ಹೌದು 2015ರಲ್ಲಿ ಸ್ಯಾಂಡಲ್ ವುಡ್ ನ ಖ್ಯಾತ ನಟ ಕಿಚ್ಚ ಸುದೀಪ್ ದಾಂಪತ್ಯ ಜೀವನದಲ್ಲಿ ಬಿರುಕುಗೊಂಡಿದ್ದು, ಗಂಡ-ಹೆಂಡತಿ ದೂರವಾಗಲು ಕೋರ್ಟ್ ಬಳಿ ವಿಚ್ಛೇದನ ಅರ್ಜಿಯನ್ನು ಸಲ್ಲಿಸಿದ್ದರು ಎನ್ನುವ ಮಾತು ಆಗ ಕೇಳಿಬಂದಿತ್ತು. ಹೌದು ನಟ ಕಿಚ್ಚ ಸುದೀಪ್ ಪತ್ನಿ ಪ್ರಿಯ ಮೂಲತಹ ಕೇರಳದವರಾದರೂ, ಓದಿದ್ದು ಎಲ್ಲವೂ ನಮ್ಮ ಬೆಂಗಳೂರಿನಲ್ಲಿ, ಬಳಿಕ ಇವರಿಬ್ಬರ ಪ್ರೇಮ ಕಥಾ ಆರಂಭವಾಗಿದ್ದು ಕಾಲೇಜಿನಲ್ಲಿ, ಸುದೀಪ್ ಕಾಲೇಜಿನಲ್ಲಿ ಹಾಡುತ್ತಿದ್ದರು. ಸುದೀಪ್ ಅವರು ಹಾಡುವುದೆಂದರೆ  ಪ್ರಿಯ ಅವರಿಗೆ ತುಂಬಾ ಇಷ್ಟವಿತ್ತಂತೆ. 

Sudeep-Marriage

ಇವರಿಬ್ಬರ ಕಾಲೇಜಿನ ಸ್ನೇಹ ಪ್ರೀತಿಗೆ ತಿರುಗಿ, ಇಬ್ಬರು ವಿವಾಹವಾಗಿದ್ದರು. ಬಳಿಕ ಆರಂಭದ ಹಂತದಲ್ಲಿ ಎಲ್ಲವೂ ಚೆನ್ನಾಗಿತ್ತು, ಮುಂದೆ ಹೋಗುತ್ತಾ ಹೋಗುತ್ತಾ ದಾಂಪತ್ಯ ಜೀವನದಲ್ಲಿ ಸಮಸ್ಯೆ ಕೇಳಿಬಂದಿದ್ದು, 2015 ರಲ್ಲಿ ವಿಚ್ಛೇದನ ಪಡೆಯಲು ಮುಂದಾಗಿದ್ದರು, ಆದ್ರೆ ಇದೀಗ ಇವರಿಬ್ಬರ ದಾಂಪತ್ಯ ಜೀವನ ಹೇಗಿದೆ? ಮತ್ತು ಯಾವ ಕಾರಣಕ್ಕಾಗಿ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ದಾಂಪತ್ಯ ಜೀವನವನ್ನ ಇದೀಗ ಹೆಚ್ಚು ಸುಖಮಯವನ್ನಾಗಿ ಮಾಡಿಕೊಂಡರು ಗೊತ್ತಾ.

ಹೌದು ಸುದೀಪ್ ಅವರಿಗೆ, ಅವರ ಮಗಳು ಎಂದರೆ ತುಂಬಾ ಇಷ್ಟ. ಮಗಳ ಹುಟ್ಟಿದ ಹಬ್ಬಕ್ಕೆ ಈ ಜೋಡಿ ಮತ್ತೆ ಒಂದಾಗಿದ್ದು, ಎರಡು ವರ್ಷದ ಬಳಿಕ ವಿಚ್ಛೇದನ ನೀಡಿದ ಅರ್ಜಿಯನ್ನು ಕೋರ್ಟ್ ನಿಂದ ಈ ದಂಪತಿ ಹಿಂಪಡೆದುಕೊಂಡರು. ಬಳಿಕ ಕಾರ್ಯಕ್ರಮಗಳಲ್ಲಿಯೂ ಕೂಡ ಈ ಜೋಡಿ ಹೆಚ್ಚು ಕಾಣಿಸಿಕೊಳ್ಳುತ್ತಾ ಹೊಯ್ತು, ದಾಂಪತ್ಯ ಜೀವನದಲ್ಲಿ ಮತ್ತೆಂದೂ ಸಮಸ್ಯೆ ಕಾಣದ ರೀತಿ ಜೀವನ ಮಾಡುತ್ತಾ ಬಂದರು.

Sudeep-Marriage

ಹೌದು ‘ಪ್ರಿಯಾ ಬರ್ತ್ ಡೇ ಸೆಲೆಬ್ರೇಶನ್ ನಡೆದಾಗ. ಪತ್ನಿ ಬರ್ತ್ ಡೇಗೆ ಕಾಮನ್ ಡಿಪಿ ಮಾಡಿ, ಅದನ್ನು ಮಂಜು ವಾರಿಯರ್ ಕೈಲಿ ಬಿಡುಗಡೆ ಮಾಡಿಸಿದ್ದರು ಕಿಚ್ಚ ಸುದೀಪ್. ತದನಂತರ ಬಹಳ ರೊಮ್ಯಾಂಟಿಕ್ ಆದ ಕವಿತೆಯೊಂದನ್ನು ಬರೆದು, ಅದನ್ನು ಸೊಗಸಾಗಿ ಹಾಡಿ, ಪತ್ನಿ ಪ್ರಿಯಾ ಅವ್ರಿಗೆ ಸರ್ಪೈಸ್ ಉಡುಗೊರೆ ನೀಡಿದರು. ಒಬ್ಬ ಹಸ್ಬೆಂಡ್ ಆದವರು,

 ಇದಕ್ಕಿಂತ ರೊಮ್ಯಾಂಟಿಕ್ ಆಗಿ ತನ್ನ ಪತ್ನಿಯ ಬರ್ತ್ ಡೇಗೆ ಗಿಫ್ಟ್ ಕೊಡಲು ಸಾಧ್ಯವಿಲ್ಲ ಅನ್ನೋವಷ್ಟು ಗಾಢ ಪ್ರೀತಿಯ ಘಮವಿದ್ದ ಪತ್ರವದು. ಹೀಗಿರುವಾಗ ಇದೀಗ ಕಿಚ್ಚ ಸುದೀಪ್ ಅವರ ದಾಂಪತ್ಯ ಜೀವನ ಚೆನ್ನಾಗಿ ನಡೆಯುತ್ತಿದ್ದು, ಯಾವ ಸಮಸ್ಯೆ ಇಲ್ಲದೆ ಈ ಜೋಡಿ ಕೆಲವರಿಗೆ ಮಾದರಿ ಕೂಡ ಆಗಿದೆ. ಹೌದು ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಈ ಮಾಹಿತಿ ಇಷ್ಟವಾದಲ್ಲಿ ಶೇರ್ ಕೂಡ ಮಾಡಿ ಧನ್ಯವಾದಗಳು….

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •