ಮಹತ್ವದ ಬೆಳವಣಿಗೆಯೊಂದರಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನವೆಂಬರ್ 21 ರಂದು ಚೆನ್ನೈಗೆ ಭೇಟಿ ನೀಡುತ್ತಿರುವ ಸಂದರ್ಭದಲ್ಲೇ ಸೂಪರ್ ಸ್ಟಾರ್ ರಜನಿಕಾಂತ್ ಅಮಿತ್ ಶಾಹ್ ಅವರನ್ನ ಭೇಟಿಯಾಗಲು ಸಜ್ಜಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ತಮಿಳುನಾಡಿನಲ್ಲಿ ರಜನಿಕಾಂತ್ ರವರ ಪಕ್ಷದ ಗ್ರೌಂಡ್ ಲೆವಲ್ ಕೆಲಸಗಳು ಅವರ ಆರೋಗ್ಯ ಸರಿಯಿರದ ಕಾರಣ ಇಷ್ಟು ದಿನ ಸಾಧ್ಯವಾಗಿರಲಿಲ್ಲ ಎಂದು ಲೀಕ್ ಆದ ವರದಿಯೊಂದರಿಂದ ತಿಳಿದು ಬಂದಿದೆ.

ಲೀಕ್ ಆದ ಈ ಮಾಹಿತಿಯ ಬಗ್ಗೆ ಸ್ಪಷ್ಟೀಕರಣ ನೀಡಿದ ರಜನಿಕಾಂತ್, ನನ್ನ ಬಗ್ಗೆ ಊಹಾಪೋಹಗಳ ಸುದ್ದಿಯನ್ನ ಹರಡಿಸಲಾಗುತ್ತಿದೆ ಎಂದಿದ್ದಾರೆ. ಆದರೆ ಅವರ ಆರೋಗ್ಯದ ಬಗ್ಗೆ ದೃಪಡಿಸಿದ  ತಮ್ಮ ಮುಂದಿನ ಹಂತದ ಬಗ್ಗೆ ತಮ್ಮ ಪಕ್ಷದ ಜನರೊಂದಿಗೆ ಚರ್ಚಿಸಿ ನಂತರ ಪ್ರಕಟಣೆ ನೀಡುವುದಾಗಿ ಹೇಳಿದರು.

ರಾಜಕೀಯಕ್ಕೆ ರಜನಿಕಾಂತ್ ಎಂಟ್ರಿ

ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಅವರ ನಿಧನದ ನಂತರ ಮತ್ತು ಡಿಎಂಕೆ ಮುಖ್ಯಸ್ಥ ಎಂ ಕರುಣಾನಿಧಿ ಅವರ ಅನಾರೋಗ್ಯದ ನಂತರ ತಮಿಳುನಾಡು ಎದುರಿಸುತ್ತಿದ್ದ ಬಿಕ್ಕಟ್ಟಿಮ ಸಮಯದಲ್ಲಿ, 2017 ರಲ್ಲಿ ರಜನಿಕಾಂತ್ ರಾಜಕೀಯಕ್ಕೆ ತಮ್ಮ ಪ್ರವೇಶವನ್ನು ಘೋಷಿಸಿದರು. ಆದರೆ, ಕಳೆದ ವರ್ಷ ಲೋಕಸಭಾ ಚುನಾವಣೆಯಲ್ಲಿ ಅವರು ಸ್ಪರ್ಧಿಸಲಿಲ್ಲ. ಅದೇ ಸಮಯದಲ್ಲಿ ಕಮಲ್ ಹಾಸನ್ ತಮ್ಮ ಪಕ್ಷದ ಮಕ್ಕಲ್ ನಿಧಿ ಮೈಯಂ ಅನ್ನು ಪ್ರಾರಂಭಿಸಿದ್ದಾಗ ರಜನಿಕಾಂತ್ ಅವರು ತಮ್ಮ ಪಕ್ಷವನ್ನು ಘೋಷಿಸಿರಲಿಲ್ಲ, ಬದಲಿಗೆ ತಮಿಳುನಾಡಿನ ಜನರಿಗೆ ಕೆಲಸ ಮಾಡುವುದಾಗಿ ಪುನರುಚ್ಚರಿಸಿದ್ದರು. ಅವರು ಕಳೆದ ವರ್ಷ ತಮ್ಮ ವೆಬ್‌ಸೈಟ್ ‘rajinimandram.org’ ಮತ್ತು ಪಕ್ಷದ ಲೋಗೋವನ್ನು ಬಿಡುಗಡೆ ಮಾಡಿದ್ದರು. ತಮ್ಮ ಅಭಿಮಾನಿಗಳಿಗೆ ನೀಡಿದ ವಿಡಿಯೋ ಸಂದೇಶದಲ್ಲಿ, ಸೂಪರ್‌ಸ್ಟಾರ್ ಅವರು ವೆಬ್‌ಸೈಟ್‌ಗೆ ನೋಂದಾಯಿಸಿ ತಮಿಳುನಾಡು ಅಭಿವೃದ್ಧಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದರು. ರಜನಿಕಾಂತ್ ಹಾಸನ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ವರದಿಗಳೂ ತಿಳಿಸಿವೆ.

Superstar-Rajinikanth

ಅಮಿತ್ ಶಾಹ್ ರನ್ನ ಭೇಟಿಯಾಗಲಿರುವ ಅಳಗಿರಿ?

2021 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ದಿವಂಗತ ಎಂ ಕರುಣಾನಿಧಿ ಅವರ ಹಿರಿಯ ಪುತ್ರ ಎಂ.ಕೆ.ಅಳಗಿರಿ ಅವರು ಹೊಸ ಪಕ್ಷವನ್ನು ರಚಿಸುವ ಬಗ್ಗೆ ಇದೇ ವದಂತಿಗಳು ಹರಡುತ್ತಿವೆ. ಆದರ ಅಳಗಿರಿ ಈ ಎಲ್ಲಾ ವದಂತಿಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಇನ್ನೂ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ ಎಂದು ಹೇಳಿದ ಅಳಗಿರಿ ಅವರು ತಮ್ಮ ಪಕ್ಷದ ಕಾರ್ಯಕರ್ತರನ್ನು ಸಂಪರ್ಕಿಸಿ ನಂತರ ಈ ಪಕ್ಷದ ರಚನೆಯನ್ನು ಪ್ರಕಟಿಸುವುದಾಗಿ ಹೇಳಿದ್ದಾರೆ. ನವೆಂಬರ್ 21 ರಂದು ತಮ್ಮ ಮತ್ತು ಅಮಿತ್ ಶಾ ನಡುವಿನ ಭೇಟಿಯ ಸುದ್ದಿಯನ್ನು ಅವರು ನಿರಾಕರಿಸಿದ್ದಾರೆ.

ತಮಿಳುನಾಡಿನಲ್ಲಿ 2021 ರಲ್ಲಿ ವಿಧಾನಸಭಾ ಚುನಾವಣೆ

2021 ರ ಏಪ್ರಿಲ್-ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.  ಡಿಎಂಕೆ 2011 ರಲ್ಲಿ ಎಐಎಡಿಎಂಕೆ ಎದುರು ಸೋತು ಅಧಿಕಾರ ಕಳೆದುಕೊಂಡಿತು ಮತ್ತು 2016 ರಲ್ಲಿ ವಿಧಾನಸಭಾ ಚುನಾವಣೆಯಲ್ಲೂ ಸೋತಿತು. ಮುಂಬರುವ ಚುನಾವಣೆಗಳಿಗೆ ಪೋಲ್-ಸ್ಟ್ರ್ಯಾಟೆಜಿಸ್ಟ್ ಪ್ರಶಾಂತ್ ಕಿಶೋರ್ ಅವರೊಂದಿಗೆ ರೋಲಿಂಗ್ ಮಾಡುತ್ತಿರುವ ಸ್ಟಾಲಿನ್ ನೇತೃತ್ವದ ಡಿಎಂಕೆ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಏತನ್ಮಧ್ಯೆ, ಆಡಳಿತಾರೂಢ AIADMK ಮತ್ತು BJP ಯ ರಾಜ್ಯ ಘಟಕಗಳ ನಡುವಿನ ಸಂಬಂಧವು ‘ವೆಲ್ ಯಾತ್ರೆ’ಯ ಬಳಿಕ ಹದಗೆಡುತ್ತಿದೆ.

ಇತ್ತೀಚೆಗಷ್ಟೇ ಕರ್ನಾಟಕದ ಸಿಂಘಂ ಅಂತೇ ಖ್ಯಾತರಾಗಿದ್ದ ಅಣ್ಣಾಮಲೈ ರವರು ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದರು. ಅವರನ್ನ ಬಿಜೆಪಿ ತಮಿಳುನಾಡಿನ ಬಿಜೆಪಿ ಉಪಾಧ್ಯಕ್ಷರಾಗಿ ನೇಮಕ ಮಾಡಿತ್ತು. ಈಗ ಅಣ್ಣಾಮಲೈ ರವರು ತಮಿಳುನಾಡಿನಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದು ಅವರ ನೇತೃತ್ವದಲ್ಲಿ ರಾಜ್ಯದ ವಿವಿಧ ಪಕ್ಷಗಳ ಸಾವಿರಾರು ನಾಯಕರು, ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ.

ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷ ತೊರೆದು ನಟಿ ಖುಷ್ಬೂ ಕೂಡ ಬಿಜೆಪಿ ಸೇರ್ಪಡೆಯಾಗಿದ್ದರು. ಈ ಬಾರಿ ಶತಾಯಗತಾಯವಾಗಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲೇಬೇಕೆಂದು ಬಿಜೆಪಿ ತಯಾರಿ ನಡೆಸುತ್ತಿದೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •