ಕನಸಿನಲ್ಲಿ ಯಾವ ವಿಷಯಗಳು ಗಂಡಸರಿಗಾಗಲಿ ಅಥವ ಹೆಂಗಸರಿಗಾಗಲಿ ಕಾಣಬಾರದು ಕನಸಿನಲ್ಲಿ ಚಿಕ್ಕ ಮಕ್ಕಳು ಕಾಣುವುದು ಗಂಡಸರಿಗೆ ಎಷ್ಟು ಉತ್ತಮ ಹಾಗೂ ಹೆಂಗಸರಿಗೆ ಎಷ್ಟು ಉತ್ತಮ ಎಂಬುದು ಎಲ್ಲರಲ್ಲೂ ಮೂಡುತ್ತದೆ. ಯಾಕೆಂದರೆ ಗಂಡುಮಕ್ಕಳಿಗೆ ಕನಸಿನಲ್ಲಿ ಮಗು ಅಳುವಂತದ್ದು, ಚಿಕ್ಕ ಮಕ್ಕಳು ಸಾಯುವಂತದ್ದು, ಸಾಮಾನ್ಯವಾಗಿ 5 ವರ್ಷದ ಒಳಗಿನ ಮಕ್ಕಳು ಕನಸಿನಲ್ಲಿ ಕಾಣಬಾರದು.

ಒಂದು ವೇಳೆ ನಿಮ್ಮ ಕನಸಿನಲ್ಲಿ ಕಂಡರೂ ಮಗು ಅಳಬಾರದು ಮತ್ತು ಸಾಯಬಾರದು. ಈ ರೂಪದಲ್ಲಿ ಏನಾದರೂ ಗಂಡಸರಿಗೆ ಕನಸು ಬಿದ್ದರೆ ಇದರಿಂದ ಅವರಿಗೆ ದರಿದ್ರತನ ಪ್ರಾರಂಭವಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಯಾವ ರೀತಿ ಎಂದರೆ ಅವರ ಮೇಲೆ ವಾಮಾಚಾರ ಆಗುತ್ತಿದೆ, ಅವರ ಮನೆಯಲ್ಲಿ ಇರುವಂತಹ ಮಕ್ಕಳಿಗೆ ತೊಂದರೆಯಾಗುತ್ತದೆ, ಮನೆಯಲ್ಲಿರುವ ಹಿರಿಯರಿಗೆ ತೊಂದರೆಯಾಗುತ್ತದೆ ಮತ್ತು ಮನೆಯ ಯಜಮಾನನಿಗೆ ಆರೋಗ್ಯಹಾನಿ, ಮಾನಹಾನಿ, ದುಃಖ, ಧನ ಸಂಪತ್ತು ನಷ್ಟ, ದರಿದ್ರತನ ಬರುತ್ತದೆ ಎಂಬುದನ್ನು ಸೂಚಿಸುತ್ತದೆ. ಯಾಕೆ ಮಕ್ಕಳ ರೂಪದಲ್ಲಿ ಬರುತ್ತದೆ ಎಂದರೆ ನಿಮ್ಮ ಕುಲದೇವತೆಯೂ ನಿಮ್ಮನ್ನು ಎಚ್ಚರಿಸಲು ಮಕ್ಕಳ ರೂಪದಲ್ಲಿ ಕನಸಿನಲ್ಲಿ ಬಂದು ಸೂಚಿಸುತ್ತದೆ.

ಇದೇ ರೀತಿಯ ಮಕ್ಕಳು ಹೆಂಗಸರ ಕನಸಿನಲ್ಲಿ ಬಂದರೆ ಅದರಲ್ಲೂ ತುಂಬಿದ ಗರ್ಭಿಣಿಯರ ಕನಸಿನಲ್ಲಿ ಬಂದರೆ ಗರ್ಭಪಾತವಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಇದರಿಂದ ಅವರಿಗೆ ರಕ್ತಹೀನತೆ, ಸಂತಾನ ದೋಷ, ಗರ್ಭಕ್ಕೆ ಭೂತದ ದೃಷ್ಟಿ ಇದೆ ಎಂಬುದನ್ನು ತೋರಿಸುತ್ತದೆ.
ಮೊದಲಿಗೆ ನಿಮ್ಮ ಕುಲದೇವತೆಯು ನಿಮ್ಮ ಕನಸಿನಲ್ಲಿ ಬಂದು ಎಚ್ಚರಿಸಲು ಪ್ರಯತ್ನ ಪಡುತ್ತಾರೆ,ನೀವೇನಾದರೂ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನದಲ್ಲಿ ಗರ್ಭಿಣಿಯರಿಗೆ ಗರ್ಭಪಾತವಾಗುತ್ತದೆ ಎಂಬುದನ್ನು ಸೂಚಿಸುತ್ತದೆ.

ಹಾಗೆ ಕನಸಿನಲ್ಲಿ ಇನ್ನೂ ಕೆಲವೊಂದು ವಸ್ತುಗಳು ಕಾಣಬಾರದು ಅವು ಯಾವುವೆಂದರೆ ಮೆಟ್ಟಲು ಹತ್ತಿಕೊಂಡುಹೋಗುವುದು ಕಾಣಬಾರದು, ಮಾಂಸಹಾರವನ್ನು ಸೇವಿಸುವುದು ಕಾಣಬಾರದು, ಹರಿಯುವಂತಹ ನದಿ ನೀರು ಕಾಣಬಾರದು, ಸರ್ಪಗಳು ನಮ್ಮನ್ನು ಕಚ್ಚುವಂತೆ ಕಾಣಬಾರದು, ಒಂದು ವೇಳೆ ಹಂದಿಯು ಮನೆಯೊಳಗೆ ಪ್ರವೇಶವಾಗುವುದು ನಿಮ್ಮ ಕನಸಿನಲ್ಲಿ ಬಿದ್ದರೆ ಅದೃಷ್ಟ, ಆದರೆ ಅದೇ ಹಂದಿಗಳು ನಮ್ಮನ್ನು ಗುದ್ದುವಂತಹ ರೂಪದಲ್ಲಿ ಕಾಣಬಾರದು ಏಕೆಂದರೆ ಇದರಿಂದ ನಮ್ಮ ಜೀವನದಲ್ಲಿ ತೊಂದರೆಯಾಗುತ್ತದೆ ಎಂಬುದನ್ನು ತಿಳಿಸುತ್ತದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •