ರೈತರು ತಮ್ಮ ಜಮೀನಿನಲ್ಲಿ ಸಣ್ಣ ಹನಿ ನೀರಾವರಿ ಮಾಡಲು ಕೆ ಕಿಸಾನ್ ಕರ್ನಾಟಕ ಕೃಷಿ ಇಲಾಖೆಯಿಂದ ಸಬ್ಸಿಡಿ ಸಾಲವನ್ನು ಪಡೆಯಬಹುದು. ಹಾಗಾದರೆ ಸಾಲವನ್ನು ಪಡೆಯಲು ಕಂಪ್ಯೂಟರ್ ನಲ್ಲಿ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಹಾಗೂ ಅರ್ಜಿಸಲ್ಲಿಸಲು ಯಾವೆಲ್ಲಾ ದಾಖಲಾತಿಗಳು ಬೇಕಾಗುತ್ತದೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಜಮೀನಿನಲ್ಲಿ ಬೆಳೆ ಬೆಳೆಯಬೇಕಾದರೆ ನೀರು ಮುಖ್ಯವಾಗಿ ಬೇಕಾಗುತ್ತದೆ. ನೀರಾವರಿ ಮಾಡಲು ಹಣ ಬೇಕಾಗುತ್ತದೆ. ಸಣ್ಣ ಹನಿ ನೀರಾವರಿ ಮಾಡಲು ಸರ್ಕಾರ ಸಾಲ ನೀಡುತ್ತದೆ. ಮೊದಲು ಕಂಪ್ಯೂಟರ್ ನಲ್ಲಿ ಕರ್ನಾಟಕ ಕೃಷಿ ಇಲಾಖೆಯ ವೆಬ್ ಸೈಟ್ ಓಪನ್ ಮಾಡಬೇಕು ಅದರಲ್ಲಿ ಮೂರನೇ ಆಪ್ಷನ್ ಮೈಕ್ರೋ ಇರಿಗೇಷನ್ ಅಪ್ಲಿಕೇಶನ್ ರಿಜಿಸ್ಟ್ರೇಷನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಒಂದು ಪೇಜ್ ಓಪನ್ ಆಗುತ್ತದೆ ಅಲ್ಲಿ ಸೂಕ್ಷ್ಮ ನೀರಾವರಿ ಅರ್ಜಿ ನಮೂದು ಎಂದು ಇರುತ್ತದೆ ಅಲ್ಲಿ ಒಂದು ಬಾಕ್ಸ್ ನಲ್ಲಿ ರೈತರ ನೋಂದಣಿ ಸಂಖ್ಯೆಯನ್ನು ಹಾಕಬೇಕು. ನಂತರ ಗೆಟ್ ಡೀಟೇಲ್ಸ್ ಎಂಬ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಬೇಕು. ನಂತರ ಆಧಾರ್ ನಂಬರ್ ಲಿಂಕ್ ಇರುವ ಮೊಬೈಲ್ ನಂಬರ್ ಗೆ ಒಂದು ಓಟಿಪಿ ಬರುತ್ತದೆ ಅದನ್ನು ಎಂಟ್ರಿ ಮಾಡಿ ವೇರಿಫೈ ಅಂಡ್ ಕಂಟಿನ್ಯೂ ಎಂಬ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಬೇಕು.

ನಂತರ ಒಂದು ಅಪ್ಲಿಕೇಷನ್ ಓಪನ್ ಆಗುತ್ತದೆ ಮೊದಲಿಗೆ ಫಾರ್ಮರ್ ಐಡಿ ಅಥವಾ ಆಧಾರ್ ಕಾರ್ಡ್ ನಂಬರ್ ಅನ್ನು ಎಂಟ್ರಿ ಮಾಡಿ ಗೆಟ್ ಡೀಟೇಲ್ಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು ಆಗ ರೈತನ ಹೆಸರು, ಫಾರ್ಮರ್ ಐಡಿ, ವಿಳಾಸ, ಜಮೀನಿನ ವಿವರ, ಬ್ಯಾಂಕ್ ವಿವರ ಮುಂತಾದ ಕೆಲವು ವೈಯಕ್ತಿಕ ಮಾಹಿತಿಗಳು ಬರುತ್ತದೆ, ಅದು ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ನಂತರ ನೆಕ್ಸ್ಟ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಸೂಕ್ಷ್ಮ ನೀರಾವರಿ ವಿವರ ಎಂದು ಕಾಣಿಸುತ್ತದೆ ಅಲ್ಲಿ ನಿಮ್ಮ ಜಮೀನಿನ ವಿವರ ಇರುತ್ತದೆ, ಅಲ್ಲಿ ಆರ್ಥಿಕ ವರ್ಷ ಎಂದು ಇರುವಲ್ಲಿ 2021- 2022 ಎಂದು ಸೆಲೆಕ್ಟ್ ಮಾಡಬೇಕು. ಸೂಕ್ಷ್ಮ ನೀರಾವರಿ ಘಟಕ ಎಂದು ಇರುತ್ತದೆ ಅಲ್ಲಿ ಡ್ರಿಪ್ ಎಂದು ಸೆಲೆಕ್ಟ್ ಮಾಡಬೇಕು.

ನಂತರ ಡ್ರಿಪ್ ನ ಸೈಜ್ ಎಂಟ್ರಿ ಮಾಡಬೇಕು. ನಂತರ ಎಷ್ಟು ಹೆಕ್ಟೇರ್ ಗೆ ನೀರಾವರಿ ಮಾಡುತ್ತಿದ್ದೀರಾ ಎಂಬುದನ್ನು ಎಂಟ್ರಿ ಮಾಡಬೇಕು. ಬೆಳೆಯ ಹೆಸರನ್ನು ಮತ್ತು ನೀರಿನ ಮೂಲ ಯಾವುದು, ಸಹಾಯಧನದ ಮೊತ್ತವನ್ನು ಎಂಟ್ರಿ ಮಾಡಬೇಕು. ನಂತರ ಯಾವ ಕಂಪನಿಯ ಇರಿಗೇಷನ್ ಮಾಡಿಸುತ್ತಿದ್ದೀರಾ ಆ ಕಂಪನಿಯ ಹೆಸರನ್ನು ಮತ್ತು ಮಟೀರಿಯಲ್ಸ್ ಖರೀದಿಸಿದ ಏಜೆನ್ಸಿ ಹೆಸರನ್ನು ಎಂಟ್ರಿ ಮಾಡಬೇಕು. ನಂತರ ಮೂರು ಆಪ್ಷನ್ ಕಾಣಿಸುತ್ತದೆ ಅದನ್ನು ಓದಿ ನೋ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಸಬ್ ಮಿಟ್ ಅಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಕನೋಲೇಜ್ಮೆಂಟ್ ರಿಸಿಟ್ ಬರುತ್ತದೆ ಅದನ್ನು ಪ್ರಿಂಟ್ ತೆಗೆದು ಇಟ್ಟುಕೊಳ್ಳಬೇಕು. ಈ ಮಾಹಿತಿಯನ್ನು ತಪ್ಪದೆ ಎಲ್ಲಾ ರೈತ ಬಾಂಧವರಿಗೆ ತಿಳಿಸಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •