ಪ್ರತಿಯೊಬ್ಬರೂ ಅವರದೇ ಆದ ಜಮೀನುಗಳನ್ನು ಹೊಂದಿರುತ್ತಾರೆ. ಎಕರೆವಾರು ಜಮೀನುಗಳ ಮಾಹಿತಿಯನ್ನು ಹೊಂದಿರುತ್ತಾರೆ. ಆದರೆ ಅದರ ಸರಿಯಾದ ವಿಸ್ತೀರ್ಣದ ಬಗ್ಗೆ ಹೆಚ್ಚು ಜನರಿಗೆ ತಿಳಿದಿರುವುದಿಲ್ಲ. ಯಾವುದೇ ಸಮಸ್ಯೆಗಳು ಬಂದಲ್ಲಿ ಅದರ ಬಗ್ಗೆ ಯೋಚಿಸುತ್ತಾರೆ. ಸರ್ವೇಗಳನ್ನು ಮಾಡಿಸುತ್ತಾರೆ. ಪ್ರತಿಯೊಬ್ಬರೂ ಅವರ ಜಮೀನಿನ ಸುತ್ತಳತೆಯನ್ನು ತಿಳಿದುಕೊಳ್ಳುವುದು ಬಹುಮುಖ್ಯವಾಗಿದೆ. ಆನ್ಲೈನ್ ಮೂಲಕ ಜಮೀನಿನ ಸುತ್ತಳತೆಯನ್ನು ತಿಳಿದುಕೊಳ್ಳಬಹುದಾಗಿದೆ. ಆದ್ದರಿಂದ ನಾವಿಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.ನಿಮ್ಮ ಹೊಲದ ಪಹಣಿ ಜಾಯಿಂಟ್ ಪಹಣಿ ಇದೆಯಾ? ಪಾರಂ ನಂಬರ್ 10 ಕ್ಕೆ ಅರ್ಜಿ ಸಲ್ಲಿಸೋದು ಹೇಗೆ ನೋಡಿ – infokhabars

ಮೊದಲನೆಯದಾಗಿ ಬ್ರೌಸಿಂಗ್ ಅಪ್ಲಿಕೇಶನ್ ಅನ್ನು ಓಪನ್ ಮಾಡಿಕೊಳ್ಳಬೇಕು. ಅದರಲ್ಲಿ ಭೂಮಿ ಎಂದು ಸರ್ಚ್ ಮಾಡಬೇಕು. ಅದನ್ನು ಸರ್ಚ್ ಮಾಡಿದಾಗ ಭೂಮಿ ಎಂಬ ಗೌರ್ಮೆಂಟ್ ವೆಬ್ಸೈಟ್ ದೊರಕುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು. ಅದನ್ನು ಓಪನ್ ಮಾಡಿದ ಮೇಲೆ ಭೂಮಿ ಎಂಬ ಮತ್ತೊಂದು ಆಪ್ಷನ್ ದೊರಕುತ್ತದೆ. ಅದನ್ನು ಓಪನ್ ಮಾಡಬೇಕು. ಅದನ್ನು ಓಪನ್ ಮಾಡಿದ ನಂತರ ಸಿಟಿಜನ್ ಸರ್ವಿಸ್ ಎಂಬ ಆಪ್ಷನ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಹಲವು ಆಪ್ಷನ್ ಗಳು ದೊರಕುತ್ತವೆ. ಅದರಲ್ಲಿ ವಿವ್ ಆರ್ಟಿಸಿ ಇನ್ಫಾರ್ಮಶನ್ ಎಂಬ ಆಪ್ಷನ್ ಅನ್ನು ಕ್ಲಿಕ್ ಮಾಡಬೇಕು. ಅದರಲ್ಲಿ ಜಿಲ್ಲೆ ತಾಲೂಕು ಹೋಬಳಿ ಗಳ ಮಾಹಿತಿಯನ್ನು ತುಂಬಬೇಕು.Recent stories – infokhabars

ನಂತರ ಸರ್ವೆ ನಂಬರ್ ಮತ್ತು ಆ ಸರ್ವೆ ನಂಬರ್ ಗೆ ಹಿಸ್ಸಾ ಇದ್ದಲ್ಲಿ ಅದನ್ನು ತುಂಬಬೇಕು. ತುಂಬಿದ ನಂತರ ಪ್ಯಾಚ್ ಡೀಟೇಲ್ಸ್ ಎಂಬ ಆಪ್ಷನ್ ನನ್ನು ಕ್ಲಿಕ್ ಮಾಡಬೇಕು. ಇದನ್ನು ಮಾಡಿದ ನಂತರ ಜಮೀನು ಡೀಟೇಲ್ಸ್ ಕಾಣುತ್ತದೆ. ಇದರಲ್ಲಿ ಮಣ್ಣು, ಎಕರೆ, ಎಲ್ಲದರ ಮಾಹಿತಿಯು ದೊರಕುತ್ತದೆ. ಅದರಲ್ಲಿ ಓನರ್ ಡೀಟೇಲ್ಸ್ ಎಂಬ ಆಪ್ಷನ್ ಇರುತ್ತದೆ. ಅದನ್ನು ಕ್ಲಿಕ್ ಮಾಡಿದರೆ ಜಮೀನಿನ ಮಾಲೀಕರ ಹೆಸರು ದೊರಕುತ್ತದೆ. ಹಾಗೂ ಇದರಲ್ಲಿ ಜಮೀನಿನ ಮ್ಯಾಪನ್ನು ಕೂಡ ನೋಡಬಹುದಾಗಿದೆ. ಮ್ಯಾಪನ್ನು ನೋಡಬೇಕಾದರೆ ಪ್ಲೇ ಸ್ಟೋರಿಗೆ ಹೋಗಿ ದಿಶಾಂಕ್ ಎಂಬ ಆಪ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳಬೇಕು.Recent stories – Page 67 – infokhabars

ಇದನ್ನು ಇನ್ಸ್ಟಾಲ್ ಮಾಡಿ ಓಪನ್ ಮಾಡಿದ ಮೇಲೆ ಮೊದಲು ಸ್ಕಿಪ್ ಎಂಬ ಆಪ್ಷನ್ ದೊರಕುತ್ತದೆ. ಅದನ್ನು ಕ್ಲಿಕ್ ಮಾಡಬೇಕು. ಇದಾದ ನಂತರ ಕೆಲವು ಲೊಕೇಶನ್ ಗಳನ್ನು ಕೇಳುತ್ತದೆ ಅದಕ್ಕೆ ಅಲೋ ಎಂದು ಕ್ಲಿಕ್ ಮಾಡಬೇಕು. ಅದನ್ನು ಮಾಡಿದಾಗ ಆ ವ್ಯಾಪ್ತಿಯ ಸುತ್ತಲಿನ ಅಷ್ಟು ಸರ್ವೇ ನಂಬರ್ ಗಳನ್ನು ತೋರಿಸುತ್ತದೆ. ಅದರಲ್ಲಿ ಸರ್ವೆ ನಂಬರ್ ಡೀಟೇಲ್ಸ್ ಎಂಬ ಆಪ್ಷನ್ ಇರುತ್ತದೆ. ಅದನ್ನು ಕ್ಲಿಕ್ ಮಾಡಿ ಡೀಟೇಲ್ಸ್ ಗಳನ್ನು ಹಾಕಿ ಸರ್ವೆ ನಂಬರ್ ಹಾಕಿ ಓಕೆ ಎಂದು ಕ್ಲಿಕ್ ಮಾಡಿದಾಗ ಸರ್ವೆ ನಂಬರ್ ನ ಡೀಟೇಲ್ಸ್ ಗಳು ದೊರಕುತ್ತದೆ. ಈ ರೀತಿಯಾಗಿ ಆನ್ಲೈನ್ ಮೂಲಕ ಜಮೀನಿನ ವಿಸ್ತೀರ್ಣವನ್ನು ನೋಡಬಹುದಾಗಿದೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •