ನಮಸ್ತೆ ಸ್ನೇಹಿತರೆ, ಕನ್ನಡ ಕಿರುತೆರೆ ಲೋಕದ ಪ್ರಸಿದ್ಧ ಧಾರವಾಹಿಗಳಲ್ಲಿ ಅಗ್ನಿ ಸಾಕ್ಷಿ ಧಾರವಾಹಿಯು ಕೂಡ ಒಂದು.. ಈ ಧಾರವಾಹಿಯಲ್ಲಿ ಸನ್ನಿಧಿಯ ಪಾತ್ರದಲ್ಲಿ ಎಲ್ಲರ ಮನ ಮುಟ್ಟುವಂತೆ ನಟಿಸಿದ ನಟಿ ವೈಷ್ಣವಿ ಗೌಡ ಅವರು. ಕಿರುತೆರೆ ಪ್ರೇಕ್ಷಕರು ವೈಷ್ಣವಿ ಗೌಡ ಅವರ ಅಭಿನಯಕ್ಕೆ ಮನಸೋತಿದ್ದರು.. ಇನ್ನೂ ಈ ಧಾರವಾಹಿ ಎಷ್ಟು ಖ್ಯಾತಿ ಗಳಿಸಿತ್ತು ಎಂದರೆ ಅಗ್ನಿ ಸಾಕ್ಷಿ ಸೀರಿಯಲ್ ಗಾಗಿ ಪ್ರೇಕ್ಷಕರು ಟೀವಿ ಮುಂದೆ ಕಾಯುವಂತೆ ಮಾಡಿತ್ತು. ಸುಮಾರು ವರ್ಷಗಳ ಕಾಲ ಈ ಧಾರವಾಹಿ ಕಿರುತೆರೆಯಲ್ಲಿ ಪ್ರಸಾರವಾಗಿ ಒಂದು ದಾಖಲೆಯನ್ನೇ ನಿರ್ಮಿಸಿತ್ತು.. ಈ ಧಾರವಾಹಿಯ ಮುಖ್ಯ ಕೇಂದ್ರ ಬಿಂದು ಆಗಿದ್ದವರು ವೈಷ್ಣವಿ ಗೌಡ ಅವರು.. ಇನ್ನೂ ಈ ಧಾರವಾಹಿಯ ನಂತರ ವೈಷ್ಣವಿ ಅವರಿಗೆ ಸಿನಿಮಾದಲ್ಲೂ ಕೂಡ ಅವಕಾಶ ಸಿಕ್ಕಿತ್ತು.

ಇದರ ಬೆನ್ನಲ್ಲೇ ಇದೀಗ ಅವರು ಬಿಗ್ ಬಾಸ್ ಸೀಸನ್ ಎಂಟರಲ್ಲಿ ಭಾಗವಹಿಸಿದ್ದರು.. ಇನ್ನೂ ಬಿಗ್ ಬಾಸ್ ಮನೆಯಲ್ಲಿ ವೈಷ್ಣವಿ ಅವರ ನಿಜವಾದ ವ್ಯಕ್ತಿತ್ವ ನೋಡಿ ಪ್ರೇಕ್ಷಕರು ಹಾಗು ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.. ಇನ್ನೂ ಇದೇ ವೇಳೆ ವೈಷ್ಣವಿ ಅವರು ತಮ್ಮ ಮದುವೆಯ ಬಗ್ಗೆ ವಿಷಯವೊಂದನ್ನು ಬಿಗ್ ಬಾಸ್ ಮನೆಯಲ್ಲಿ ಹೇಳಿದ್ದಾರೆ. ವೈಷ್ಣವಿ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿದ್ದಾಗ ದಿವ್ಯಾ ಸುರೇಶ್ ಜೊತೆ ಮಾತನಾಡುತ್ತಾ ಕುಳಿತಿರುತ್ತಾರೆ. ಈ ವೇಳೆ ಪ್ರೇಮದ ವಿಚಾರದ ಬಗ್ಗೆಯೂ ಕೂಡ ತಮ್ಮ ಮನದಾಳದ ಮಾತನ್ನು ಹೊರಹಾಕಿದ್ದಾರೆ.. ಹೌದು ನಾನು ಮದುವೆ ಆಗುವುದಕ್ಕೆ ತುದಿಗಾಲಿನಲ್ಲಿ ನಿಂತಿದ್ದೀನಿ ಎಂದು ಹೆಳಿರುವ ವೈಷ್ಣವಿ..

ಈ ಮದುವೆ ಕಾಂಸೆಪ್ಟ್ ಎಂದರೆ ನನಗೆ ಬಹಳ ಇಷ್ಟ ಅದರಲ್ಲಿ ಪ್ರೀತಿಯ ಮೇಲೆ ನನಗೆ ಅಪಾರವಾದ ನಂಬಿಕೆ ಇದೆ. ಪೋಷಕರ ಜೊತೆ ಹಾಗು ಸ್ನೇಹಿತರ ಜೊತೆ ಎಲ್ಲವನ್ನು ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ.. ಆದರೆ ನಮ್ಮ ಪತಿಯ ಜೊತೆ ಎಲ್ಲಾ ವಿಚಾರವನ್ನು ಸುಲಭವಾಗಿ ಹೇಳಿಕೊಳ್ಳಬಹುದು. ನಾನು ಇಲ್ಲಿಯವರೆಗೂ ನನ್ನ ಜೀವನವನ್ನು ಒಬ್ಬಂಟಿಯಾಗಿಯೇ ಕಳೆದಿದ್ದೀನಿ.. ನನ್ನವರಂತ ನನಗೆ ಇರುವುದು ಬಹಳ ಕಡಿಮೆ. ನನಗೆ ಒಂದು ಕನೆಕ್ಷನ್ ಬೇಕು ಎಂದು ಹೇಳಿಕೊಳ್ಳುವ ಮೂಲಕ ಆದಷ್ಟು ಬೇಗ ಪ್ರೀತಿ ಮಾಡಬೇಕು ಎಂಬುದನ್ನು ತಿಳಿಸಿದ್ದಾರೆ..

ಈ ಹಿಂದೆಯೂ ಕೂಡ ಬಿಗ್ ಬಾಸ್ ನೀಡಿದ ಒಂದು ಚಟುವಟಿಕೆಯಲ್ಲಿ ಮಾತನಾಡಿದ ವೈಷ್ಣವಿ ಗೌಡ ಅವರು ಚಿಕ್ಕ ವಯಸ್ಸಿನಿಂದಲೂ ಕೂಡ ನನಗೆ ಲೌವ್ ಮಾಡಬೇಕು, ರಿಲೇಶನ್ಸ್ ಶೀಪ್ ನಲ್ಲಿ ಇರಬೇಕು ಎನ್ನುವ ಆಸೆ ಇತ್ತು.. ಇನ್ನೂ ನನ್ನ ಸ್ನೇಹಿತೆಯರೆಲ್ಲರೂ ಕೂಡ ರಿಲೇಶನ್ ಶಿಪ್ ನಲ್ಲಿ ಇದ್ದಾರೆ. ತಮಗೆ ಬಾಯ್ ಪ್ರೆಂಡ್ ಇದ್ದಾನೆ ಎಂದು ಹೇಳಿಕೊಳ್ಳುತ್ತಾ ಇದ್ದರು.. ಆದರೆ ನನಗೆ ಲೌವ್ ಆಗಿರಲಿಲ್ಲ. ನನಗೇನು ಕಡಿಮೆ ಆಗಿದೆ. ನಾನು ಯಾಕೆ ಯಾವಾಗಲೂ ಸಿಂಗಲ್ ಆಗಿ ಇರುತ್ತೀನಿ ಎಂದು ಯೋಚಿಸುತ್ತಲೇ ಇರುತ್ತಿದ್ದೆ ಎಂದು ಹೇಳಿದ್ದಾರೆ.. ಸಧ್ಯ ಈಗ ಮತ್ತೊಮ್ಮೆ ಪ್ರೇಮದ ವಿಚಾರದ ಬಗ್ಗೆ ಮಾತನಾಡಿರುವ ವೈಷ್ಣವಿ ಗೌಡ ಅವರು ತಮ್ಮ ಪ್ರಿಯತಮನ ಬಗ್ಗೆ ಕನಸು ಕಾಣುತ್ತಿರುವುದಾಗಿ ತಿಳಿಸಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •