ನಟಿ ತಾರಾ

ನಟಿ ತಾರಾ ಲೇಟಾಗಿ 36 ವರ್ಷಕ್ಕೆ ಮದುವೆಯಾಗಲು ಕಾರಣ ಯಾರು ಗೊತ್ತಾ? ಅಸಲಿಗೆ ನಡೆದ ನಿಜ ಏನು ಗೊತ್ತಾ

Cinema/ಸಿನಿಮಾ Home Kannada News/ಸುದ್ದಿಗಳು

ಕನ್ನಡ ಚಿತ್ರರಂಗದ ಖ್ಯಾತ ತಾರೆ ನಟಿ ತಾರಾ ಅನುರಾಧ ಅವರು ಲೇಟಾಗಿ ಮದುವೆ ಆಗಿದ್ದು ಏಕೆ ಗೊತ್ತಾ. ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಲವ್ ಸ್ಟೋರಿ ಎಂಬುದು ಇದ್ದೇ ಇರುತ್ತದೆ. ಆದರೆ ಕೆಲವರು ಮಾತ್ರ ತಮ್ಮ ಲವ್ ಸ್ಟೋರಿಯಲ್ಲಿ ಸಫಲರಾಗುತ್ತಾರೆ. ಬಹುತೇಕರು ತಮ್ಮ ಪ್ರೀತಿಯನ್ನ ಅನಿವಾರ್ಯ ಕಾರಣಗಳಿಂದಾಗಿ ತ್ಯಾಗ ಮಾಡಿಯೇ ಇರುತ್ತಾರೆ. ಇದರಲ್ಲಿ ಪ್ರೀತಿಸಿ, ದೂರವಾಗಿ ಮತ್ತೆ ಒಂದಾಗಿರುವ ಪ್ರೇಮಿಗಳು ಕೂಡ ಇರುತ್ತಾರೆ. ಅಂತಹ ಪ್ರೇಮ ಜೋಡಿಗಳಲ್ಲಿ ನಟಿ ತಾರಾ ಅನುರಾಧಾ ಮತ್ತು ಖ್ಯಾತ ಛಾಯಾ ಚಿತ್ರ ಗ್ರಾಹಕರಾದ ಎಚ್.ಸಿ.ವೇಣುಗೋಪಾಲ್ ಅವರ ಜೋಡಿಯೂ ಕೂಡ ಒಂದು. ನಟಿ ತಾರಾ ಶ್ರೀಮಂತ ಕುಟುಂಬದವರು. ಇವರು ನಟನೆಯನ್ನ ಆಸಕ್ತಿಯಿಂದ ಆಯ್ಕೆ ಮಾಡಿಕೊಂಡರೆ ಹೊರತು ಹಣ ಮಾಡಬೇಕು ಎಂಬ ಉದ್ದೇಶದಿಂದಲ್ಲ.

Tara Lovely Photos With Husband & Son | kannada Actress Tara | Tara Husband - YouTube

ಪ್ರೆಸ್ ವೊಂದರಲ್ಲಿ ಫೋಟೋಗ್ರಾಫರ್ ಆಗಿದ್ದ ವೇಣು ಅವರಿಗೆ ಹೀಗೆ ಒಂದು ಸಂಧರ್ಭದಲ್ಲಿ ತಾರಾ ಅವರ ಫೋಟೋ ಶೂಟ್ ಮಾಡುವ ಸನ್ನಿವೇಶ ಏರ್ಪಡುತ್ತದೆ. ಆಗ ನಟಿ ತಾರಾ ಮತ್ತು ವೇಣು ಅವರಿಗೆ ಪರಸ್ಪರ ಸ್ನೇಹ ಆರಂಭವಾಗುತ್ತದೆ. ದಿನಗಳು ಉರುಳುತ್ತಿದ್ದಂತೆ ಈ ಸ್ನೇಹ ಪ್ರೀತಿಯಾಗಿ ಬದಲಾಗುತ್ತದೆ. ಹೀಗೆ ಇವರಿಬ್ಬರ ಪ್ರೀತಿ ಒಂದು ದಿನ ಮನೆಯವರಿಗೂ ಕೂಡ ತಿಳಿಯುತ್ತದೆ. ಆಗತಾನೇ ಹೆಸರು ಮಾಡುತ್ತಿದ್ದ ಫೋಟೋಗ್ರಾಫರ್ ವೇಣು ಅವರಿಗೆ ತಾರಾ ಅವರನ್ನ ಮದುವೆ ಮಾಡಿಕೊಡಲು ತಾರಾ ಪೋಷಕರು ವಿರೋಧ ವ್ಯಕ್ತಪಡಿಸುತ್ತಾರೆ. ಇದಾದ ಬಳಿಕ ಕೆಲವು ವರ್ಷಗಳ ಕಾಲ ಇಬ್ಬರು ದೂರವಾಗಿ ತಮ್ಮ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ.

ಋಣಾನುಬಂಧ ರೂಪೇಣ ಪಶುಪತಿ ಸುತಾಲಯ ಅನ್ನುವ ಹಾಗೇ ಮತ್ತೆ ವೇಣು ಅವರು ತಾರಾ ಅವರು ನಟಿಸುತ್ತಿದ್ದ ಸಿನಿಮಾವೊಂದಕ್ಕೆ ಛಾಯಾಗ್ರಾಹಕರಾಗಿ ಕೆಲಸ ಮಾಡಬೇಕಾಗುತ್ತದೆ. ಆಗ ವೇಣು ಅವರು ಮತ್ತೆ ತಾರಾ ಅವರಿಗೆ ಪ್ರಪೋಸ್ ಮಾಡುತ್ತಾರೆ. ಇದೀಗ ನಟಿ ತಾರಾ ಅವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೆ ತಮ್ಮ ಪೋಷಕರನ್ನು ಒಪ್ಪಿಸುವಂತೆ ಹೇಳುತ್ತಾರೆ. ವೇಣು ಅವರು ಆ ಸಂಧರ್ಭದಲ್ಲಿ ಆರ್ಥಿಕವಾಗಿ ಕೂಡ ಶಕ್ತಿವಂತರಾಗಿದ್ದರಿಂದ ತಾರಾ ಪೋಷಕರು ಕೂಡ ಒಪ್ಪಿಗಿ ಸೂಚಿಸಿದ ನಂತರ ನಟಿ ತಾರಾ ಮತ್ತು ವೇಣು ಅವರು ದಾಂಪತ್ಯ,ಜೀವನಕ್ಕೆ ಹೆಜ್ಜೆ ಇಡುತ್ತಾರೆ. ಆಗ ತಾರಾ ಅವರಿಗೆ ಮೂವತ್ತೇಳು ವರ್ಷ ವಯಸ್ಸ್ಸಾಗಿತ್ತು.

Tara: Tara and Venu's son named Sri Krishna | Kannada Movie News - Times of India

ತಾರಾ ಅವರು ಅಷ್ಟು ತಡವಾಗಿ ಮದುವೆ ಆಗುವುದಕ್ಕೆ ತಮ್ಮ ಪ್ರೀತಿಯು ಕೂಡ ಕಾರಣವಾಗಿತ್ತು ಎಂಬುದು. ಇನ್ನು ನಟಿ ತಾರಾ ಅವರು ಕನ್ನಡ ಚಿತ್ರರಂಗದಲ್ಲಿ ರಾಜ್ ಕುಮಾರ್ ಅವರಿಂದ ಇತ್ತೀಚಿಗೆನ ಎಲ್ಲಾ ಯುವ ನಟರೊಂದಿಗೂ ಕೂಡ ತೆರೆ ಹಂಚಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಪೋಷಕ ನಟಿ ಮತ್ತು ತಾಯಿಯ ಪಾತ್ರಕ್ಕಾಗಿ ಬಹು ಬೇಡಿಕೆ ಹೊಂದಿರುವ ನಟಿ ಅಂದರೆ ಅದು ತಾರಾ ಅವರು ಮಾತ್ರ. ತಾರಾ ಅವರು ಕೇವಲ ಕಮರ್ಷಿಯಲ್ ಸಿನಿಮಾಗಳ ಜೊತೆಗೆ ಕಾನೂರು ಹೆಗ್ಗಡತಿ,ಮುನ್ನುಡಿ,ಮತದಾನ,ಹಸೀನಾ ಎಂಬಂತಹ ಕಾದಂಬರಿ ಮತ್ತು ಸಾಮಾಜಿಕ ಸಂದೇಶವೊಂದಿರುವಂತಹ ಸಿನಿಮಾಗಳಲ್ಲಿ ನಟಿಸಿ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದಾರೆ.

Actress Tara Son Naming Ceremony Photos (5)

ಕೇವಲ ಸಿನಿಮಾರಂಗ ಮಾತ್ರವಲ್ಲದೆ ನಟಿ ತಾರಾ ಅವರು ರಾಜಕೀಯವಾಗಿಯೂ ಕೂಡ ತೊಡಗಿಸಿಕೊಂಡಿದ್ದಾರೆ. ಭಾರತೀಯ ಜನತಾ ಪಕ್ಷ ದ ಸದಸ್ಯರಾಗಿರುವ ತಾರಾ ಅವರು ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ದಿ ನಿಗಮ ಮಂಡಳಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ ಸಿನಿಮಾರಂಗದಲ್ಲಿಯೂ ಸಹ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ಇಷ್ಟವಾದಲ್ಲಿ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...