ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಸುಧಾರಾಣಿ- ವಿಜಯ್ ಸೂರ್ಯಗೆ ಏನು ಪಾತ್ರ?ಅನಿರುದ್ಧ ಮತ್ತು ಮೇಘಾ ಶೆಟ್ಟಿ ಕಾಂಬಿನೇಷನ್‌ನ ಜೊತೆ ಜೊತೆಯಲಿ ಧಾರಾವಾಹಿ ಕಿರುತೆರೆಯಲ್ಲಿ ಹಲವು ದಾಖಲೆಗಳನ್ನು ಮಾಡಿದೆ. ಇದೀಗ ಈ ಧಾರಾವಾಹಿಗೆ ಒಂದು ಮಹತ್ತರ ತಿರುವು ಸಿಕ್ಕಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಜೊತೆ ಜೊತೆಯಲಿ ಕೂಡ ಒಂದು. ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಜೊತೆ ಜೊತೆಯಲಿ ಕೂಡ ಒಂದು. ಅನಿರುದ್ಧ ಮತ್ತು ಮೇಘಾ ಶೆಟ್ಟಿ ಜೊತೆಯಾಗಿ ನಟಿಸುತ್ತಿರುವ ಈ ಧಾರಾವಾಹಿ ಈಗಾಗಲೇ ಟಿಆರ್‌ಪಿ ವಿಚಾರದಲ್ಲಿ ಹಲವು ದಾಖಲೆಗಳನ್ನು ಬರೆಯುತ್ತಿದೆ. ಇದೀಗ ಈ ಸೂಪರ್ ಹಿಟ್ ಸೀರಿಯಲ್‌ಗೆ ಮತ್ತಿಬ್ಬರು ತಾರೆಯರು ಪ್ರವೇಶ ನೀಡುತ್ತಿದ್ದು ನಟಿ ಸುಧಾರಾಣಿ ಮತ್ತು ವಿಜಯ್ ಸೂರ್ಯ ಹೊಸದಾಗಿ ಬಂದಿರುವ ಅತಿಥಿ ಕಲಾವಿದರು ಎನ್ನಬಹುದು. ಹಾಗಾದರೆ, ಇವರಿಬ್ಬರಿಗೆ ಧಾರಾವಾಹಿಯಲ್ಲಿ ಏನು ಪಾತ್ರ? ಎಂದು ನೋಡುವುದಾದರೆ, ಜೊತೆ ಜೊತೆಯಲಿ ಧಾರಾವಾಹಿ ಈಗ ಅತ್ಯಂತ ಕುತೂಹಲಕಾರಿ ಘಟ್ಟಕ್ಕೆ ಬಂದು ನಿಂತಿದೆ. ಈ ಧಾರಾವಾಹಿಗೆ ಖ್ಯಾತ ನಟಿ ಸುಧಾರಾಣಿ ಹಾಗೂ ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ನಟ ವಿಜಯ್ ಸೂರ್ಯ ಪ್ರವೇಶ ಪಡೆದಿದ್ದಾರೆ. 45 ವರ್ಷದ ಯಶಸ್ವಿ ಉದ್ಯಮಿ, ಶ್ರೀಮಂತ ಆರ್ಯವರ್ಧನ್ 20 ವರ್ಷದ ಅನು ಸಿರಿಮನೆಯನ್ನು ಪ್ರೀತಿಸುತ್ತಾನೆ. ಆರ್ಯವರ್ಧನ್ ಪ್ರವೇಶದಿಂದ ಅನು ಜೀವನ ಬದಲಾಗುತ್ತದೆ. ಆರ್ಯವರ್ಧನ್ ಆಕೆಯನ್ನು ವಿವಾಹವಾಗಲು ಬಯಸಿದ್ದರೂ ವಿಧಿಯ ಆಟ ಬೇರೆಯೇ ಇರುತ್ತದೆ. ಈಗ ಕಥೆಯಲ್ಲಿ ಮಹತ್ತರ ತಿರುವು ಸಿಗುತ್ತಿದೆ. ಅನು ಜೀವನದಲ್ಲಿ ವಿಜಯ್ ಸೂರ್ಯ ಪ್ರವೇಶ ಆಗಿದ್ದು , ಈಗ ಅವರು ಫಾರಿನ್ ರಿಟರ್ನ್ಡ್. ಸುಧಾರಾಣಿ, ಅವರು ನಿವೃತ್ತ ಶಿಕ್ಷಕಿ ಆಗಿ ವಿಜಯ್ ಸೂರ್ಯ ಅವರ ತಾಯಿಯ ಪಾತ್ರವನ್ನು ನಿರ್ವಹಿಸುತ್ತಾ ಇದ್ದಾರೆ.

ಶಸ್ತ್ರಚಿಕಿತ್ಸೆ ಪಡೆದುಕೊಂಡಿರುವ ತಾಯಿಯ ಆರೈಕೆ ಮಾಡಲೆಂದು ವಿಜಯ್ ಸೂರ್ಯ ವಿದೇಶದಿಂದ ಬಂದಿರುತ್ತಾರೆ. ವಿದೇಶದಿಂದ ಬಂದ ವಿಜಯ್ ಸೂರ್ಯ ಅನು ಸಿರಿಮನೆ ತಂದೆ ಸುಬ್ಬುವಿನ ಅಂಗಡಿಗೆ ಸೀರೆ ಕೊಳ್ಳಲು ಹೋಗುತ್ತಾರೆ. ಆ ಸಂದರ್ಭದಲ್ಲಿ ಸುಬ್ಬು ಪ್ರಜ್ಞೆ ತಪ್ಪುತ್ತಾನೆ. ಸುಬ್ಬು ಆವರಿಗೆ ವಿಜಯ್ ಸೂರ್ಯ ನೆರವಾಗುತ್ತಾರೆ. ಅಲ್ಲಿಂದ ಅವರಿಬ್ಬರ ವಿಶೇಷ ಸ್ನೇಹ ಪ್ರಾರಂಭವಾಗುತ್ತದೆ. ಸೂರ್ಯನ ತಾಯಿ ಸುಧಾರಾಣಿ ಹೆಸರೂ ಅನುರಾಧ. ಅದೂ ಕೂಡ ವಿಶೇಷವಾದ ಬಾಂಧವ್ಯ ಬೆಳೆಸುತ್ತದೆ. ಸುಬ್ಬುವಿಗೆ ಸೂರ್ಯನನ್ನು ನೋಡಿದಾಗಲೆಲ್ಲ ತನ್ನ ಮಗಳಿಗೆ ಒಳ್ಳೆಯ ವರ ಎನ್ನಿಸಲು ಪ್ರಾರಂಭವಾಗುತ್ತದೆ. ಇನ್ನೊಂದು ಕಡೆ ಆರ್ಯವರ್ಧನ್, ಸೂರ್ಯನನ್ನು ಭೇಟಿಯಾಗುತ್ತಾನೆ. ಅವರಿಬ್ಬರ ನಡುವೆ ಸ್ನೇಹ ಬೆಳೆಯುತ್ತದೆ. ಅನು ಯಾರನ್ನು ವಿವಾಹವಾಗುತ್ತಾಳೆ? ಎನ್ನುವುದೇ ಸಧ್ಯ ಜೊತೆ ಜೊತೆಯಲಿ ಧಾರಾವಾಹಿಯ ವೀಕ್ಷಕರಿಗೆ ಇರುವ ಕುತೂಹಲ.

ಇನ್ನು ಕೆಲ ದಿನಗಳ ಹಿಂದೆ ಒಂದು ಸುದ್ದಿ ಹಬ್ಬಿತ್ತು. ಅದೇನೆಂದರೆ, ಅನಿರುದ್ಧ ಈ ಧಾರಾವಾಹಿಯಿಂದ ಹೊರಹೋಗುತ್ತಾರೆ ಅಂತ. ಅದಕ್ಕೆ ಆರ್ಯವರ್ಧನ್‌ ಪಾತ್ರಧಾರಿ ಅನಿರುದ್ಧ ಸ್ಪಷ್ಟನೆ ನೀಡಿದ್ದರು. ನಾನು ಬೇರೆ ಒಂದು ಕಾರ್ಯಕ್ರಮಕ್ಕೋಸ್ಕರ ನಮ್ಮ ಜೊತೆ ಜೊತೆಯಲಿ ಧಾರಾವಾಹಿಯನ್ನು ಬಿಡುತ್ತಿದ್ದೇನೆ ಅಂತ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಡುತ್ತಿದೆ. ದಯವಿಟ್ಟು ಯಾರೂ ಕೂಡ ಅಂಥ ಸುದ್ದಿಗಳಿಗೆ ಕಿವಿಗೊಡಬೇಡಿ, ಗಮನಕೊಡಬೇಡಿ. ನಾನು ಯಾವುದೇ ಕಾರಣಕ್ಕೂ ಜೊತೆ ಜೊತೆಯಲಿ ಧಾರಾವಾಹಿಯನ್ನು ಬಿಡುತ್ತಿಲ್ಲ. ತಮ್ಮ ಪ್ರೀತಿ, ಹಾರೈಕೆ, ಆಶೀರ್ವಾದ ನನ್ನ ಮೇಲೆ ಮತ್ತು ನಮ್ಮ ತಂಡದ ಮೇಲೆ ಯಾವ ರೀತಿಯಲ್ಲಿ ಇಷ್ಟು ದಿನ ಇತ್ತೋ, ಇನ್ನುಮುಂದೆಯೂ ಅದೇ ಥರ ಇರಲಿ ಎಂದು ತಮ್ಮಲ್ಲಿ ಕಳಕಳಿಯಿಂದ ಕೇಳಿಕೊಳ್ಳುತ್ತೇನೆ ಎಂದು ಹೇಳಿದ್ದರು.

https://youtu.be/F5KBhCX4XU0

………..
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •