ಭೋಪಾಲ್: ಮಧ್ಯ ಪ್ರದೇಶದ ಭವರ್ಕುವಾದ ಪಿಪಲಿಯಾ ಕೆರೆಯಲ್ಲಿ ಇಂದು ವ್ಯಕ್ತಿಯ ಶವ ಪತ್ತೆಯಾಗಿದೆ. ಮೃತನ ಬಳಿ ಡೆತ್ ನೋಟ್ ಲಭ್ಯವಾಗಿದ್ದು, ಪತ್ನಿ, ಅತ್ತೆ ಮತ್ತು ನಾದಿನಿಯಿಂದಾಗಿ ಪ್ರಾಣ ಕಳೆದುಕೊಂಡಿರುವ ಬಗ್ಗೆ ಪತ್ರದಲ್ಲಿ ಬರೆಯಲಾಗಿದೆ.

ಪ್ರತಾಪನಗರದ ನಿವಾಸಿ 33 ವರ್ಷದ ರಾಜಕುಮಾರ್ ಉರ್ಫ್ ರಾಜು ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ರಾಜಕುಮಾರ್ ಕೇಟರಿಂಗ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದನು. ಕೆಲಸದ ವಿಷಯವಾಗಿ ಸೋಮವಾರ ಮನೆಯಿಂದ ಹೊರ ಹೋಗಿದ್ದ ರಾಜಕುಮಾರ್ ಮಂಗಳವಾರ ರಾತ್ರಿಯಾದ್ರೂ ಹಿಂದಿರುಗಿರಲಿಲ್ಲ. ಇಂದು ಬೆಳಗ್ಗೆ ಪಿಪಲಿಯಾ ಕೆರೆಯಲ್ಲಿ ರಾಜಕುಮಾರ್ ಮೃತದೇಹ ಪತ್ತೆಯಾಗಿದೆ.
suicide
ಸೂಸೈಡ್ ನೋಟ್ ನಲ್ಲಿ ಏನಿತ್ತು?: ನನ್ನ ಹೆಸರು ರಾಜಕುಮಾರ್, ಪತ್ನಿ ಕುಟುಂಬಸ್ಥರ ಕಿರುಕುಳದಿಂದ ಸೂಸೈಡ್ ಮಾಡಿಕೊಳ್ಳುತ್ತಿದ್ದೇನೆ. ದಯವಿಟ್ಟು ನನ್ನ ಸಾವಿನ ಬಗ್ಗೆ ಯಾರಿಗೂ ತೊಂದರೆ ಕೊಡಬೇಕು. ತೊಂದರೆ ಕೊಡುವದಿದ್ದರೆ ಪತ್ನಿ, ಅತ್ತೆ ಮತ್ತು ನಾದಿನಿಗೆ ನೀಡಿ. ಯಾಕೆಂದರೆ ಅವರಿಂದಲೇ ನಾನು ಸಾಯುತ್ತಿದ್ದೇನೆ ಎಂದು ಬರೆಯುವ ಮೂಲಕ ತಮ್ಮ ಸಾವಿಗೆ ಮೂವರು ಕಾರಣ ಎಂದು ಹೇಳಿದ್ದಾರೆ.
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •