ಬಡವನ ಮನೆಯಲ್ಲಿ ಒಂದು ಲೋಟ ಹಾಲು ಕುಡಿಯದೆ ಎದ್ದು ಹೋದ ಸುಧಾಮೂರ್ತಿ! ಅಸಲಿ ಕಾರಣ ಕೇಳಿದ್ರೆ ಕಣ್ಣೀರು ಬರುತ್ತೆ

Home Kannada News/ಸುದ್ದಿಗಳು

ಇನ್ಫೋಸಿಸ್ ಮುಖ್ಯಸ್ಥೆ ಸುಧಾ ಮೂರ್ತಿ ಅಮ್ಮನವರದ್ದು ಬಹಳ ವೈಶಾಲ್ಯವಾದ ಹೃದಯ. ರಾಜ್ಯದಲ್ಲಿ ಎಲ್ಲಿ ಏನೇ ಕಷ್ಟವಾದರೂ ಮೊದಲು ನೆರವಿಗೆ ಬರುವುದು ಇನ್ಫೋಸಿಸ್ ಸಂಸ್ಥೆ. ಆರೋಗ್ಯ ಸಮಸ್ಯೆ ಇರಲಿ, ಆರ್ಥಿಕ ಸಮಸ್ಯೆ ಇರಲಿ, ನೆರೆ ಸಮಸ್ಯೆ ಇರಲಿ, ಬಡವರು ಅನುಭವಿಸುವ ಕಷ್ಟವೇ ಆಗಲಿ. ಎಂಥದ್ದೇ ಕಷ್ಟ ಇದ್ದರೂ, ಸಹಾಯಹಸ್ತ ಚಾಚುವುದು ಇನ್ಫೋಸಿಸ್ ಸಂಸ್ಥೆ. ಇದಲ್ಲದೆ ಇತ್ತೀಚಿಗೆ ಲಾಕ್ ಡೌನ್ ಸಮಯದಲ್ಲಿ ಕೂಡ ಇನ್ಫೋಸಿಸ್ ವತಿಯಿಂದ ಬಡಜನರಿಗೆ ೧೦೦ ಕೋಟಿ ಅನುದಾನ ಬಿಡುಗಡೆ ಮಾಡಿ ಸಾಕಷ್ಟು ರೀತಿಯಲ್ಲಿ ಬಡಜನರಿಗೆ ಸಹಾಯಮಾಡಿದ್ದರು. ಮಾತೃ ಹೃದಯಿ ಎಂದು ಹೆಸರು ಪಡೆದಿರುವ ಸುಧಾಮೂರ್ತಿ ಅವರು ಒಬ್ಬ ಬಡವನ ಮನೆಗೆ ಹೋದಾಗ ಆಗಿದ್ದೇನು ಗೊತ್ತಾ? ತಿಳಿಯಲು ಮುಂದೆ ಓದಿ..

ಕರ್ನಾಟಕದ ಜನತೆಗೆ ಸುಧಾಮೂರ್ತಿ ಅವರನ್ನು ಕಂಡರೆ ಹೆಚ್ಚಿನ ಗೌರವ, ಅದಕ್ಕೆ ಕಾರಣ ಅವರು ನಮ್ಮ ರಾಜ್ಯದ ಜನತೆಗೆ ಮಾಡಿರುವ ಸಹಾಯ. ಮಾತೃರೂಪಿ ಸುಧಾಮೂರ್ತಿ ಅವರು ತಮಗೆ ಅತ್ಯಂತ ಪ್ರಿಯವಾದ ಹಾಲನ್ನು ಕುಡಿಯುವುದನ್ನು ಬಿಟ್ಟಿದ್ದಾರೆ. ಇದಕ್ಕೆ ಕಾರಣ ಅವರ ಜೀವನದಲ್ಲಿ ನಡೆದ ಒಂದು ಘಟನೆ. ಸುಧಾಮೂರ್ತಿ ಅವರ ಸಮಾಜ ಸೇವೆಯ ಕಾರ್ಯದ ನಡುವೆ ಒಂದು ಗ್ರಾಮದಲ್ಲಿ ಶಾಲೆ ಕಟ್ಟಿಸುವ ಕೆಲಸ ನಡೆಯುತ್ತಲಿರುತ್ತದೆ. ಅಲ್ಲಿಗೆ ಹೋಗುವಾಗ ದಾರಿ ಮಧ್ಯದಲ್ಲಿ ಮಳೆ ಹೆಚ್ಚಾಗಿ, ಎಲ್ಲಾದರೂ ಒಂದು ಕಡೆ ವಿಶ್ರಾಂತಿ ಪಡೆದು ನಂತರ ಹೋಗೋಣ ಎಂದು ನಿರ್ಧರಿಸಿ ಒಂದು ಗುಡಿಸಲಿಗೆ ಹೋಗುತ್ತಾರೆ.

ಅಲ್ಲಿದ್ದ ವ್ಯಕ್ತಿ ಬಡವನಾದರು ಕಾರ್ ನಲ್ಲಿ ಬಂದ ಸುಧಾಮೂರ್ತಿ ಅವರನ್ನು ನೋಡಿ, ಮೇಡಂ ಬನ್ನಿ ಕುಡಿಯಲು ಕಾಫಿ ಟೀ ಏನು ತೆಗೆದುಕೊಳ್ಳುತ್ತೀರಿ ಎಂದು ಕೇಳುತ್ತಾರೆ, ಆಗ ಸುಧಾಮೂರ್ತಿ ಅವರು ಏನು ಬೇಡ ಎಂದು ಹೇಳುತ್ತಾರೆ. ಆಗ ಆ ವ್ಯಕ್ತಿ ಇಲ್ಲ ನಮ್ಮ ಮನೆಗೆ ಬಂದಮೇಲೆ ನೀವು ಕನಿಷ್ಠ ಪಕ್ಷ ಒಂದು ಲೋಟ ಹಾಲನ್ನಾದರು ಕುಡಿಯಬೇಕು ಎನ್ನುತ್ತಾರೆ. ನಂತರ ಅಡುಗೆ ಮನೆಯಲ್ಲಿದ್ದ ತನ್ನ ಪತ್ನಿಯನ್ನು ಕರೆದು, ಅವರಿಗೆ ಒಂದು ಲೋಟ ಹಾಲು ತರುವಂತೆ ಒರಿಯಾ ಭಾಷೆಯಲ್ಲಿ ಹೇಳುತ್ತಾನೆ. ಆಗ ಆ ಹೆoಗಸು, ಸುಧಾಮೂರ್ತಿ ಅವರಿಗೆ ಒರಿಯಾ ಭಾಷೆ ಬರುವುದಿಲ್ಲ ಎಂದುಕೊಂಡು, ಆ ಬಿಳಿ ತಲೆ ಹೆoಗಸಿಗೆ ಏನಾಗಿದೆ, ನಮ್ಮಂತಹ ಬಡವರ ಮನೆಯಲ್ಲಿ ಇರುವುದು ಒಂದು ಲೋಟ ಹಾಲು ಅಷ್ಟೇ ಅದು ನನ್ನ ಮಗುವಿಗೆ ಬೇಕು ಎಂದು ಹೇಳಿ ತನ್ನ ಗಂಡನ ಜೊತೆ ಹಾಲು ಕೊಡುವುದನ್ನು ನಿರಾಕರಿಸುತ್ತಾಳೆ.

ಆಗ ಆ ವ್ಯಕ್ತಿ ನಮ್ಮ ಗ್ರಾಮಕ್ಕೆ ಶಾಲೆ ಕಟ್ಟಿಸಲು ಬಂದಿದ್ದಾರೆ, ಹಾಲಿಗೆ ನೀರು ಬೆರೆಸಿಯಾದರು ತಂದುಕೊಡು ಎನ್ನುತ್ತಾರೆ. ಗಂಡನ ಮಾತಿಗೆ ಒಪ್ಪಿಕೊಂಡು ಆಕೆ ಹಾಲಿಗೆ ನೀರು ಬೆರೆಸಿ ತಂದುಕೊಡುತ್ತಾಳೆ. ಅಷ್ಟು ಹೊತ್ತು ಗಂಡ ಹೆಂಡತಿ ಒರಿಯಾ ಭಾಷೆಯಲ್ಲಿ ಆಡಿದ ಜಗಳದ ಮಾತುಗಳು ಸುಧಾಮೂರ್ತಿ ಅಮ್ಮನವರಿಗೆ ಸಂಪೂರ್ಣವಾಗಿ ಅರ್ಥ ಆಗಿರುತ್ತದೆ. ಸುಧಾಮೂರ್ತಿ ಅವರು ಹಾಲನ್ನು ನಿರಾಕರಿಸುತ್ತಾ, ಇಂದು ಬುಧವಾರ, ಬುದ್ಧನ ದಿನ ಆಗಿರುವುದರಿಂದ ನಾನು ಉಪವಾಸ ಇದ್ದೀನಿ, ನೀರನ್ನು ಬಿಟ್ಟು ಬೇರೇನೂ ಕುಡಿಯುವುದಿಲ್ಲ ಎನ್ನುತ್ತಾರೆ. ಅಂದಿನಿಂದ ಒಂದು ಲೋಟ ಹಾಲಿಗೆ ಇಷ್ಟು ಕಷ್ಟಪಡುವ ಜನ ಇದ್ದಾರೆ ಎಂದು ಅರಿತು, ತಾವು ಸಾ-ಯುವವರೆಗೂ ಹಾಲು ಕುಡಿಯುವುದಿಲ್ಲ ಎಂದು ನಿರ್ಧಾರ ಮಾಡುತ್ತಾರೆ. ಇದಕ್ಕೆ ಅಲ್ವಾ ಸುಧಾ ಮೂರ್ತಿ ಅವರಿಗೆ ಕರ್ನಾಟಕದ ಜನತೆ ತಾಯಿಯ ಸ್ಥಾನ ನೀಡಿರುವುದು! ಸುಧಾ ಮೂರ್ತಿ ಅವರ ಈ ಒಳ್ಳೆಯ ಕೆಲಸಕ್ಕೆ ಕೋಟಿ ನಮನಗಳು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...