ಕೆ.ಆರ್.ಎಸ್ ಡ್ಯಾಮ್ ವಿಚಾರದಲ್ಲಿ ಸುಮಲತಾ ಕೊಟ್ಟ ಹೇಳಿಕೆ ಬಗ್ಗೆ ತನಿಖೆಗೆ ಆಗ್ರಹಿಸಿದ್ದರೆ ಕುಮಾರಸ್ವಾಮಿ ದೊಡ್ಡ ವ್ಯಕ್ತಿಯಾಗಿರುತ್ತಿದ್ದರು, ಆದರೆ ಸುಮಲತಾ ಅವರನ್ನು ಡ್ಯಾಂ ಗೆ ಅಡ್ಡ ಮಲಗಿಸುವ ಹೇಳಿಕೆ ಕೊಟ್ಟು ತಪ್ಪು ಮಾಡಿದ್ದಾರೆ.ಜೊತೆಗೆ ಡ್ಯಾಮ್ ಸುತ್ತಮುತ್ತಲ ಪ್ರದೇಶದ ಅಕ್ರಮ ಗಣಿಗಾರಿಕೆ ವಿಚಾರವೂ ಮುನ್ನಲೆಗೆ ಬರುವಂತೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ದಿವಂಗತ ಅಂಬರೀಶ್ ವಿಚಾರವನ್ನು ಪ್ರಸ್ತಾಪಿಸುವ ಮೂಲಕ ರೆಬಲ್ ಸ್ಟಾರ್ ಅಭಿಮಾನಿಗಳ ಆಕ್ರೋಶಕ್ಕೂ ತುತ್ತಾಗಿದ್ದಾರೆ.

 

 

ಸುಮಲತಾ ಅವರನ್ನು ರಾಜಕೀಯವಾಗಿ ಎದುರಿಸುವ ಬದಲು ವೈಯುಕ್ತಿಕ ವಿಚಾರಗಳನ್ನು ಪ್ರಸ್ತಾಪಿಸಿದ್ದೇ ಕುಮಾರಸ್ವಾಮಿಯವರಿಗೆ ಭವಿಷ್ಯದಲ್ಲಿ ದೊಡ್ಡ ಹೊಡೆತ ನೀಡಿದರೂ ಅಚ್ಚರಿ ಇಲ್ಲ. ನನ್ನ ಮತ್ತು ಸುಮಲತಾ ​ಬಗ್ಗೆ ಸಂಬಂಧ ಕಲ್ಪಿಸಲು ಕುಮಾರಸ್ವಾಮಿ ಯತ್ನಿಸಿದ್ದರು. 2019ರಲ್ಲಿ ಲೋಕಸಭೆ ಚುನಾವಣೆಯಲ್ಲಿ ನಕಲಿ ವಿಡಿಯೋ ಸೃಷ್ಟಿಸಿ ನನ್ನ ಮತ್ತು ಸುಮಲತಾ ಅವರ ತೇಜೋವಧೆ ಮಾಡಲು ಹೊರಟಿದ್ದರು, ಸುಮಲತಾ ಅವರ ಹೆಸರಿಗೆ ಮಸಿ ಬಳಿಯಲು ಯತ್ನಿಸಿದ್ದರು.

 

 

ಚುನಾವಣೆಯ ವೇಳೆ ಚುನಾವಣಾ ಪ್ರಚಾರಕ್ಕಾಗಿ ನಾವೆಲ್ಲರೂ ಹೋಟೆಲ್‌ನಲ್ಲಿದ್ದೆವು. ಆಗ ನಾನು ಮತ್ತು ಸುಮಲತಾ ಹೋಟೆಲ್‌ಗೆ ತೆರಳುತ್ತಿದ್ದ ದೃಶ್ಯಗಳನ್ನು ಹೋಟೆಲ್‌ನ ಸಿಸಿ ಕ್ಯಾಮರಾದಿಂದ ಪಡೆದು ಆ ದೃಶ್ಯಗಳ ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದ್ದರು. ಚುನಾವಣೆ ವೇಳೆ ಸುಮಲತಾ ಅವರ ಹೆಗಲಿಗೆ ಯಾರೋ ಕೈ ಹಾಕಿದ್ದ ಫೋಟೋ ಬಳಸಿಕೊಂಡು ನಾನು ಮತ್ತು ಸುಮಲತಾ ಅವರು ಹೋಟೆಲ್ ಕಾರಿಡಾರ್ ಮೂಲಕ ರೂಂಗೆ ಇಬ್ಬರೇ ಹೋಗುತ್ತೇವೆ ಎಂದು ಅಶ್ಲೀಲ ಚಿತ್ರಗಳನ್ನು ತಂದು ಪೇಸ್ಟ್ ಮಾಡಿ ನಕಲಿ ವಿಡಿಯೋ ಸೃಷ್ಟಿಸಿ ಚುನಾವಣೆ ಸಂದರ್ಭದಲ್ಲಿ ಹರಿಬಿಡಲು ಆಸೆಪಟ್ಟಿದ್ದರು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •