ಹೌದು ಇದೀಗ ಮಾಧ್ಯಮ ಮೂಲಕ ಬಂದಿರುವ ಮಾಹಿತಿ ಪ್ರಕಾರ, ಯುವಕನನ್ನ ಪ್ರೀತಿಸಿ ವಿವಾಹ ಆಗಿದ್ದಕ್ಕೆ, ಪೋಷಕರು ಇವರಿಬ್ಬರ ಮದುವೆಗೆ ವಿರೋಧಿಸಿ ಕಾರಣಕ್ಕೇ, ನೊಂದ ಯುವತಿ ಇದೆ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹೌದು ತೆಲಂಗಾಣದ, ಜಂಗಾಂವ್ ಎನ್ನುವ ಜಿಲ್ಲೆಯ ಕೊಡಕಂಡ್ಲ ಎನ್ನುವ ಊರಿನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

20 ವರ್ಷದ ಶ್ರೀಲೇಖಾ ಕೊಡಕಂಡ್ಲ ಗ್ರಾಮದವರಂತೆ.
ಶ್ರೀಲೇಖಾರವರು, ತಮ್ಮದೇ ಊರಿನ ಮನೋಹರ್ (20) ಎನ್ನುವ ಹುಡುಗನನ್ನು  ಪ್ರೀತಿಸುತ್ತಿದ್ದರಂತೆ. ವಿವಾಹವಾಗಲು ಡಿಸೆಂಬರ್ 16ರಂದು ಹೈದರಾಬಾದ್ ಗೆ ಶ್ರೀಲೇಖಾ ಹಾಗೂ ಈಕೆಯ ಪ್ರಿಯಕರ ಮನೋಹರ್ ಬಂದಿದ್ದರು ಎನ್ನಲಾಗಿದೆ.

Suicide

ಜೊತೆಗೆ ಈ ಜೋಡಿ ಇದೆ ಡಿಸೆಂಬರ್ 22ರಂದು ಮದುವೆಯಾಗಿ, ತಮ್ಮ ಊರಿಗೆ ಹೋಗುವ ಮೊದಲು ಪೊಲೀಸರ ಬಳಿ ರಕ್ಷಣೆ ಕೇಳಿದ್ದರು. ತದನಂತರ ಪೊಲೀಸ್ ಅಧಿಕಾರಿಗಳು ಕೂಡ  ಇವರಿಬ್ಬರ ಕುಟುಂಬದ ಜನರನ್ನು ಕರೆಸಿ, ಮನವೊಲಿಸುವ ಕೆಲಸ ಕೂಡ ಮಾಡಿದರು. ಆದ್ರೆ ಇವರಿಬ್ಬರ ದಾಂಪತ್ಯ ಜೀವನಕ್ಕೆ ಒಪ್ಪಿರಲಿಲ್ಲ. ಗಲಾಟೆ ಹೆಚ್ಚಿಗೆ ಆಗುತ್ತಿದ್ದ ಹಾಗೆ ಪೊಲೀಸರು ಶ್ರೀಲೇಖಾಳನ್ನ ಜನಗಮಾ ಸಖಿ ಕೇಂದ್ರಕ್ಕೆ ಕಳಿಸಿ ಕೊಟ್ಟಿದ್ದಾರೆ.

ಇದೆ ಹಿನ್ನೆಲೆಯಲ್ಲಿ ಯುವತಿ,ತಮ್ಮ ಮನೆಯವರೆ ನಮ್ಮಿಬ್ಬರ ಮದುವೆಗೆ ಒಪ್ಪಲಿಲ್ಲವೆಂದು ಮಾನಸಿಕವಾಗಿ ನೊಂದು ,ಆಮೇಲೆ ಶ್ರೀಲೇಖಾ ಸಖಿ ಕೇಂದ್ರದ  ಶೌಚಾಲಯದ ಒಳಗೆ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಂದು ತಿಳಿದುಬಂದಿದೆ.. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ, ಬಳಿಕ ಕಾಮೆಂಟ್ ಕೂಡ ಮಾಡಿ ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •