ಮದುವೆಯಾಗಲು ಸೂಕ್ತ ವಯಸ್ಸು ಯಾವುದು?

Home Kannada News/ಸುದ್ದಿಗಳು

ಪ್ರತಿಯೊಬ್ಬರಿಗೂ ಕೂಡ ತಮ್ಮ ಜೀವನ ಸೆಟಲ್ ಆದ ನಂತರ ಮದುವೆಯಾಗಬೇಕು ಅನ್ನುವ ಆಸೆ ಇರುತ್ತದೆ. ಆದರೆ ಸ್ನೇಹಿತರ ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಜೀವನ ಒಂದು ಹಂತಕ್ಕೆ ಬರಲಿ ಎಂದು ಕೇವಲ ಕೆರಿಯರ್ ಬಗ್ಗೆಯೇ ಯೋಚನೆ ಮಾಡಿಕೊಂಡು ತಮ್ಮ ಮದುವೆಯ ಜೀವನವನ್ನು ಮುಂದಕ್ಕೆ ಹಾಕುತ್ತ ಹೋಗುತ್ತಿರುತ್ತಾರೆ, ಆದರೆ ಒಂದಲ್ಲ ಒಂದು ದಿನ ಮದುವೆ ಆಗಲೇಬೇಕಲ್ಲ, ಈ ಮದುವೆಯಾಗುವುದು ಯಾಕೆ ಮತ್ತು ಎಷ್ಟನೇ ವಯಸ್ಸಿನಲ್ಲಿ ಮದುವೆಯಾಗಬೇಕು ಅನ್ನೋದರ ಮಾಹಿತಿಯನ್ನು ನಾವು ಈ ದಿನ ತಿಳಿಯೋಣ

ಹಾಗಾದರೆ ಬನ್ನಿ ಸ್ನೇಹಿತರ ಈ ಮಾಹಿತಿ ಪ್ರತಿಯೊಬ್ಬರಿಗೂ ಕೂಡ ಉಪಯುಕ್ತವಾದುದು ಆದ್ದರಿಂದ ಪ್ರತಿಯೊಬ್ಬರು ಮಾಹಿತಿಯನ್ನು ತಿಳಿಯಿರಿ ಮತ್ತು ಪ್ರತಿಯೊಬ್ಬರಿಗು ಕೂಡ ಶೇರ್ ಮಾಡಿ. ಹೆಣ್ಣಾಗಲಿ ಗಂಡಾಗಲಿ ಅವರ ಜೀವನಕ್ಕೆ ಒಂದು ಅರ್ಥ ಬರುವುದು ಅವರು ಮದುವೆ ಅನ್ನುವ ಸುಂದರ ಕ್ಷಣಕ್ಕೆ ಕಾಲಿಟ್ಟಾಗ ಹೌದು ಈ ಇಬ್ಬರ ಜೀವನಕ್ಕೆ ಹೊಸ ಅರ್ಥ ಸಿಗೋದು ಮದುವೆಯಾದ ಬಳಿಕ ಈ ಸಮಾಜದಲ್ಲಿ ಮದುವೆಯಾದ ಬಳಿಕ ಹೆಣ್ಣಾಗಲಿ ಗಂಡನ್ನಾಗಲಿ ನೋಡುವ ದೃಷ್ಟಿಕೋನವೂ ಬದಲಾಗುತ್ತದೆ ಹಾಗೆ ಅವರ ಜೀವನವೂ ಕೂಡ ತುಂಬಾನೇ ಬದಲಾಗುತ್ತದೆ.

ಮದುವೆ ಎಂದರೆ ಅರ್ಥವೇನು ಹಾಗೂ ಮದುವೆ ಯಾಕೆ ಆಗುತ್ತಾರೆ ಅಂದರೆ ಮದುವೆಯಾಗುವ ಮುಖ್ಯ ಕಾರಣವೇನು ಅಂದರೆ ಸಂತಾನ ಬೆಳೆಸುವುದಕ್ಕಾಗಿ. ಹಾಗಾದರೆ ಈ ಮದುವೆ ಆಗಲು ಪ್ರಶಸ್ತವಾದ ವಯಸ್ಸು ಎಷ್ಟು ಹೆಣ್ಣಿಗೆ ಗಂಡಿಗೆ ಯಾವ ವಯಸ್ಸಿನಲ್ಲಿ ಮದುವೆಯಾಗುವುದು ಉತ್ತಮ ಎಂದು ಹೇಳುವುದಾದರೆ, ಗಂಡಿಗೆ ಇಪ್ಪತ್ತ್ ಒಂದು ವರ್ಷ ತುಂಬಿದ ನಂತರ ಮತ್ತು ಹೆಣ್ಣಿಗೆ ಹದಿನೆಂಟು ವರ್ಷ ತುಂಬಿದ ನಂತರ ಈ ಇಬ್ಬರಿಗೆ ಮದುವೆಯಾಗಲು ಪ್ರಶಸ್ತವಾದ ವಯಸ್ಸು ಇದಾಗಿರುತ್ತದೆ.

ಆದ್ದರಿಂದಲೇ ನಮ್ಮ ಕಾನ್ಸ್ಟಿಟ್ಯೂಷನ್ ನಲ್ಲಿಯೂ ಕೂಡಾ ಮದುವೆಯಾಗಲು ಪ್ರಶಸ್ತವಾದ ವಯಸ್ಸು ಹೆಣ್ಣು ಮಕ್ಕಳಿಗೆ ಹದಿನೆಂಟು ವರ್ಷ ತುಂಬಿರಬೇಕು ಮತ್ತು ಗಂಡು ಮಕ್ಕಳಿಗೆ ಇಪ್ಪತ್ತೊಂದು ವರ್ಷ ತುಂಬಿರಬೇಕು ಎಂದು ಹೇಳಲಾಗಿದ್ದು, ಈ ವಯಸ್ಸಿನಲ್ಲಿ ಗಂಡು ಮತ್ತು ಹೆಣ್ಣು ಮದುವೆಯಾಗಲು ಮಾನಸಿಕವಾಗಿ ಮತ್ತು ದೈಹಿಕವಾಗಿ ಪಕ್ವವಾಗಿರುತ್ತದೆ, ಆದ್ದರಿಂದ ಈ ವಯಸ್ಸಿನಲ್ಲಿ ಮದುವೆ ಮಾಡುವುದರಿಂದ ಈ ಇಬ್ಬರಿಗೂ ಉತ್ತಮ ಮತ್ತು ಇವರ ಸಂತಾನಕ್ಕೂ ಕೂಡ ಒಳ್ಳೆಯದು ಅನ್ನುವ ಕಾರಣಕ್ಕಾಗಿ.

ಹಿಂದೆಲ್ಲಾ ಬಾಲ್ಯ ವಿವಾಹವನ್ನು ಮಾಡುತ್ತಿದ್ದರು ಆದರೆ ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಮದುವೆ ಮಾಡುವುದರಿಂದ ಯಾವ ಅರಿವು ಕೂಡ ಇರುವುದಿಲ್ಲ ಆದರೆ ಇಂದಿನ ದಿನಗಳಲ್ಲಿ ಬಾಲ್ಯ ವಿವಾಹ ಇಲ್ಲದಿದ್ದರೂ ಕೂಡ ಜನರು ಮಾತ್ರ ಸರಿಯಾದ ವಯಸ್ಸಿಗೆ ಮದುವೆಯಾಗುತ್ತಿಲ್ಲ, ಈ ಕಾರಣದಿಂದಾಗಿ ವಯಸ್ಸಲ್ಲದ ವಯಸ್ಸಿನಲ್ಲಿ ಮದುವೆಯಾಗುವುದರಿಂದ ಹಲವಾರು ವೈಯಕ್ತಿಕ ಕಾರಣಗಳಿಂದಾಗಿ ಸಂತಾನೋತ್ಪತ್ತಿಗೆ ತೊಂದರೆಯಾಗುವ ಸಾಧ್ಯತೆಗಳು ಹೆಚ್ಚಾಗಿಯೇ ಇರುತ್ತದೆ. ಹಾಗಾದರೆ ವಯಸ್ಸಲ್ಲದ ವಯಸ್ಸಿನಲ್ಲಿ ಅಂದರೆ ತಡವಾಗಿ ಮದುವೆಯಾಗುವುದರಿಂದ ಯಾವೆಲ್ಲ ತೊಂದರೆಗಳು ಎದುರಾಗುತ್ತವೆ, ಯಾಕೆ ತಡವಾಗಿ ಮದುವೆಯಾಗಬಾರದು ಅನ್ನುವುದನ್ನು ಕೆಳಗೆ ನೀಡಲಾಗಿರುವ ವಿಡಿಯೋದಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ ತಪ್ಪದ ವಿಡಿಯೋವನ್ನು ವೀಕ್ಷಿಸಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...