಕುಟುಂಬದಲ್ಲಿ ಹುಟ್ಟಿದರೂ ಕೂಡ ತಾರಾ ಅನುರಾದ ಅವರು ವೈವಾಹಿಕ ಜೀವನಕ್ಕೆ ಕಾಲಿಡುವುದು ಮಾತ್ರ ಅಷ್ಟು ಸುಲಭವಾಗಿರಲಿಲ್ಲ. ಒಂದು ಕಡೆ ಚಿತ್ರರಂಗದಲ್ಲಿ ಯಶಸ್ಸು ಮತ್ತೊಂದು ಕಡೆ ತುಂಬಾ ಪ್ರೀತಿಯಿಂದ ಹಾಗೂ ಯಾವುದಕ್ಕೂ ಕೊರತೆ ಇಲ್ಲದ ಹಾಗೆ ನೋಡಿಕೊಳ್ಳುತ್ತಿದ್ದ ಕುಟುಂಬ. ಆದರೂ ಕೂಡ ತಾರಾ ಅವರು ಮದುವೆಯಾಗಿದ್ದು ಅವರ 37 ನೇ ವಯಸ್ಸಿನಲ್ಲಿ.ಅಷ್ಟಕ್ಕೂ ತಾರಾ ಅವರು 36ವರ್ಷ ಆಗುವವರೆಗೂ ವೈವಾಹಿಕ ಜೀವನಕ್ಕೆ ಕಾಲಿಡದೆ ಇರಲು ಕಾರಣವೇನು ಗೊತ್ತಾ? ಹಾಗಾದರೆ ನೋಡೋಣ ಬನ್ನಿ.

ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ನಟಿ ತಾರಾ ಅವರು ಸಿನಿಮಾಟೋಗ್ರಾಫರ್ ಎಚ್ ಸಿ ವೇಣು ಗೋಪಾಲ್ ಅವರ ಜೊತೆ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಈ ಜೋಡಿ ಪ್ರೀತಿಯ ಕತೆ ನಿಜಕ್ಕೂ ಪ್ರೇಮಿಗಳಿಗೆ ಸ್ಪೂರ್ತಿ ಅನ್ನಬಹುದು. ಯಾಕೆಂದರೆ ಅತ್ತಿರ ಅತ್ತಿರ 20ವರ್ಷಗಳ ಪ್ರೀತಿ ಮದುವೆಯಲ್ಲಿ ಖುಷಿಕೊಡುತ್ತದೆ ಎಂದರೆ ಅದರ ಹಿಂದೆ ನಿಜಕ್ಕೂ ತಾರಾ ಮತ್ತು ವೇಣು ಅವರು ತಪಸ್ಸು ಮಾಡಿದ್ದರು ಎಂದರೆ ತಪ್ಪಾಗಲಾರದು.

1989 ರಲ್ಲಿ ಪರಿಚಯವಾಗುವ ತಾರಾ ಹಾಗೂ ವೇಣು ಅವರ ನಡುವೆ ಪ್ರೀತಿ ಹುಟ್ಟುತ್ತದೆ. ಆದರೆ ಅವರ ಪ್ರೀತಿ ಈಗಿನ ಕಾಲದ ಅವರ ಹಾಗೆ ಇರುವುದಿಲ್ಲ. ಮನಸ್ಸಿನಲ್ಲಿ ಇಬ್ಬರು ಪ್ರೀತಿಯ ಮಂದಿರವನ್ನು ಕಟ್ಟಿಕೊಂಡಿರುತ್ತಾರೆ.ಆಗ ತಾರಾ ಅವರಿಗೆ ಕೇವಲ 18 ವರ್ಷ.ಹೀಗಾಗಿ ಪ್ರೀತಿ ಹುಟ್ಟಿದ ಐದು ವರ್ಷಗಳ ಬಳಿಕ ತಾರಾ ಅವರು ಮನೆಯಲ್ಲಿ ತಮ್ಮ ಪ್ರೀತಿ ವಿಷಯವನ್ನು ಹೇಳಿಕೊಳ್ಳುತ್ತಾರೆ.ಆಗ ವೇಣುಗೋಪಾಲ್ ಅವರು ಕೇವಲ ಪ್ರೆಸ್ ಫೋಟೋಗ್ರಾಫರ್ ಆಗಿದ್ದ ಕಾರಣ ತಾರಾ ಅವರ ಮನೆಯವರು ನಿರಾಕರಿಸುತ್ತಾರೆ.

ಅದಾದ ಬಳಿಕ ಇವರಿಬ್ಬರ ನಡುವೆ ಯಾವುದೇ ರೀತಿಯ ಸಂಪರ್ಕ ಇರುವುದಿಲ್ಲ. ತಾರಾ ಅವರ ಮನೆಯವರು ನಿರಾಕರಿಸಿದ್ದನ್ನು ಸೀರಿಯಸ್ಸಾಗಿ ತೆಗೆದುಕೊಂಡ ವೇಣು ಅವರು ಚಿತ್ರರಂಗದಲ್ಲಿ ಸಾಧನೆ ಮಾಡಬೇಕು ಎಂದು ಡಿಸೈಡ್ ಮಾಡಿ ಒಳ್ಳೆಯ ಸಿನಿಮಾಟೋಗ್ರಾಫರ್ ಆಗಿ ಬೆಳೆದು ನಿಲ್ಲುತ್ತಾರೆ. ಇವರಿಬ್ಬರು ಕಾಯುತ್ತಾ ಕೊನೆಗೆ 2005 ರಲ್ಲಿ ಯಶ ಸಿನಿಮಾದ ಮೂಲಕ ಮತ್ತೆ ನೀಟಾಗಿ ಮದುವೆ ಪ್ರಸ್ತಾಪವನ್ನು ವೇಣು ಮಾಡುತ್ತಾರೆ.

ಆಗ ತಾರಾ ಅವರಿಗೆ ಹತ್ತಿರ ಹತ್ತಿರ 37 ವರ್ಷ ವಯಸ್ಸು. ಆದರೂ ಕೂಡ ವೇಣು ತಾರಾ ಅವರ ಮನೆಗೆ ಹೋಗಿ ಅವರನ್ನು ಒಪ್ಪಿಸಿ ಕೊನೆಗೆ 2005 ರಲ್ಲಿ ಮದುವೆಯಾಗುತ್ತಾರೆ. ಆಗ ವೇಣು ಅವರು ಚಿತ್ರರಂಗದಲ್ಲಿ ಸಾಕಷ್ಟು ಯಶಸ್ಸು ಗಳಿಸಿದ ರಿಂದ ತಾರಾ ಅವರ ಮನೆಯವರು ವೇಣು ಅವರನ್ನು ಒಪ್ಪಿಕೊಳ್ಳುತ್ತಾರೆ.ಇನ್ನು 2005 ರಲ್ಲಿ ಮದುವೆಯಾದ ಜೋಡಿಗಳಿಗೆ 2013 ರಲ್ಲಿ ಗಂಡು ಮಗು ಜನಿಸಿದ್ದು ಈಗ ಇವರು ಸುಖ ಸಂಸಾರವನ್ನು ನಡೆಸುತ್ತಿದ್ದಾರೆ….

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...