ಹಿರಿಯ ನಟಿ ಸುಧಾರಾಣಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಒಂದಾನೊಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆ ನಟಿಯಾಗಿದ್ದ ಸುಧಾರಾಣಿ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಇನ್ನು ಅವರು ತಮ್ಮ ನಟನಾ ವೃತ್ತಿಯಲ್ಲಿ ಸಂತೋಷದಿಂದ ಕಾಲ ಕಳೆಯುತ್ತಿದ್ದು, ಆಗಾಗ ಪರದೆ ಮೇಲೆ ಕಾಣಿಸಿಕೊಳ್ಳುತ್ತಿರುತ್ತಾರೆ. ಆದರೆ ಇದೀಗ ಸುಧಾರಾಣಿ ಅವರು ಸಾಮಾಜಿಕ ಜಾಲತಾಣದಲ್ಲಿ ಕೋಪಗೊಂಡಿದ್ದು ಅವರು ಒಂದು ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಸುಧಾರಾಣಿ ಅವರು
ಡಾ. ರಾಜಕುಮಾರ್ ಅವರೊಂದಿಗಿನ ದೇವತಾ ಮನುಷ್ಯ ಸಿನಿಮಾದ ಫೋಟೋ ಹಂಚಿಕೊಂಡು ಜನರ ಭಾವನೆಗಳೊಂದಿಗೆ ಆಟವಾಡಬೇಡಿ ಎಂದು ಬರೆದುಕೊಂಡಿದ್ದಾರೆ. ಇನ್ನು ಸುಧಾರಣಿ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಇನ್ನು ಸುಧಾರಣಿ ಅವರು ಹೀಗೆ ಹೇಳಿದ್ದಕ್ಕೆ? ಯಾರಿಗೆ ಹೇಳಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಕೆಳಗೆ ನೀಡಲಾಗಿದ್ದು, ಇದನ್ನು ಸಂಪೂರ್ಣವಾಗಿ ಓದಿ.
ಹೌದು ಈಗಾಗಲೇ ಶಾಂತಿನಗರದ ಶಾಸಕ ಹ್ಯಾರಿಸ್ ಅವರು ರಾಜಕುಮಾರ್ ಪ್ರತಿಮೆ ಬಗ್ಗೆ ವಿವಾದಿತ ಹೇಳಿಕೆಯನ್ನು ನೀಡಿದ್ದರು. ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಕೂಡ ಆಗಿತ್ತು. ಇನ್ನು ಈ ಕುರಿತಾಗಿ ಸುಧಾರಾಣಿ ಅವರು ರಾಜಕುಮಾರ್ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಬೇಡಿ, ಜನರ ಭಾವನೆಗಳೊಂದಿಗೆ ಆಟವಾಡಬೇಡಿ ಎಂದು ಹೇಳಿದ್ದಾರೆ.
ಆದರೆ ಸುಧಾರಾಣಿ ಅವರು ತಮ್ಮ ಪೋಸ್ಟ್ನಲ್ಲಿ ಯಾರ ಹೆಸರು ಕೂಡ ಉಲ್ಲೇಖ ಮಾಡಿಲ್ಲ. ಸುಧಾರಾಣಿ ಅವರು ದೇವತಾ ಮನುಷ್ಯ ಸಿನಿಮಾದಲ್ಲಿ ರಾಜಕುಮಾರ್ ಅವರ ಮಗಳಾಗಿ ನಟಿಸಿದ್ದರು. ಇನ್ನು ಈ ಸಿನಿಮಾದ ಫೋಟೋ ಹಂಚಿಕೊಂಡಿರುವ ಸುಧಾರಾಣಿ ಅವರು ಈ ಮೇಲಿನಂತೆ ಬರೆದುಕೊಂಡಿದ್ದಾರೆ. ಇಷ್ಟೇ ಅಲ್ಲದೆ ಸುಧಾರಾಣಿ ಅವರು ರಾಜಕುಮಾರ್ ಅವರ ಹೆಗಲ ಮೇಲೆ ಮಲಗಿಕೊಂಡಿರುವ ಫೋಟೋ ಒಂದನ್ನು ಶೇರ್ ಮಾಡಿ “ಅಭಿಮಾನದ ಅಣೆಕಟ್ಟನ್ನು ಒಡೆಯಬೇಡಿ… ಸಲ್ಲದ ವಿಷಯದ ಬಗ್ಗೆ ಮಾತನಾಡುವುದು ಸರಿಯಲ್ಲ” ಎಂದು ಹೇಳಿದ್ದಾರೆ.
ಇನ್ನು ಶಾಸಕ ಹ್ಯಾರಿಸ್ ಅವರು “ಪ್ರತಿಮೆ ಬಿಡುವುದೇ ದೊಡ್ಡ ಕಥೆ… ಆಫೀಸ್ ಬೇರೆ ಮಾಡಿಕೊಡೋಕೆ ಆಗುತ್ತಾ? ಅವರು ಯಾರೋ ರಾಜಕುಮಾರ ಎಂದು ಮಾಡಿ ಕೊಟ್ಟಿದ್ದಾರಂತೆ. ಅದನ್ನು ತೆಗೆಯಿರಿ. ಪ್ರತಿಮೆಗೆ ಇಲ್ಲ ಏಕೆ ಕವರ್ ಮಾಡಿ ಇಡುತ್ತಾರೆ?.. ರಸ್ತೆಯಲ್ಲೇ ಏಕೆ ಇಡುತ್ತಾರೆ?.. ಮನೆಯಲ್ಲಿ ಇಡಬಹುದಿತ್ತು ಅಲ್ಲವೇ..” ಎಂದು ರಾಜಕುಮಾರ್ ಪ್ರತಿಮೆ ಬಗ್ಗೆ ಹಗುರವಾಗಿ ಮಾತನಾಡಿದ್ದರು. ಇನ್ನು ಇದನ್ನು ಕೇಳಿದ ರಾಜಕುಮಾರ್ ಅವರ ಅಭಿಮಾನಿಗಳು ರೊಚ್ಚಿಗೆದ್ದಿದ್ದರು.
ಆದರೆ ನಂತರದಲ್ಲಿ ಹ್ಯಾರಿಸ್ ಅವರು “ನಾನು ಅಣ್ಣಾವ್ರ ದೊಡ್ಡ ಅಭಿಮಾನಿ. ಇಂಟರ್ನ್ಯಾಷನಲ್ ಅಣ್ಣಾವ್ರು ಎಂದರೆ ರಾಜಕುಮಾರ್. ಅವರ ಬಗ್ಗೆ ಯಾರಾದರೂ ಮಾತಾಡೋಕೆ ಆಗುತ್ತಾ. ಉದ್ದೇಶಪೂರ್ವಕವಾಗಿ ನನ್ನ ಹೇಳಿಕೆಯನ್ನು ಕಟ್ ಮಾಡಿ ವೈರಲ್ ಮಾಡಲಾಗಿದೆ. ಇನ್ನು ಅಭಿಮಾನಿಗಳಿಗೆ ಇದರಿಂದ ಬೇಸರವಾಗಿದ್ದರೆ ದಯವಿಟ್ಟು ನನ್ನನ್ನು ಕ್ಷಮಿಸಿ” ಎಂದು ಹೇಳಿಕೆ ನೀಡಿ ಹ್ಯಾರಿಸ್ ಅವರು ರಾಜಕುಮಾರ್ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದರು.