ಹೌದು ಈಗಾಗಲೇ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡ ಮೇಘನಾ ರಾಜ್ ಅವರು, ತಮ್ಮ ಮಗನ ಮೂಲಕ ಸಮಾಧಾನ ಮಾಡಿಕೊಂಡು ಜೀವನ ಸಾಗಿಸುವ ಪರಿಸ್ಥಿತಿ ಬಂದೊದಗಿದೆ. ಮತ್ತು ತಮ್ಮ ಮಗನ ಮುಖದಲ್ಲಿಯೇ ಚಿರುವನ್ನು ಕಂಡು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಇದೆಲ್ಲದರ ನಡುವೆ ಮಾಧ್ಯಮಕ್ಕೆ ಇತ್ತೀಚಿಗಷ್ಟೇ ಮೇಘನಾರಾಜ್ ತಂದೆ ಸುಂದರ್ ರಾಜ್ ಅವರು, ಒಂದು ಸಂದರ್ಶನ ನೀಡಿದ್ದರು. ಮತ್ತು ತಮ್ಮ ಅಳಿಯ ಚಿರಂಜೀವಿ ಸರ್ಜಾ ಅವರು ಹೇಗಿದ್ದರು. ಯಾವ ರೀತಿ ತಮ್ಮ ಮಗಳನ್ನು ತುಂಬಾ ಇಷ್ಟಪಡುತ್ತಿದ್ದರು ಎಂಬುದಾಗಿಯೂ ಹೇಳಿಕೊಂಡರು.  

ಜೊತೆಗೆ ಚಿರಂಜೀವಿ ಸರ್ಜಾ ಅವರ ಅಕಾಲಿಕ ಮರಣದಿಂದ, ಇಡೀ ನಮ್ಮ ಕುಟುಂಬವೇ ನೋವಿನಲ್ಲಿ ಮುಳುಗಿ ಬಿಟ್ಟಿತ್ತು. ಆದರೆ ಮತ್ತೆ ಜೂನಿಯರ್ ಚಿರು ಆಗಮನ ಆಗಿದ್ದು ಸಮಾಧಾನ ತಂದಿದೆ ಎಂಬುದಾಗಿಯೂ ಹೇಳಿದ್ದರು. ಜೊತೆಗೆ ಚಿರಂಜೀವಿ ಸರ್ಜಾ ಅವರು ಸಾವನ್ನಪ್ಪುತ್ತಿದ್ದ ಹಾಗೆ ಮೇಘನಾರಾಜ್ ಅವರು ಎಂತಹ ನೋವು ಅನುಭವಿಸಿದರು ಮತ್ತು ಅವರಿಗೆ ಸಮಾಧಾನ ಮಾಡುವ ಶಕ್ತಿ ನಮ್ಮಲ್ಲಿರಲಿಲ್ಲ ಎಂಬುದಾಗಿ ಸುಂದರರಾಜ್ ಅವರು ಮಾಧ್ಯಮದ ಬಳಿ ಹೇಳಿಕೊಂಡರು.ಇದಾದಮೇಲೆ ಇಂದಿಗೂ ಮೇಘನಾ ರಾಜ್ ಅವರು ಗೂಗಲ್ನಲ್ಲಿ ಚಿರಂಜೀವಿ ಸಾವಿನ ವಿಚಾರವಾಗಿ ಈಗಲೂ ಉತ್ತರ ಹುಡುಕುತ್ತಿದ್ದಾರೆ.  

Sundar-Raj

ಯಾವ ಕಾರಣಕ್ಕೆ ಚಿರುಗೆ ಹೀಗಾಯಿತು. ಮತ್ತು ಯಾಕೆ ಚಿರು ಮರಣ ಹೊಂದಿದ ಇದಕ್ಕೆ ಕಾರಣವಾದರೂ ಏನು ಎಂದು ಗೂಗಲ್ ನಲ್ಲಿ ಸರ್ಚ್ ಮಾಡುತ್ತಿದ್ದರಂತೆ. ಚಿರು ದೂರವಾಗುತ್ತಿದ್ದಂತೆ ಎರಡು ದಿನದ ಬಳಿಕ ಆಸ್ಪತ್ರೆಯ ವೈದ್ಯರ ಬಳಿಯೂ ಕೂಡ, ಮೇಘನರಾಜ್ ಅವರು ಇದಕ್ಕೆ ಬೇರೆ ದಾರಿ ಇರಲಿಲ್ಲವಾ.? ಮತ್ತು ಇದಕ್ಕೆ ಕಾರಣವೇನು? ಎಂಬಂತೆ ಪ್ರಶ್ನೆ ಮಾಡಿದ್ದರಂತೆ.

ಈ ವಿಚಾರವನ್ನು ಹೇಳಿಕೊಂಡ ಸುಂದರರಾಜ್ ಅವರು, ಇಂದಿಗೂ ಗೂಗಲ್ ನಲ್ಲಿ ಮೇಘನಾ ಇದರ ಬಗ್ಗೆ ತಿಳಿದುಕೊಳ್ಳಲು ಸರ್ಚ್ ಮಾಡುತ್ತಲೇ ಇರುತ್ತಿದ್ದಾಳೆ, ನಾನೇನು ಮಾಡಲಿ ? ಎಂದು ನೋವನ್ನ ಹಂಚಿಕೊಂಡಿದ್ದರು ಎಂದು ಮಾಧ್ಯಮ ಒಂದರ ಮೂಲಕ ತಿಳಿದುಬಂದಿತ್ತು. ಹೌದು ಇನ್ನುಮುಂದೆ ಆದ್ರೂ ಮೇಘನಾ ಮಗನ ಸಂತೋಷದಲ್ಲಿ ಸುಕವಾಗಿರಲಿ ಎಂದು ಕೇಳಿಕೊಳ್ಳೋಣ. ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ ಜೊತೆಗೆ ಹೆಚ್ಚು ಶೇರ್ ಮಾಡಿ ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •