ಮಹಾಭಾರತ ಗ್ರಂಥದಲ್ಲಿ ಮನುಷ್ಯನು ಊಟ ಮಾಡುವ ವೇಳೆ ಪಾಲಿಸಬೇಕಾದ ಕೆಲವು ನಿಯಮಗಳನ್ನು ತಿಳಿಸಿದ್ದಾರೆ. ಒಂದು ವೇಳೆ ಮನುಷ್ಯನು ಈ ನಿಯಮಗಳನ್ನು ಪಾಲಿಸುತ್ತಾ ಬಂದರೆ ಅವರಿಗೆ ಆರೋಗ್ಯದ ಜೊತೆ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿ, ಧನ ಸಂಪತ್ತು, ಎಲ್ಲಾ ರೀತಿಯಾದಂತಹ ಸೌಕರ್ಯಗಳು ಸಿಗುತ್ತದೆ ಎಂದು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ. ಈ ನಿಯಮಗಳು ವೈಜ್ಞಾನಿಕ ದೃಷ್ಟಿ ಕೋನದಿಂದಲೂ ಕೂಡ ಪರಿಪೂರ್ಣವಾಗಿದೆ‌. ಈ ರೀತಿಯಾಗಿ ಊಟ ಮಾಡುವುದರಿಂದ ಮನುಷ್ಯನಿಗೆ ಎಲ್ಲಾ ಸಕಲ ದೇವಾನು ದೇವತೆಗಳ ಆಶೀರ್ವಾದವನ್ನು ಪಡೆದುಕೊಳ್ಳುತ್ತಾನೆ. ಹಾಗಾಗಿ ನೀವು ಊಟ ಮಾಡುವ ಮುಂಚೆ ಈ ನಿಯಮವನ್ನು ಖಂಡಿತವಾಗಿಯೂ ಕೂಡ ಪಾಲಿಸಬೇಕಾಗುತ್ತದೆ. ಊಟ ಮಾಡುವ ಮುನ್ನ 5 ಅಂಗಗಳಾದ ಕೈ, ಕಾಲು, ಮತ್ತು ಮುಖವನ್ನು ಚೆನ್ನಾಗಿ ತೊಳೆದುಕೊಂಡು ಊಟಕ್ಕೆ ಕೂರಬೇಕು.

ಊಟ ಮಾಡುವ ಮುನ್ನ ಅನ್ನದ ದೇವತೆಯಂತಹ ಅನ್ನಪೂರ್ಣೇಶ್ವರಿ ದೇವಿಯನ್ನು ನೆನೆದು ಅವರಿಗೆ ಧನ್ಯವಾದಗಳು ಹೇಳಿ ಎಲ್ಲಾ ಹಸಿದ ಪ್ರಾಣಿಗಳ ಹೊಟ್ಟೆ ತುಂಬಲಿ ಅಂತ ದೇವರನ್ನು ಬೇಡಿಕೊಂಡು ನಂತರ ನೀವು ಊಟವನ್ನು ಪ್ರಾರಂಭ ಮಾಡಬೇಕು. ಅಡುಗೆ ಮಾಡುವ ಮಹಿಳೆಯರು ಮೊದಲು ಸ್ನಾನ ಮಾಡಿಕೊಂಡು ಶುದ್ದ ಮನಸ್ಸಿನಿಂದ ಭೋಜನವನ್ನು ತಯಾರಿ ಮಾಡಬೇಕಾಗುತ್ತದೆ. ಎಲ್ಲಾದಕ್ಕಿಂತ ಮುಖ್ಯವಾಗಿ ಮೂರು ರೊಟ್ಟಿಗಳನ್ನು ತಯಾರಿ ಮಾಡಿ ಒಂದು ಗೋಮಾತೆಗೆ, ಮತ್ತೊಂದು ನಾಯಿಗೆ, ಹಾಗೂ ಕೊನೆಯದಾಗಿ ಕಾಗೆಗೆ ಈ ರೊಟ್ಟಿಗಳನ್ನು ನೀಡಬೇಕಾಗುತ್ತದೆ. ನಂತರ ಅಗ್ನಿ ದೇವರಿಗೆ ನೈವೇದ್ಯವನ್ನು ಮಾಡಿ ನಂತರ ಊಟವನ್ನು ಬಡಿಸಬೇಕು. ಇನ್ನೂ ಸಧ್ಯವಾದಷಗಟು ಎಲ್ಲರೂ ಅಡುಗೆ ಮನೆಯಲ್ಲಿ ಕುಳಿತು ಎಲ್ಲರೊಂದಿಗೆ ಊಟ ಮಾಡಬೇಕು. ಆದಷ್ಟು ನೀವು ನಿಮ್ಮ ಕುಟುಂಬದ ಜೊತೆ ಒಟ್ಟಾಗಿ ಸೇರಿಕೊಂಡು ಊಟ ಮಾಡಲು ಪ್ರಯತ್ನವನ್ನು ಮಾಡಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •