ಕಬ್ಬಿನಿಂದ ಹೊರತೆಗೆಯಲಾದ ಎಥೆನಾಲ್ ಬೆಲೆಯನ್ನು ಕೇಂದ್ರಸರ್ಕಾರವು ಗುರುವಾರ(ಅ. 29)ದಂದು ಹೆಚ್ಚಳ ಮಾಡಿದೆ. ಎಥೆನಾಲ್ ಖರೀದಿ ದರ ಏರಿಕೆ ಮಾಡಿರುವ ಕೇಂದ್ರ ಸರ್ಕಾರ, ಎಲ್ಲ ಡಿಸ್ಟಿಲರಿಗಳು ಎಥೆನಾಲ್ ಉತ್ಪಾದಿಸಿ ಆದಾಯ ಗಳಿಸಬಹುದು. ಎಥೆನಾಲ್ ಬೆಲೆ ಏರಿಸಿರುವುದರಿಂದ ರೈತರ ಮತ್ತು ಸಕ್ಕರೆ ಕಾರ್ಖಾನೆಗಳ ಆದಾಯ ವೃದ್ಧಿಸುವ ಸಾಧ್ಯತೆ ಇದೆ.

ಪೆಟ್ರೋಲ್ ಮಿಶ್ರಣಕ್ಕಾಗಿ ಬಳಸುವ ಕಬ್ಬಿನಿಂದ ಹೊರತೆಗೆಯಲಾದ ಎಥೆನಾಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 3.34 ರುಗೇರಿಸಲಾಗಿದೆ. ಪ್ರಧಾನಿ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ(ಸಿಸಿಇಎ) ಕಬ್ಬಿನ ರಸ, ಸಕ್ಕರೆ ಮೂಲಕ ಉತ್ಪಾದಿಸಲ್ಪಡುವ ಎಥೆನಾಲ್ ದರವನ್ನು ಪ್ರತಿ ಲೀಟರ್ ಗೆ 62.65 ರುಗೆನಿಗದಿಪಡಿಸಲು ನಿರ್ಧರಿಸಿತು. ಸದ್ಯ ಡಿಸೆಂಬರ್ 2020ರ ತನಕ ಈ ಬೆಲೆ ಪ್ರತಿ ಲೀಟರ್ ಗೆ 59.48 ರು ನಷ್ಟಿದೆ.

Sugarcane-grower

ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಸಕ್ಕರೆ ಕಾರ್ಖಾನೆಗಳಿಂದ, ಪೆಟ್ರೋಲ್ ಮಿಶ್ರಣಕ್ಕಾಗಿ ಡಿಸೆಂಬರ್ 1 ರಿಂದ ಹೆಚ್ಚಿನ ದರದಲ್ಲಿ ಎಥೆನಾಲ್ ಖರೀದಿಸಲಿವೆ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.

ಪರಿಷ್ಕೃತ ದರಗಳ ಬಗ್ಗೆ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಕಾಶ್ ಜಾವಡೇಕರ್ ಮಾಹಿತಿ ನೀಡಿ, ಸಿ ಹೆವಿ ಮೊಲಾಸಿಸ್ ನಿಂದ ತಯಾರಿಸಲಾದ ಎಥಾನಲ್ ದರ 45.69 ಪ್ರತಿ ಲೀಟರ್ ನಿಂದ 43.75 ರು ಗೇರಿಸಲಾಗಿದೆ. ಬಿ ಹೆವಿ ನಿಂದ ತಯಾರಿಸಲಾದ ಎಥಾನಲ್ ದರ 54.61 ರು ಪ್ರತಿ ಲೀಟರ್ ನಿಂದ 57.61 ರು ಗೇರಿಸಲಾಗಿದೆ.

ರೈತರ ಆದಾಯ ಹೆಚ್ಚಾಗುವ ನಿರೀಕ್ಷೆ ಇದೆ. ಸಕ್ಕರೆ ಕಾರ್ಖಾನೆಗಳು ಎಥೆನಾಲ್ ಉತ್ಪಾದನೆಯ ಮೂಲಕ ಆದಾಯದ ವೃದ್ಧಿಗೆ ಮುಂದಾಗುತ್ತಿದ್ದು, ದೊಡ್ಡಮಟ್ಟದಲ್ಲಿ ಹೂಡಿಕೆ ಮಾಡಲಾಗುತ್ತಿದೆ. ತೈಲ ಕಂಪನಿಗಳು ಪೆಟ್ರೋಲ್ ಜೊತೆಗೆ ಶೇ. 10 ರಷ್ಟು ಎಥೆನಾಲ್ ಮಿಶ್ರಣ ಮಾಡಬಹುದಾಗಿದ್ದು, ಸರ್ಕಾರ ಎಥೆನಾಲ್ ಬ್ಲೆಂಡೆಡ್ ಪೆಟ್ರೋಲ್ ಬಳಕೆ ಹೆಚ್ಚಳವಾಗುತ್ತಿದೆ. ಎಥೆನಾಲ್ ಮಿಶ್ರಣದ ಪೆಟ್ರೋಲ್ ಬಳಕೆಯಿಂದ ವಾರ್ಷಿಕ ತೈಲ ಆಮದಿನಲ್ಲಿ ಸುಮಾರು ರೂ.8000 ಕೋಟಿ ಉಳಿತಾಯ ನಿರೀಕ್ಷೆ ಮಾಡಲಾಗಿದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •